Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಆರೋಗ್ಯಪೂರ್ಣ ಹಲ್ಲುಗಳಿಗಾಗಿ ಆಹಾರ : ಡಾ.ಕೆ.ವಿ. ಸಂತೋಷ್ ಅವರ ವಿಶೇಷ ಲೇಖನ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಒಂದು ಆರೋಗ್ಯವಂತ ದೇಹ ಹೊಂದಲು ಆರೋಗ್ಯ ಪೂರ್ಣ ಬಾಯಿ,ಹಲ್ಲುಗಳು ಕಡ್ಡಾಯವಾಗಿ ಇರಲೇಬೇಕಾಗುತ್ತದೆ. ಆಗ ಮಾತ್ರ ದೇಹವು ಸದಾಕಾಲ ಆರೋಗ್ಯದ ಸ್ಥಿತಿಯಲ್ಲಿ ಇರುತ್ತದೆ. ಇಂತಹ ಆರೋಗ್ಯ ಸ್ಥಿತಿಯ ಬಾಯಿ ಮತ್ತು ಹಲ್ಲು ಪಡೆಯಲು ಸದಾಕಾಲ ಪ್ರತಿಯೊಬ್ಬರು ಕೆಲವು ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸುಂದರ ನಗುವು ಆರೋಗ್ಯವಂತ ಹಲ್ಲುಗಳನ್ನು ಹೊಂದಿರುವುದನ್ನು ಸೂಚಿಸುತ್ತದೆ.

 

ಇದಕ್ಕಾಗಿ ಉತ್ತಮ ಆಹಾರ ಸೇವನೆ, ದಂತ ಆರೋಗ್ಯ ಕಾಪಾಡಿಕೊಳ್ಳುವುದು ಹಾಗೂ ನಿಯಮಿತವಾಗಿ ದಂತ ವೈದ್ಯರ ಭೇಟಿ ಮಾಡಿ ಅಗತ್ಯ ಸಲಹೆ ಸೂಚನೆ ಪಾಲಿಸುವುದು.. ಬಹು ಮುಖ್ಯವಾಗಿರುತ್ತದೆ.
ಬಾಯಿಯ ಸ್ವಚ್ಛತೆ ಎಂಬುದು ಬಾಲ್ಯದಿಂದಲೇ ಶುರುವಾಗುವ ಒಂದು ಬಹುಮುಖ್ಯ ಕೆಲಸವಾಗಿದೆ.
ಆರೋಗ್ಯಪೂರ್ಣ ಹಲ್ಲು ಬಾಯಿಗೆ ಉತ್ತಮ ಆಹಾರವನ್ನು ಯಾವ ರೀತಿಯಲ್ಲಿ ಯಾವ ಕ್ರಮದಲ್ಲಿ ಸೇವಿಸಬೇಕು ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಂಡಾಗ ಆಗಬಹುದಾದ ತೊಂದರೆಗಳನ್ನು ತಡೆಗಟ್ಟಬಹುದಾಗಿರುತ್ತದೆ. ನಾವು ಸೇವಿಸುವ ಆಹಾರ, ಪಾನೀಯಗಳು ಹಲ್ಲಿನ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

 

ಹಲ್ಲಿನ ಆರೋಗ್ಯ ಕಾಪಾಡಲು ನಾವು ಯಾವ ರೀತಿಯ ಆಹಾರವನ್ನು ಸೇವಿಸಬೇಕೆಂಬುದನ್ನು ತಿಳಿದುಕೊಳ್ಳಬೇಕಾಗಿದೆ.

