Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಘು – ಅಶ್ವಿನಿ ನಡುವೆ ಜಗಳ : ಮನೆಗೆ ಹೋಗಲು ಡೋರ್ ತಟ್ಟಿದ ಹೋರಾಟಗಾರ್ತಿ

---Advertisement---

ಬೆಂಗಳೂರು: ಬಿಗ್ ಬಾಸ್ ದಿನೇ ದಿನೇ ಇಂಟ್ರೆಸ್ಟಿಂಗ್ ಅಗಿ ಹೋಗ್ತಾ ಇದೆ. ಅದರಲ್ಲೂ ಒಳಗಿರುವ ಸ್ಪರ್ಧಿಗಳು ಪ್ರೋಮೋ ಕಂಟೆಂಟ್ ಕೊಡೋದು ಸುಲಭ ಅಲ್ಲ. ಪ್ರೋಮೋಗಳು ಸಖತ್ತಾಗಿದ್ದಾಗ ಎಪಿಸೋಡ್ ಸಖತ್ತಾಗಿರುತ್ತೆ ಅಂತ ಜನ ನೋಡ್ತಾರೆ. ಸದ್ಯ ಮನೆಯಲ್ಲಿ ಪ್ರೋಮೋ ಕೊಡ್ತಾ ಇರೋದು ಅಂದ್ರೆನೆ ಅಶ್ವಿನಿ ಅವರು. ಆದರೆ ನಿರ್ಮಾಣವಾಗುತ್ತಿರುವ ಸನ್ನಿವೇಶಗಳು ಅಶ್ವಿನಿ ಅವರಿಗೆ ಕಣ್ಣೀರು ತರಿಸುತ್ತಿರುವುದು ಬೇಸರದ ವಿಚಾರ.

ಇಂದು ಬೆಳ್ ಬೆಳಗ್ಗೆನೆ ಬಿಗ್ ಬಸ್ ಪ್ರೋಮೋ ಒಂದನ್ನ ಬಿಟ್ಟಿದ್ದು, ಎಪಿಸೋಡ್ ನೋಡುವ ಕುತೂಹಲವನ್ನ ಕೊಟ್ಟಿದೆ‌. ರಘು ಅವರು ಎರಡನೇ ಬಾರಿಗೆ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆದವರಿಗೆ ಇಡೀ ಮನೆಯನ್ನು ಸಂಭಾಳಿಸುವ ಜವಬ್ದಾರಿ ಇರುತ್ತದೆ. ಮನೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಸಬೇಕಾಗುತ್ತದೆ. ಅದೇ ರೀತಿ ಅಶ್ವಿನಿ ಅವರಿಗೆ ಕೆಲಸ ವಹಿಸಿದ್ದರು ರಘು. ಆದರೆ ಅಶ್ವಿನಿ ಮಾಡಿಲ್ಲ.

ಬೀನ್ ಬ್ಯಾಗ್ ಮೇಲೆ ಮಲಗಿದ್ದ ಅಶ್ವಿನಿ ಅವರಿಗೆ ರಘು ಕೆಲಸ ಮಾಡಲು ಹೇಳಿದರು. ಆದರೆ ಅಶ್ವಿನಿ ಅವರು ನಂಗೆ ಬ್ಯಾಕ್ ಪೇನ್ ಇದೆ, ಹತ್ತು ನಿಮಿಷ ಸುಮ್ಮನೆ ಬಿಡಿ, ಆಮೇಲೆ ಮಾಡ್ತೀನಿ ಅಂದ್ರು. ರಘು ಹೇಳಿದ ತಾಳ್ಮೆ ಕಳೆದು ಏನಾದ್ರು ಮಾಡ್ಕೊ ಹೋಗು ಅಂದಿದ್ದೆ ತಡ, ಏಕವಚನದಲ್ಲಿ ಮಾತನಾಡಬೇಡ. ನೀನ್ಯಾರು ಅದು ಇದು ಅಂತ ರಘು ಮತ್ತು ಅಶ್ವಿನಿ ಇಬ್ಬರು ಜಗಳಕ್ಕೆ ನಿಂತಿದ್ದಾರೆ. ಅಶ್ವಿನಿ ಕಣ್ಣೀರು ಹಾಕುತ್ತಾ, ಬಿಗ್ ಬಾಸ್ ನಾನು ಮನೆಗೆ ಹೋಗ್ತೀನಿ ಡೋರ್ ಓಪನ್ ಮಾಡಿ ಅಂತಿದ್ದಾರೆ. ಬಿಗ್ ಬಾಸ್ ಡೋರ್ ಓಪನ್ ಮಾಡ್ತಾರಾ..? ಮೆನೆಯವರು ಅಶ್ವಿನಿ ಅವರನ್ನು ಸಮಾಧಾನ ಮಾಡ್ತಾರಾ ಎಪಿಸೋಡ್ ನಲ್ಲಿ ನೋಡ್ಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now