Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿರಿಯರು ಕಷ್ಟ ಪಟ್ಟು ಕಟ್ಟಿದ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗಿದೆ : ನವೀನ್ ಚಾಲುಕ್ಯ

Facebook
Twitter
Telegram
WhatsApp

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ, (ಸುದ್ದಿಒನ್): ಅನೇಕ ಮಹಾನ್ ನಾಯಕರುಗಳ ತ್ಯಾಗ ಬಲಿದಾನದಿಂದ ಕಟ್ಟಿರುವ ಬಿ.ಜೆ.ಪಿ. ಪಕ್ಷದಲ್ಲಿ ಕಾರ್ಯಕರ್ತರು ಪ್ರತೀ ಭೂತ್‍ಗಳನ್ನು ಸದೃಢವಾಗಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಎ. ಮುರುಳಿ ತಿಳಿಸಿದರು.

ಭಾರತೀಯ ಜನತಾ ಪಕ್ಷ ನಗರ ಮತ್ತು ಗ್ರಾಮಾಂತರ  ಮಂಡಲದ ವತಿಯಿಂದ ಪಕ್ಷದ ಕಛೇರಿಯಲ್ಲಿ ಬುಧವಾರ ನಡೆದ ಬಿ.ಜೆ.ಪಿ. ಸಂಸ್ಥಾಪನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

1980 ಏಪ್ರಿಲ್ 6 ರಂದು ಪಂಚ ನಿಷ್ಠ್ಠಗಳ ತತ್ವದ ಮೇಲೆ ಆರಂಭಗೊಂಡ ಭಾರತೀಯ ಜನತಾ ಪಕ್ಷ ಸರ್ವಧರ್ಮ ಸಮಾಜ, ಪ್ರಜಾಪ್ರಭುತ್ವ, ಮೌಲ್ಯಾಧಾರಿತ ರಾಜಕಾರಣ, ಏಕಾತ್ಮ ಮಾನವತೆ, ಸಾಂಸ್ಕøತಿಕ ಮತ್ತು ದೇಶದ ಸಮಗ್ರತೆ ಇವುಗಳ ಆದಾರದ ಮೇಲೆ ಕಟ್ಟಿರುವ ಬಿ.ಜೆ.ಪಿ ಗೆ ಮಹಾನ್ ನಾಯಕರುಗಳು ತ್ಯಾಗ ಬಲಿದಾನದ ಇತಿಹಾಸವಿದೆ. ಹಾಗಾಗಿ ಪ್ರತಿ ಬೂತನ್ನು ಸದೃಢವಾಗಿ ಮಾಡುವ ಹೊಣೆಗಾರಿಕೆ ಕಾರ್ಯಕರ್ತರುಗಳ ಮೇಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದರೆ ಯೋಜನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಲು ಸುಲಭವಾಗಲಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಮನೆಯ ಮೇಲೆ ಪಕ್ಷದ ಭಾವುಟ ಹಾರಾಡಬೇಕೆಂದು ಹೇಳಿದರು.

ಬಿ.ಜೆ.ಪಿ. ನಗರ ಮಂಡಲಾಧ್ಯಕ್ಷ ನವೀನ್ ಚಾಲುಕ್ಯ ಮಾತನಾಡುತ್ತ ಬಿ.ಜೆ.ಪಿ. ಸ್ಥಾಪನೆಯಾಗಿ ಇಂದಿಗೆ 42 ವರ್ಷಗಳಾಗಿವೆ. ಮೋದಿರವರ ಪಾರದರ್ಶಕ ಆಡಳಿತ ಹಾಗೂ ದೇಶಾಭಿಮಾನವನ್ನು ಮೆಚ್ಚಿ ಮತದಾರರು 2ನೇ ಬಾರಿಗೆ ಅಧಿಕಾರ ನೀಡಿದ್ದಾರೆ. ದೇಶದ ಹಲವಾರು ರಾಜ್ಯಗಳಲ್ಲೂ ನಮ್ಮ ಪಕ್ಷ ಅಧಿಕಾರದಲ್ಲಿದೆಯಲ್ಲದೆ ಸ್ಥಳೀಯ ಸಂಸ್ಥೆಗಳಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹಿರಿಯರು ಕಷ್ಟ ಪಟ್ಟು ಕಟ್ಟಿದ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗಿರುವುದರಿಂದ ಕಾರ್ಯಕರ್ತರು, ಬೂತ್ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು ಜವಾಬ್ದಾರಿಯಿಂದ ಪಕ್ಷದ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಪಕ್ಷ ನಿಮಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಪಕ್ಷವನ್ನು ಗಟ್ಟಿಗೊಳಿಸಿದಾಗ ಒಂದಲ್ಲ ಒಂದು ದಿನ ನಾಯಕರುಗಳು ನಿಮಗೆ ಅಧಿಕಾರ ನೀಡಲಿದ್ದಾರೆ. ಅಧಿಕಾರ ಸಿಗದಿದ್ದವರಿಗೆ ನಿಗಮ  ಮಂಡಳಿಗಳಿಗಾದರೂ ನೇಮಕ ಮಾಡುವ ಅವಕಾಶಗಳಿರುತ್ತವೆ. ಅದಕ್ಕಾಗಿ ಕಾರ್ಯಕರ್ತರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪಕ್ಷದ ಕೆಲಸ ಮಾಡಬೇಕೆಂದು ತಿಳಿಸಿದರು.