* ಕಾಫಿ ಟೀ ಸೇವನೆ ಅತ್ಯಂತ ಕನಿಷ್ಠ ಮಟ್ಟದಲ್ಲಿ ಇರಬೇಕು. ಇದರಲ್ಲಿನ ಸಕ್ಕರೆ ಅಂಶವೂ ಅಲ್ಲಿನ ಮೇಲ್ಪದರದಲ್ಲಿ ಉಳಿದುಕೊಂಡು ದುರ್ವಾಸನೆ ಹಾಗೂ ಸೋಂಕು ತರುವ ಸಾಧ್ಯತೆ ಇರುತ್ತದೆ. ಕಾಫಿ- ಟೀ ಸೇವನೆ ನಂತರ ನೀರನ್ನು ಹಾಕಿ ಬಾಯಿಯನ್ನು ಸಾಧ್ಯವಾದಷ್ಟು ಮುಕ್ಕಳಿಸಿ ಉಗಿದು ಬಿಡಬೇಕು. ಹಲ್ಲಿನ ಮೇಲೆ ಕಲೆ ಉಳಿಯಲು ಇದರ ಅಂಶವು ಕಾರಣವಾಗಿರುತ್ತದೆ. ಕಾಫಿ ಟೀ ಸೇವನೆ ಹೆಚ್ಚಾಗಿ ಎಂದಿಗೂ ಮಾಡಬಾರದು.

* ಸಂಸ್ಕರಿತ ಹಣ್ಣಿನ ರಸಗಳು, ಕಾರ್ಬೋನೇಟೆಡ್ ರಸಗಳಾದ ಕೋಕೋ ಕೋಲಾ, ಪೆಪ್ಸಿ, ಬಾಟಲಿಯಲ್ಲಿ ಬರುವ ಮಾವಿನ ರಸಗಳಲ್ಲಿ … ಇದರಲ್ಲಿರುವ ಕೃತಕ ಬಣ್ಣ ಹಾಗೂ ಆಮ್ಲಿಯ ಗುಣಲಕ್ಷಣವು ಹಲ್ಲಿನ ಮೇಲ್ಪದರವನ್ನು ದಿನೇ ದಿನೇ ಕರಗಿಸಿ ಬಿಡುತ್ತದೆ. ಇದರಲ್ಲಿರುವ ಸಕ್ಕರೆ ಅಂಶ ಹಲ್ಲು ಹುಳುಕು ಹಿಡಿಯಲು ಕಾರಣವಾಗುತ್ತದೆ. ಇದರ ಬದಲು ತಾಜಾ ಹಣ್ಣು ಹಾಗೂ ಮನೆಯಲ್ಲೇ ಹಣ್ಣಿನ ರಸವನ್ನು ತಯಾರು ಮಾಡಿ ಕುಡಿಯುವುದು ಒಳ್ಳೆಯದು. ಎಂದಿಗೂ ಇವುಗಳಿಗೆ ಸಕ್ಕರೆ ಸೇರಿಸಬಾರದು.

* ಆಲೂಗಡ್ಡೆ ಚಿಪ್ಸ್,ಕುರ್ಕುರೆ, ಫ್ರೆಂಚ್ಸ್, ಫ್ರೈ,ಪ್ಯಾಕೆಟ್ ಗಳಲ್ಲಿ ಬರುವ ಸಂಸ್ಕರಿತ ಆಹಾರ ತಿನ್ನಿಸುಗಳು… ಎಂದಿಗೂ ಸೇವನೆ ಮಾಡಬಾರದು. ಇವುಗಳು ಹಲ್ಲಿನ ಸಂಧಿಗಳಲ್ಲಿ,ಹಲ್ಲಿನ ಮೇಲ್ಪದರಕ್ಕೆ ಗಾಢವಾಗಿ ಅಂಟಿಕೊಳ್ಳುತ್ತವೆ. ಹಲ್ಲಿನ ಸೋಂಕು ಹಲ್ಲಿನ ಹುಳುಕು ಆಗಲು ಸಕ್ಕರೆ ಅಂಶಕ್ಕಿಂತ ಹೆಚ್ಚಾಗಿ ಆಲೂಗಡ್ಡೆಯಲ್ಲಿ ಇರುವ ಸ್ಟಾರ್ಚ್ ಪಿಷ್ಟ ಅಂಶವೇ ಪ್ರಮುಖ ಕಾರಣವಾಗಿರುತ್ತದೆ.ಇದು ಕೂಡ ಹಲ್ಲು ಹುಳುಕು ಹಿಡಿಯಲು ಬೇಗ ಕಾರಣವಾಗುತ್ತದೆ. ಎಂದಿಗೂ ಆಲೂಗಡ್ಡೆಯ ಚಿಪ್ಸ್ ಗಳನ್ನು ತಿನ್ನಲೇಬಾರದು. ಇದ್ದರು ಅತ್ಯಂತ ಕನಿಷ್ಠ ಮಟ್ಟದಲ್ಲಿ ತಿನ್ನಬೇಕು.ಜೊತೆಗೆ ಹಲ್ಲಿನ ಮೇಲ್ಪದರದಲ್ಲಿ ಇವು ಉಳಿಯದಂತೆ ಹಾಗೂ ಇದರ ಅಂಶ ಇರದಂತೆ ನೀರಿನಿಂದ ಬಾಯಿಯನ್ನು ಸ್ವಚ್ಛ ಮಾಡಬೇಕು.

