Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಜೆಪಿಯಿಂದ ಉಚ್ಛಾಟನೆ : ಎಸ್.ಟಿ.ಸೋಮಶೇಖರ್ ಫಸ್ಟ್ ರಿಯಾಕ್ಷನ್

---Advertisement---

ಬೆಂಗಳೂರು: ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯಿಂದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಈ ಸಂಬಂಧ ಮೊದಲ ಪ್ರತಿಕ್ರಿಯೆ ನೀಡಿರುವ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದಾದ ಮೇಲೆ ಸನ್ಮಾನ್ಯ ಯಡಿಯೂರಪ್ಪ ಅವರು ಬಹಳಷ್ಟು ಸಪೋರ್ಟ್ ಮಾಡಿದ್ರು. ಮಂತ್ರಿಯಾಗಿ ಏನು ಕೆಲಸ ಮಾಡಬೇಕು, ಸರ್ಕಾರದ ಕೆಲಸವನ್ನ ಹೇಗೆ ಮಾಡಬೇಕು ಎಂಬುದೆಲ್ಲವನ್ನು ಕಲಿಸಿದರು.

ಇನ್ನು 2028ಕ್ಕೆ ಎಲೆಕ್ಷನ್. ಅಲ್ಲಿಯ ತನಕ ಆರಾಮವಾಗಿ ಇರ್ತೀನಿ, ಕ್ಷೇತ್ರದ ಕೆಲಸಗಳನ್ನ ಮಾಡ್ತಾ ಇರ್ತೀನಿ. ವಿಜಯೇಂದ್ರ ಪಾಪ ಇನ್ನೇನು ಹೇಳೋದಕ್ಕೆ ಆಗುತ್ತೆ‌. ಸೋಮಶೇಖರ್ ಪರವಾಗಿ‌ ಮಾತಾಡ್ತೀನಿ ಅಂದ್ರೆ ಹಿಗ್ಗಾಮುಗ್ಗಾ ಬೀಳ್ತವೆ. ಹೀಗಾಗಿ ಅವರಿಂದಾನೂ ನಿರೀಕ್ಷೆ ಮಾಡೋದಕ್ಕೆ ಆಗಲ್ಲ. ರಾಜ್ಯಾಧ್ಯಕ್ಷ ಆಗಿರುವ ಕಾರಣ ಹೈಕಮಾಂಡ್ ಏನು ಹೇಳುತ್ತೋ ಅದನ್ನೆ ಮಾಡಬೇಕು ಅಲ್ವಾ. ನನ್ನ ಬಗ್ಗೆ ಯಾರೊ ಡಿಫೆಂಡ್ ಮಾಡ್ಬೇಕು ಅಂತಿಲ್ಲ. ದೇವರು ಆ ಶಕ್ತಿ ಕೊಟ್ಟಿದ್ದಾನೆ ನಾನು ನನ್ನನ್ನ ಡಿಫೆಂಡ್ ಮಾಡ್ಕೊಳ್ತೀನಿ.

ಶಾಸಕ ಸ್ಥಾನದಲ್ಲಿ ಮುಂದಿನ ಚುನಾವಣೆ ತನಕ ಇದ್ದೆ ಇರ್ತೀನಿ. ಮುಂದಿನ ಚುನಾವಣೆ ಡಿಕ್ಲೇರ್ ಆಗುವ ತನಕ ನಾನು ಶಾಸಕನಾಗಿಯೇ ಇರ್ತೀನಿ. ಶೋಭಾ ಮೇಡಂ ಲೋಕಸಭಾ ಸದಸ್ಯರಾಗಿದ್ದಾರೆ, ಕೇಂದ್ರದ ಸಚಿವೆಯಾಗಿದ್ದಾರೆ. ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದಂತ ಸಂದರ್ಭದಲ್ಲು, ಕಾಂಗ್ರೆಸ್ ನಲ್ಲಿ ಗೆದ್ದು ಬಿಜೆಪಿಗೆ ಹೋದಾಗಲೂ ಯಾರೂ ಪ್ರತಿಭಟನೆ ಮಾಡಲಿಲ್ಲ. ಬಿಜೆಪಿಯಿಂದ ಗೆದ್ದು ಕಾಂಗ್ರೆಸ್ ಕೆಲಸ ಮಾಡಿಕೊಟ್ಟಾಗಲೂ ಯಾರೂ ಪ್ರತಿಭಟನೆ ಮಾಡಿಲ್ಲ. ಪಾಪ ಶೋಭಾ ಮೇಡಂ ಚಿಕ್ಕಮಗಳೂರು ಎಂಪಿ ಆಗಿದ್ರು. ಅಲ್ಲಿನ ಜನ ಏನು ಹೂ, ಹಣ್ಣು ಕೊಟ್ಟು ಇಲ್ಲಿಗೆ ಕಳುಹಿಸಿದ್ರಾ..? ಅದನ್ನ ಸರಿಯಗಿ ನೆನಪು ಮಾಡಿಕೊಂಡ್ರೆ ಇಲ್ಲಿ ನನ್ನ ಪರವಾದ ಸ್ಟೇಟ್ಮೆಂಟ್ ಕೊಡಬೇಕಾದ ಅವಶ್ಯಕತೆ ಇಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...