ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಂಕ್ ಖಾತೆಯ ವಿವರಗಳು, ವೈಯಕ್ತಿಕ ಫೋಟೋಗಳು ಹಾಗೂ ಪ್ರಮುಖ ದಾಖಲೆಗಳು ಸಂಗ್ರಹವಾಗಿರುತ್ತವೆ. ಇದೇ ಕಾರಣಕ್ಕೆ ಸೈಬರ್ ಅಪರಾಧಿಗಳು ಮತ್ತು ಹ್ಯಾಕರ್ಸ್ ಬಳಕೆದಾರರ ಫೋನ್‌ಗಳ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಸಣ್ಣ ತಪ್ಪಿನಿಂದಲೂ ನಿಮ್ಮ ಖಾಸಗಿ ಮಾಹಿತಿ ಸೋರಿಕೆಯಾಗುವ ಅಥವಾ ಹಣಕಾಸಿನ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹ್ಯಾಕಿಂಗ್‌ನಿಂದ ಸುರಕ್ಷಿತವಾಗಿಡಲು ಈ ಕೆಳಗಿನ ಪ್ರಮುಖ ಸಲಹೆಗಳನ್ನು ಅನುಸರಿಸಿ:
ಪ್ರಬಲ ಪಾಸ್‌ವರ್ಡ್ ಬಳಸಿ ಹಾಗೂ 2FA ಸಕ್ರಿಯಗೊಳಿಸಿ

ನಿಮ್ಮ ಫೋನ್ ಮತ್ತು ಪ್ರಮುಖ ಆಪ್‌ಗಳಿಗೆ ಕಷ್ಟಕರವಾದ (Strong Password) ಪಾಸ್‌ವರ್ಡ್ ಬಳಸಿ. ಪಾಸ್‌ವರ್ಡ್‌ನಲ್ಲಿ ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಚಿಹ್ನೆಗಳು (Special Characters) ಇರಲಿ. ಇದರೊಂದಿಗೆ ‘ಟೂ-ಫ್ಯಾಕ್ಟರ್ ಆಥಂಟಿಕೇಶನ್’ (2-Factor Authentication) ಸಕ್ರಿಯಗೊಳಿಸುವುದರಿಂದ ಸುರಕ್ಷತೆ ಹೆಚ್ಚುತ್ತದೆ.

ಸಾಫ್ಟ್‌ವೇರ್ ಮತ್ತು ಆಪ್‌ಗಳನ್ನು ನಿಯಮಿತವಾಗಿ ಅಪ್‌ಡೇಟ್ ಮಾಡಿ
ಫೋನ್‌ನ ಆಪರೇಟಿಂಗ್ ಸಿಸ್ಟಮ್ (OS) ಮತ್ತು ಇನ್‌ಸ್ಟಾಲ್ ಆಗಿರುವ ಆಪ್‌ಗಳನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡುತ್ತಿರಿ. ಕಂಪನಿಗಳು ನೀಡುವ ಸೆಕ್ಯುರಿಟಿ ಅಪ್‌ಡೇಟ್‌ಗಳು ಸೈಬರ್ ದಾಳಿಗಳಿಂದ ಫೋನ್ ಅನ್ನು ರಕ್ಷಿಸಲು ನೆರವಾಗುತ್ತವೆ.
ಪಬ್ಲಿಕ್ ವೈ-ಫೈ (Public Wi-Fi) ಬಳಸುವಾಗ ಎಚ್ಚರ
ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಅಥವಾ ಕೆಫೆಗಳಲ್ಲಿ ಸಿಗುವ ಉಚಿತ/ಪಬ್ಲಿಕ್ ವೈ-ಫೈ ನೆಟ್‌ವರ್ಕ್‌ಗಳನ್ನು ಬಳಸುವಾಗ ಎಚ್ಚರಿಕೆಯಿಂದಿರಿ. ಉಚಿತ ವೈ-ಫೈ ಬಳಸಿ ಯಾವುದೇ ರೀತಿಯ ಆನ್‌ಲೈನ್ ಬ್ಯಾಂಕಿಂಗ್ ಅಥವಾ ಹಣಕಾಸಿನ ವಹಿವಾಟು ನಡೆಸಬೇಡಿ.
ನಂಬಿಕಸ್ಥ ಮೂಲಗಳಿಂದ ಮಾತ್ರ ಆಪ್‌ಗಳನ್ನು ಡೌನ್‌ಲೋಡ್ ಮಾಡಿ
ಯಾವುದೇ ಹೊಸ ಆಪ್‌ಗಳನ್ನು ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ (Google Play Store) ಅಥವಾ ಆಪಲ್ ಆಪ್ ಸ್ಟೋರ್ (Apple App Store) ನಂತಹ ಅಧಿಕೃತ ಮೂಲಗಳನ್ನು ಮಾತ್ರ ಬಳಸಿ. ವಾಟ್ಸಾಪ್ ಅಥವಾ ಮೆಸೇಜ್ ಮೂಲಕ ಬರುವ ಅನಪೇಕ್ಷಿತ (Unknown) ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ.
ಬ್ಲೂಟೂತ್ ಮತ್ತು ಜಿಪಿಎಸ್ ಅನಗತ್ಯವಾಗಿ ಆನ್ ಇಡಬೇಡಿ
ಬಳಕೆಯಲ್ಲಿ ಇಲ್ಲದಿದ್ದಾಗ ಫೋನ್‌ನ ಬ್ಲೂಟೂತ್, ವೈ-ಫೈ ಮತ್ತು ಜಿಪಿಎಸ್ (Location) ಆಫ್ ಮಾಡಿಡುವುದು ಒಳ್ಳೆಯದು. ತೆರೆದಿಟ್ಟ ಸಂಪರ್ಕಗಳ ಮೂಲಕ ಹ್ಯಾಕರ್‌ಗಳು ನಿಮ್ಮ ಫೋನ್ ಪ್ರವೇಶಿಸುವ ಅವಕಾಶ ಇರುತ್ತದೆ.