* ಐಸ್ ಕ್ರೀಮ್ ಹಾಗೂ ಐಸ್ ಕ್ಯಾಂಡಿಗಳನ್ನು ಕನಿಷ್ಠ ಮಟ್ಟದಲ್ಲಿ ಸೇವನೆ ಮಾಡಬೇಕು. ಹಲ್ಲಿನ ಅನಾರೋಗ್ಯ,ಹಲ್ಲಿನ ಸೋಂಕು,ಹಲ್ಲಿನ ಹುಳುಕು,ವಸಡಿನ ತೊಂದರೆಗಳಿಗೆ ಇವು ಕಾರಣವಾಗಿರುತ್ತದೆ. ಇದರಲ್ಲಿರುವ ಸಕ್ಕರೆ ಅಂಶವು ಹಲ್ಲಿನ ಮೇಲ್ಪದರದಲ್ಲಿ ಉಳಿಯುತ್ತದೆ.ಜೊತೆಗೆ ಹಲ್ಲಿನ ಪದರಗಳಿಗೆ ಕಿರಿಕಿರಿ ಉಂಟುಮಾಡುತ್ತದೆ. ಹಲ್ಲಿನಿಂದ ಗಡಸು ಐಸ್ ಕ್ಯಾಂಡಿಗಳನ್ನು ಕಚ್ಚಬಾರದು. ಮುರಿಯದೆ ಐಸ್ ಕ್ಯಾಂಡಿಗಳನ್ನು ಬಾಯಿಯಲ್ಲಿ ಸ್ವಲ್ಪವೇ ಕರಗಲು ಬಿಡಬೇಕು.

* ಸಿಟ್ರಿಕ್ ಆಮ್ಲ, ಕೃತಕ ಬಣ್ಣ ಕೃತಕ ಟೆಸ್ಟಿಂಗ್ ಪುಡಿ ಮುಂತಾದ ಆಮ್ಲಿಯ ಗುಣಲಕ್ಷಣದ ಸೋಡ ಹಾಗೂ ಬಣ್ಣ ಬಣ್ಣದ ಕಲರಿಂಗ್ ಅಂಶಗಳನ್ನು ಹಾಕಿರುವಂತಹ ಜ್ಯೂಸು ಎಂದು ಹೇಳಲಾಗುವ ಸಕ್ಕರೆ ಮಿಶ್ರಿತ ಕೃತಕ ಸೋಡಾ.. ಗಳಂತಹ ಅನಾರೋಗ್ಯ ಪೂರ್ಣ ಪಾನೀಯಗಳನ್ನು ಸೇವನೆ ಮಾಡಬಾರದು. ಇದರ ನಿರಂತರ ಸೇವನೆಯಿಂದ ಹಲ್ಲಿನ ಪದರಗಳು ಕರಗುತ್ತವೆ ಹಾಗೂ ಹಲ್ಲಿನ ಮೇಲ್ಮೈ ತೆರೆದುಕೊಂಡು ಹಲ್ಲುಗಳು ಸಂವೇದನೆ ಕೊಡುತ್ತವೆ.

