ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಬಳಿ ಬೆಂಕಿ : ಹಲವು ದಾಖಲೆಗಳು ಬೆಂಕಿಗಾಹುತಿ…!

suddionenews
1 Min Read

 

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 07 : ಜಿಲ್ಲಾಧಿಕಾರಿಯ ಕಚೇರಿಯ ಆವರಣದಲ್ಲಿರುವ ಹಲವು ದಾಖಲೆಗಳನ್ನು ಇಟ್ಟಿದ್ದ ತಗಡಿನಶೆಡ್ ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ  ಘಟನೆ ಇಂದು ಬೆಳಿಗ್ಗೆ 11 : 30 ರ ಸುಮಾರಿಗೆ ನಡೆದಿದೆ. ಈ ವೇಳೆ ಬೆಂಕಿಗೆ ಹಲವು ದಾಖಲೆಗಳು ನಾಶವಾಗಿವೆ. ವಿಷಯ ತಿಳಿಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಅಷ್ಟರೊಳಗೆ ಸಾಕಷ್ಟು ದಾಖಲೆಗಳು ಸುಟ್ಟು ಕರಕಲಾಗಿದ್ದವು. ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿ ಸಾಕಷ್ಟು ಶ್ರಮ ಹಾಕಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಗ್ನಿ ಅವಘಡದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ತಿಳಿಗೊಳಿಸುವುದಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ.ಬೆಂಕಿಯ ಅವಘಡ ಸಂಭವಿಸಿದಾಗ ಯಾರಿಗೂ ಯಾವುದೇ ಪ್ರಾಣಾಯಾಮವಾಗಿಲ್ಲ. ಆದರೆ ಬೆಂಕಿ ಹೊತ್ತಿದ ರೀತಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಸಕ್ಕೆ ಹಾಕಿದ್ದ ಬೆಂಕಿ ಹರಡಿದ್ದೇಗೆ..? ಅದರಲ್ಲೂ ದಾಖಲೆಗಳನ್ನು ಸಂಗ್ರಹಿಸಿಟ್ಟ ಕೋಣೆಗೆ ಅಷ್ಟೊಂದು ಬೆಂಕಿ ಹತ್ತುವುದು ಅಂದರೆ ಏನು..? ಹೀಗೆ ನೂರೆಂಟು ಅನುಮಾನಗಳು ಕಾಡುವುದಕ್ಕೆ ಶುರುವಾಗಿದೆ. ಈ ಬೆಂಕಿ ಹೊತ್ತಿರುವ ಕಾರಣ ದಾಖಲೆಗಳು ಸುಟ್ಟು ಹೋಗಿವೆ. ತನಿಖೆಯ ಬಳಿಕವಷ್ಟೇ ಬೆಂಕಿ ಹತ್ತಿದ್ದೇಗೆ ಎಂಬ ಸತ್ಯ ತಿಳಿಯಲಿದೆ.

Share This Article
Leave a Comment

Leave a Reply

Your email address will not be published. Required fields are marked *