Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧಾರವಾಡ ವ್ಯಕ್ತಿಯಿಂದ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಎಫ್ಐಆರ್..!

---Advertisement---

 

ಧಾರವಾಡ : ಸೌಜನ್ಯ ಕೇಸ್ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಈಗಾಗಲೇ ಹಲವು ಕೇಸ್ ಗಳು ದಾಖಲಾಗಿವೆ. ಇದೀಗ ಜೈನ ಸಮುದಾಯದ ರಾಜರ ಬಗ್ಗೆ ಮಾತನಾಡಿದ್ದಕ್ಕೆ ಎಫ್ಐಆರ್ ದಾಖಲಾಗಿದೆ.

ದೂರುದಾರ ಮಂಜುನಾಥ್ ಮಾತನಾಡಿ, ನಮ್ಮ ಜೈನ ಸಮುದಾಯಕ್ಕೆ ಗಿರೀಶ್ ಮಟ್ಟಣ್ಣನವರ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡುವಾಗ, ಜೈನ ರಾಜರು ಕ್ರೂರಿಗಳು, ಮತಾಂಧರಿಗಳು ಅಂದಿದ್ದರು. ಬಾಹುಬಲಿ ಏಕಾಶಿಲಾ ಮೂರ್ತಿಯನ್ನ ನಾವಿಂದು ಪೂಜಿಸ್ತೇವೆ. ಆ ಮೂರ್ತಿಯನ್ನ ಕೆತ್ತಿದ್ದಂತ ಶಿಲ್ಪಿಯ ಕೈಯನ್ನೇ ಕಟ್ ಮಾಡಿದ್ರು ರಾಜರುಗಳು. ಅಂತ ಕ್ರೂರಿಗಳು ರಾಜರು ಅಂತ ಹೇಳಿದ್ದಾರೆ.

ಆದರೆ ನಮ್ಮ ಇತಿಹಾಸ ಹೇಳುವುದು ಬೇರೆ. ಏನು ಶಿಲ್ಪಿಗಳ ಕೈ ಕಟ್ ಮಾಡಿದ್ರು, ಎಷ್ಟು ಕಲ್ಲನ್ನ ಕಟ್ ಮಾಡ್ತಾ ಇದ್ರು ಅಷ್ಟೇ ತೂಕದ ಬಂಗಾರವನ್ನ ತೂಗುತ್ತಾ ಇದ್ದವರು ನಮ್ಮ ರಾಜರು. ಆದರೆ ಇವರು ಅದನ್ನ ತಿರುಚಿ ಬೇರೆ ಥರ ಹೇಳಿಕೆಗಳನ್ನ ಕೊಡ್ತಾ ಇದ್ದಾರೆ. ಅಷ್ಟೇ ಅಲ್ಲದೆ ಇನ್ನೊಂದು ಮಾಹಿತಿಯನ್ನು ಹೇಳುವುದಕ್ಕೆ ಹೋಗ್ತಾ ಇದ್ದಾರೆ. ಹಿಂದಿನ ಕಾಲದಲ್ಲಿ ರಾಜರು, ಮದುವೆಯಾದ ಮೊದಲ ರಾತ್ರಿ ರಾಜರ ಮನೆಗೆ ಕಳುಹಿಸಿಕೊಡಬೇಕು ಅಂತೆ ಎಂಬ ಹೇಳಿಕೆಯನ್ನ ನೀಡಿದ್ದಾರೆ. ಅಷ್ಟೇ ಕ್ರೂರಿಗಳನ್ನು ಎಂಬುದನ್ನ ಬಿಂಬಿಸುವುದಕ್ಕೆ ಹೋಗ್ತಾ ಇದ್ದಾರೆ.

ನಮ್ಮ ಧರ್ಮ ಅಂಥದ್ದಲ್ಲ. ನಮ್ಮವರು ಯಾರಿಗೂ ಹಿಂಸೆ ಮಾಡುವಂತದ್ದಲ್ಲ. ಅಹಿಂಸೋ ಪರಮ ಧರ್ಮ ನಮ್ಮದು. ಹೀಗಾಗಿ ಇಂದು ಅವರ ಹೇಳಿಕೆಯನ್ನ ಖಂಡಿಸಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇನೆ. ಅವರು ಬೆಳ್ತಂಗಡಿಯಲ್ಲಿ ಹೇಳಿಕೆ ಕೊಟ್ಟ ಕಾರಣ, ಆ ಕೇಸ್ ಇಲ್ಲಿಗೆ ವರ್ಗಾವಣೆಯಾಗಿತ್ತು. ಸಾಕ್ಷಿ ಏನಿದೆ ಅದನ್ನ ತೆಗೆದುಕೊಂಡು ಬನ್ನಿ ಅಂತ ಬೆಳ್ತಂಗಡಿ ಪೊಲೀಸರು ಕರೆ ಮಾಡಿದ್ದರು. ಹೀಗಾಗಿ ಬಂದು, ಸಾಕ್ಷಿಗಳನ್ನ ಕೊಟ್ಟಿದ್ದೇನೆ ಎಂದು ಧಾರವಾಡದ ಮಂಜುನಾಥ್ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...