Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಆಶ್ರಯಧಾಮ ಅನಾಥಾಶ್ರಮಕ್ಕೆ ಸಮೃದ್ಧಿ ಮಹಿಳಾ ಸಂಸ್ಥೆಯಿಂದ ಫ್ಯಾನ್ ಗಳ ವಿತರಣೆ

---Advertisement---

ಸುದ್ದಿಒನ್, ಚಿತ್ರದುರ್ಗ, ನವೆಂಬರ್ 26: ಸಮಾಜಮುಖಿ ಕಾರ್ಯಗಳ ಮೂಲಕ ಸದಾ ಜನಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಚಿತ್ರದುರ್ಗದ ‘ಸಮೃದ್ಧಿ ಮಹಿಳಾ ಸಂಸ್ಥೆ’ ವತಿಯಿಂದ, ತಾಲ್ಲೂಕಿನ ಸೀಬಾರದಲ್ಲಿರುವ ಆಶ್ರಯಧಾಮ ಅನಾಥ ಮಕ್ಕಳ ಆಶ್ರಮಕ್ಕೆ 4 ಫ್ಯಾನ್ ಗಳನ್ನು ಉಚಿತವಾಗಿ ವಿತರಿಸಲಾಯಿತು.

ಆಶ್ರಮದಲ್ಲಿ ಆಶ್ರಯ ಪಡೆದಿರುವ ಅನಾಥ ಮಕ್ಕಳ ಅನುಕೂಲಕ್ಕಾಗಿ ಮತ್ತು ಅವರ ವಾಸದ ಕೋಣೆಗಳಲ್ಲಿ ಉತ್ತಮ ಗಾಳಿ-ಬೆಳಕಿನ ವ್ಯವಸ್ಥೆ ಕಲ್ಪಿಸುವ ಸದುದ್ದೇಶದಿಂದ ಮಹಿಳಾ ಸಂಸ್ಥೆಯ ಸದಸ್ಯರು ಈ ನೆರವು ನೀಡಿದ್ದಾರೆ.
ಈ ಸೇವಾ ಕಾರ್ಯಕ್ರಮದಲ್ಲಿ ಸಮೃದ್ಧಿ ಮಹಿಳಾ ಸಂಸ್ಥೆಯ ಪ್ರಮುಖರಾದ ಸುನೀತಾ ಮಲ್ಲಿಕಾರ್ಜುನ, ಕೆ.ವಿ. ವಿಶಾಲ, ಅರುಂಧತಿ, ಜ್ಯೋತಿ ಶಿವಾನಂದ, ಹೆಚ್.ಟಿ. ಉಮಾ ಶಿವಕುಮಾರ್, ಹೇಮಲತಾ ಮಂಜುನಾಥ, ಸುಶೀಲಾ ಮಲ್ಲೇಶ್, ಆರ್. ರಮೇಶ್ ಸೇರಿದಂತೆ ಸಂಸ್ಥೆಯ ಇತರ ಸದಸ್ಯರು ಹಾಗೂ ಆಶ್ರಮದ ಸಿಬ್ಬಂದಿ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now