 

ಏನು ಮಾಡಬೇಕು :
* ನೈಸರ್ಗಿಕ ಪಾನೀಯಗಳಾದ ರಾಗಿ ಅಂಬಲಿ,ರಾಗಿ ಗಂಜಿ, ಎಳನೀರು,ಮಜ್ಜಿಗೆ,ಹಾಲು ಹಣ್ಣಿನ ರಸ.. ಮುಂತಾದವುಗಳನ್ನು ಮಾತ್ರ ಸೇವಿಸಬೇಕು ಇದರಿಂದ ಹಲ್ಲಿನ ಆರೋಗ್ಯ ಹಾಗೂ ದೈಹಿಕ ಆರೋಗ್ಯ ಎರಡಕ್ಕೂ ಅನುಕೂಲಕರ.
* ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥ ಸೇವನೆ ಮಾಡಬೇಕು. ಹಸಿರು ತರಕಾರಿ, ಗಟ್ಟಿ ಮೊಸರು.. ಆರೋಗ್ಯಕರ ಹಲ್ಲುಗಳಿಗೆ ವರದಾನವಾಗಿದೆ.
* ಕ್ಯಾರೆಟ್, ಮೂಲಂಗಿ,ಹಸಿ ತರಕಾರಿ,ಸೌತೆಕಾಯಿ.. ಇವುಗಳನ್ನು ಆಹಾರದ ಜೊತೆಯಲ್ಲಿ ಸೇವನೆ ಮಾಡುವುದರಿಂದ ಯಥೇಚ್ಛ ಜೊಲ್ಲು ಸ್ರವಿಕೆ ಹಾಗೂ ಹಲ್ಲಿನ ಆರೋಗ್ಯ ನಿರಂತರವಾಗಿ ಕಾಯ್ದುಕೊಳ್ಳಲು ಅನುಕೂಲಕರ.
* ನೈಸರ್ಗಿಕ ಹಾಗೂ ತಾಜಾ ಹಣ್ಣುಗಳಾದ ಸೇಬು ಕಿತ್ತಳೆ ಮೋಸಂಬಿ.. ಇವುಗಳ ಬಳಕೆ ಯಥೇಚ್ಛವಾಗಿರಲಿ.
* ವಿಟಮಿನ್ ಸಿ ಹೊಂದಿರುವ ಹಾಗೂ ವಸಡು ರೋಗ ಬರದಂತೆ ತಡೆಯುವ (ಬಿಕ್ಕೆ) ಸೀಬೆಹಣ್ಣು ಬಳಕೆ ಪ್ರಯೋಜನಕಾರಿ.
* ಕಡ್ಲೆಬೀಜ,ಬಾದಾಮಿ, ಒಣ ಹಣ್ಣುಗಳು ಕೂಡ ಉತ್ತಮ ಹಲ್ಲಿನ ಆರೋಗ್ಯಕ್ಕೆ ಪೂರಕ.
* ಸಕ್ಕರೆ ರಹಿತ ಗ್ರೀನ್ ಟೀ ಬ್ಲಾಕ್ ಟೀ ಕೂಡ ದಂತ ರಕ್ಷಕವಾಗಿರುತ್ತವೆ.
* ಆಗಾಗ ಯಥೇಚ್ಛವಾಗಿ ನೀರು ಕುಡಿಯುತ್ತಿರಬೇಕು. ಏನೇ ಸೇವನೆ ಮಾಡಿದರೂ ಬಾಯಿಯನ್ನು ಸ್ವಚ್ಛ ಮಾಡಬೇಕು,ಜೊತೆಗೆ ಸಕ್ಕರೆ ಅಂಶ ಕನಿಷ್ಠ ಮಟ್ಟದಲ್ಲಿ ಇರುವಂತಹ ಪಾನೀಯಗಳನ್ನು ಮಾತ್ರ ಬಳಕೆ ಮಾಡಬೇಕು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now