Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉಳಿತಾಯ ಮಾಡಬೇಕು ಎಂದುಕೊಂಡವರಿಗೆ ಪೋಸ್ಟ್ ಆಫೀಸ್ ನಲ್ಲಿದೆ ಯೋಜನೆ : ಸಾವಿರದಲ್ಲಿ ಉಳಿಸಿ ಲಕ್ಷ ತಗೊಳಿ..!

---Advertisement---

ಜೀವನ ಮಾಡಬೇಕು ಅಂದ್ರೆ ಹಣ ಬಹಳ ಮುಖ್ಯ. ಈಗಂತು ಎಲ್ಲವೂ ದುಬಾರಿ. ಬರುವ ಸಂಬಳದಲ್ಲಿ ದೊಡ್ಡಮಟ್ಟಕ್ಕೆ ಉಳಿಕೆ ಮಾಡಲು ಸಾಧ್ಯವಿಲ್ಲದೆ ಹೋದರು ಭವಿಷ್ಯಕ್ಕಾಗಿ ಸ್ವಲ್ಪ ಉಳಿತಾಯ ಮಾಡಲೇಬೇಕು. ಹೀಗಾಗಿ ಒಂದಷ್ಟು ಯೋಜನೆಗಳಲ್ಲಿ ಯಾವುದು ಸಾಧ್ಯವಾಗುತ್ತದೆಯೋ ಅದರಲ್ಲಿ ಉಳಿತಾಯ ಮಾಡುವುದು ಉತ್ತಮ. ಫ್ಯೂಚರ್ ನಲ್ಲಿ ಚೆನ್ನಾಗಿರಬೇಕು ಅಂದ್ರೆ ಪೋಸ್ಟ್ ಆಫೀಸಲ್ಲಿರುವ ಸ್ಕೀಮ್ ಗಳನ್ನ ಬಳಸಿಕೊಳ್ಳಿ.

ಅದರಲ್ಲಿ ಪೋಸ್ಟ್ ಆಫೀಸ್ ರೆಕರಿಂಗ್ ಡಿಪಾಸಿಟ್ ಬೆಸ್ಟ್ ಎನ್ನಲಾಗುತ್ತದೆ. ಇದು ಬ್ಯಾಂಕ್ ಗಳಲ್ಲಿ ಆರ್ಡಿ ರೀತಿ. ಹಾಗಾದ್ರೆ ಈ ಸ್ಕೀಮ್ ಹೇಗೆ ಸಹಾಯ ಮಾಡುತ್ತದೆ‌ ಎಂಬುದನ್ನು ನೋಡೋಣಾ. ರೆಕರಿಂಗ್ ಡೆಪಾಸಿಟ್ ಅಕೌಂಟ್ ನಲ್ಲಿ ನೀವೂ ಪ್ರತಿ ತಿಂಗಳು ನಿಗದಿತ ಹಣವನ್ನು ಠೇವಣಿ ಇಡುತ್ತಾ ಹೋಗಬಹುದು. ಪೋಸ್ಟ್ ಆಫೀಸ್ ನ ಆರ್ಡಿ ಸ್ಕೀಮ್ 60 ತಿಂಗಳ ಅಂದ್ರೆ 5 ವರ್ಷ ಅವಧಿಯದ್ದಾಗಿರುತ್ತದೆ. ನೀವೂ 60 ತಿಂಗಳು ಹಣ ಪಾವತಿ‌ ಮಾಡಿದರೆ ನಿಮಗೆ ಒಟ್ಟಿಗೆ ಹಣವನ್ನು ರಿಟರ್ನ್ ಪಡೆಯಬಹುದಾಗಿರುತ್ತದೆ.

ಅಂದ್ರೆ ಇದರಲ್ಲಿ ವರ್ಷಕ್ಕೆ ಶೇಜಡ 6.7ರ ಬಡ್ಡಿದರ ನಿಗದಿಯಾಗಿದೆ. ಪ್ರತೀ ಕ್ವಾರ್ಟರ್ ಗೆ ಸರ್ಕಾರವು ಬಡ್ಡಿದರ ಪರಿಷ್ಕರಿಸುತ್ತಿರುತ್ತದೆ. ಈ ಸ್ಕೀಮ್ ನಲ್ಲಿ ತಿಂಗಳಿಗೆ ಕನಿಷ್ಠ 100 ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಇದರಲ್ಲಿ ಗರಿಷ್ಠ ಹೂಡಿಕೆಯ ಮಿತಿ ಇರುವುದಿಲ್ಲ. ನೀವೂ ಪೋಸ್ಟಗ ಆಫೀಸ್ ನಲ್ಲಿ ಆರ್ಡಿ ಅಕೌಂಟ್ ತೆರೆದು ತಿಂಗಳಿಗೆ 10,000 ರೂಪಾಯಿಯಂತೆ ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ ನಿಮಗೆ 7,13,659 ರೂಪಾಯಿ ರಿಟರ್ನ್ ಬರಲಿದೆ. 60 ತಿಂಗಳಿಗೆ ಆರ್ಡಿ ಅಕೌಂಟ್ ಗೆ 6 ಲಕ್ಷ ಹೂಡಿಕೆ ಮಾಡಿದರೆ 5 ವರ್ಷಕ್ಕೆ ನಿಮಗೆ ಸಿಗುವ ಬಡ್ಡಿ 1,13,659 ರೂಪಾಯಿ ಆಗಿರುತ್ತದೆ. ಹೀಗಾಗಿ ಮುಂದಿನ ಜೀವನಕ್ಕಾಗಿ ಈ ರೀತಿಯ ಸ್ಕೀಮ್ ಗಳಲ್ಲಿ ಹಣವನ್ನ ಹೂಡಿಕೆ ಮಾಡುವುದು ಉತ್ತಮ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment