Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಫುಡ್ ಡೆಲಿವರಿ ಬಾಯ್ ಥಳಿತ ವಿಚಾರ : ಸಿದ್ದರಾಮಯ್ಯರಿಗೆ ಟ್ವೀಟ್ ಮಾಡಿದ ಅಸ್ಸಾಂ ಸಿಎಂ

---Advertisement---

ಬೆಂಗಳೂರು: ಯಾವುದ್ಯಾವುದೋ ರಾಜ್ಯದಿಂದ ಬಂದವರಿಗೂ ಬೆಂಗಳೂರು ದೊಡ್ಡ ಮಟ್ಟದ ಅವಕಾಶ ನೀಡಿ, ಜೀವನ ಕಟ್ಟಿಕೊಳ್ಳಲು ನೆರವು ಮಾಡಿಕೊಟ್ಟಿದೆ‌. ಫುಡ್ ಡೆಲುವರಿ ಬಾಯ್ ಆಗಿ ಕೂಡ ಬೇರೆ ರಾಜ್ಯದವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತಿಚೆಗೆ ಅಸ್ಸಾಂ ಫುಡ್ ಡೆಲಿವರಿ ಬಾಯ್ ನನ್ನು ಕಟ್ಟಿ ಹಾಕಿ, ಥಳಿಸಲಾಗಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ಅಸ್ಸಾಂ ಸಿಎಂ ಹಿಂತ ಬಿಸ್ವಾ ಶರ್ಮಾ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ.

 

ಬಾಲಕಿಯೊಬ್ಬರ ಸುಳ್ಳು ಆರೋಪದಿಂದ ಅಸ್ಸಾಂ ಮೂಲದ ಫುಡ್ ಏಜೆಂಟ್ ಕಿರುಕುಳ ಅನುಭವಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಏಜೆಂಟ್ ಗೆ ಸೂಕ್ತ ನ್ಯಾಯ ಕೊಡಿಸಿ, ರಕ್ಷಣೆ ಕೊಡಬೇಕಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಅಸ್ಸಾಂ ಸಿಎಂ ಮನವಿ ಮಾಡಿದ್ದಾರೆ.

ಇದೇ ಜೂನ್ 12ರಂದು ಈ ಘಟನೆ ನಡೆದಿತ್ತು. ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್ಮೆಂಟ್ ಒಂದರಲ್ಲಿ ಬಾಲಕಿಯೊಬ್ಬಳು ಟೆರೆಸ್ ಮೇಲೆ ಆಟವಾಡುತ್ತಿದ್ದಳು. ಆದರೆ ಮನೆಯವರು ಹುಡುಕಾಡಿದರು ಸಿಕ್ಕಿರಲಿಲ್ಲ. ಬಳಿಕ ಸಿಕ್ಕ ಮೇಲೆ ಕೇಳಿದ್ದಕ್ಕೆ ಫುಡ್ ಡೆಲಿವರಿ ಬಾಯ್ ಟೆರೆಸ್ ಮೇಲೆ ಎಳೆದುಕೊಂಡು ಹೋಗಿದ್ರು ಎಂದಿದ್ದಳು. ಬಳಿಕ ಡೆಲಿವರಿ ಬಾಯ್ ನನ್ನು ಕಟ್ಟಿ ಹಾಕಿ, ಥಳಿಸಿದ್ದರು. ಬಳಿಕ ಫುಡ್ ಡೆಲಿವರಿ ಏಜೆಂಟ್ ಗಳು ಪ್ರತಿಭಟನೆ ಮಾಡಿದ್ದರು. ಅಪಾರ್ಟ್ಮೆಂಟ್ ಸಿಸಿಟಿವಿ ನೋಡಿದಾಗ ಬಾಲಕಿಯೊಬ್ಬಳೆರ ಟೆರೆಸ್ ಗೆ ಹೋಗಿದ್ದು ತಿಳಿದಿತ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...