ತುಮಕೂರು ವಿಭಾಗೀಯ ಸಹ ಪ್ರಭಾರಿ ಹಾಗೂ ಬಿ.ಜೆ.ಪಿ ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಜಿ. ನರೇಂದ್ರನಾಥ್ ಮಾತನಾಡುತ್ತ ಪಂಚ ನಿಷ್ಠಗಳ ಮೇಲೆ ಕಟ್ಟಿರುವ ಭಾರತೀಯ ಜನತಾ ಪಕ್ಷ ಇಡೀ ಜಗತ್ತಿನಲ್ಲಿಯೇ ಅತೀ ದೊಡ್ಡ ಪಕ್ಷವಾಗಿ ಹೊರ  ಹೊಮ್ಮಿದೆ. ಸಿದ್ದಾಂತದ ಮೇಲೆ ರಾಜಕಾರಣ ಮಾಡುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಅನೇಕ ಹಿರಿಯರ ತ್ಯಾಗ ಬಲಿದಾನವಿದ್ದು ಪಂಡಿತ್ ದೀನ್ ದಯಾಳ್, ಶ್ಯಾಮ್ ಪ್ರಸಾದ್ ಮುಖರ್ಜಿ ಇವರುಗಳು ನೆಟ್ಟಿರುವ ಸಸಿ ಇಂದು ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದೆ. ವಾಜಪೇಯಿ ರವರು ದೇಶದ ಪ್ರಧಾನಿಯಾಗಿದ್ದಾಗ ಅನೇಕ ಜನಪರ  ಯೋಜನೆಗಳನ್ನು ನೀಡಿದ್ದರು. ಅದೇ ರೀತಿ ಈಗಿನ ಪ್ರಧಾನಿ ನರೇಂದ್ರ ಮೋದಿರವರು ಕೂಡ ಪಾರದರ್ಶಕ ಆಡಳಿತ ನಡೆಸುತ್ತಿದ್ದು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜನತೆಗೆ ಕೊಡುಗೆಯಾಗಿ ನೀಡುತ್ತಿದ್ದಾರೆ ಎಂದು ಗುಣಗಾನ ಮಾಡಿದರು.

ಬಿ.ಜೆ.ಪಿ ಗ್ರಾಮಾಂತರ ಮಂಡಲಾಧ್ಯಕ್ಷ ನಂದಿ ನಾಗರಾಜ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಸಿದ್ಧಾಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಪಿ. ನರೇಂದ್ರನಾಥ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಕಿರಣ್, ವೆಂಕಟೇಶ್ ಯಾದವ್, ವೀರೇಶ್, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್. ಶ್ರೀನಿವಾಸ್, ಶಿವಣ್ಣಾಚಾರ್, ಕಲ್ಲಂ ಸೀತರಾಮ್‍ರೆಡ್ಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ, ಎ.ರೇಖಾ, ಬಸಮ್ಮ, ಅನ್ನಪೂರ್ಣಮ್ಮ, ಚಂದ್ರಿಕಾ  ಲೋಕನಾಥ್, ವಕ್ತಾರ ನಾಗರಾಜ್ ಬೇದ್ರೆ, ಮಾದ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಭಾರ್ಗವಿ ದ್ರಾವಿಡ್, ನಾಗರಾಜ್ ಇನ್ನು ಮೊದಲಾದವರು ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

ಸಂಸ್ಥಾಪನಾ ದಿನಾಚರಣೆಯ ನಂತರ ಬಿ.ಜೆ.ಪಿ. ಕಛೇರಿಯಿಂದ ಮೆರವಣಿಗೆ ಹೊರಟು ಗಾಯಿತ್ರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದಲ್ಲಿ ಸುರಿಯುತ್ತಿರುವ ಮಳೆ : ತಂಪಾದ ಇಳೆ

  ಸುದ್ದಿಒನ್, ಚಿತ್ರದುರ್ಗ, ಮೇ.10 : ಮಳೆಗಾಗಿ ಕಾದಿದ್ದ ಕೋಟೆ ನಾಡಿನ ಜನತೆಗೆ ಮಳೆರಾಯ ಕೃಪೆ ತೋರಿದ್ದಾನೆ. ಬುಧವಾರ ಸ್ವಲ್ಪ ಮಳೆ ಬಂದಿತ್ತು. ಆದರೆ ಇಂದು (ಶುಕ್ರವಾರ) ರಾತ್ರಿ 10 ಗಂಟೆ ಸುಮಾರಿಗೆ ಮಳೆ

ಹಿರಿಯೂರಿನಲ್ಲಿ ವಕೀಲ ದೇವರಾಜೆಗೌಡ ಬಂಧನ …!

  ಸುದ್ದಿಒನ್, ಹಿರಿಯೂರು, ಮೇ. 10  : ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ  ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಅವರನ್ನು ಹಿರಿಯೂರು ಗ್ರಾಮಾಂತರ ಪೋಲಿಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಹೊಳೆನರಸೀಪುರದಲ್ಲಿ

ಚಳ್ಳಕೆರೆ | ಬೆಳಗೆರೆ ಬಿ. ಸೀತಾರಾಮ ಶಾಸ್ತ್ರಿ ಪ್ರೌಢಶಾಲೆಗೆ SSLC ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

  ಸುದ್ದಿಒನ್, ಚಳ್ಳಕೆರೆ, ಮೇ.10 : 2024 ನೇ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಪ್ರಕಟವಾಗಿದ್ದು, ತಾಲ್ಲೂಕಿನ ಬೆಳಗೆರೆ ಬಿ. ಸೀತಾರಾಮ ಶಾಸ್ತ್ರಿ ಪ್ರೌಢ ಶಾಲೆಗೆ  ಶೇಕಡ 78.4.0 ರಷ್ಟು ಫಲಿತಾಂಶ

error: Content is protected !!