Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾಖಲೆ ಕೊಟ್ಟಿದ್ದೇ ಕಾಂಗ್ರೆಸ್ ನಾಯಕರು, ಸಿದ್ದರಾಮಯ್ಯರಿಗೆ ಶಿಕ್ಷೆ ಕೊಡಿಸೋ ತನಕ ಬಿಡಲ್ಲ : ಸ್ನೇಹಮಯಿ ಕೃಷ್ಣ ಶಾಕಿಂಗ್ ಹೇಳಿಕೆ

---Advertisement---

ಮೈಸೂರು; ಮೂಡಾ ಕೇಸ್ ಹಗರಣದಲ್ಲಿ ಸದ್ಯ ಸಿದ್ದರಾಮಯ್ಯ ಅವರಿಗೆ ರಿಲೀಫ್ ಸಿಕ್ಕಿದೆ. ಆದರೆ ದೂರುದಾರ ಸ್ನೇಹಮಯಿ ಕೃಷ್ಣ ಮಾತ್ರ ಆ ಕೇಸನ್ನ ಇನ್ನು ಬಿಡ್ತಾ ಇಲ್ಲ. ಈಗಲೂ ಸಿಎಂ ಸಿದ್ದರಾಮಯ್ಯ ಅವರಿಗೆ ಶಿಕ್ಷೆ ಕೊಡಿಸದೆ ಬಿಡೋದಿಲ್ಲ ಅಂತ ಹೇಳ್ತಾ ಇದಾರೆ. ಈ ಬಗ್ಗೆ ಮತ್ತೆ ಮಾತನಾಡಿರುವ ಸ್ನೇಹಮಯಿ ಕೃಷ್ಣ, ಒಂದೇ ಕೈನಲ್ಲಿ ಚಪ್ಪಾಳೆ ಹೊಡೆಯೋಕೆ ಆಗಲ್ಲ. ಈ ಸುಳ್ಳು ದಾಖಲೆಗಳನ್ನ ಸೃಷ್ಟಿಸಿ ಅಪರಾಧ ಕೃತ್ಯ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದಿದ್ದಾರೆ.

ಈ ಕ್ರಯಪತ್ರಕ್ಕೆ, ಈ ದಾಖಲೆಗೆ ಯಾರೂ ಸಹಿ ಮಾಡಿದ್ದಾರೆ. ‌ಅಧಿಕಾರಿ ತಪ್ಪು ಮಾಡಿರೋದು ಯಾಕೆ. ಅರ್ಜಿ ಕೊಟ್ಟಿದ್ದಕ್ಕೆ ತಾನೇ. ನೊಂದವರು ನನ್ನ ಹಿಂದೆ ಇದ್ದಾರೆ, ಸೈನಿಕರಿಗೆ ನಿವೇಶನ ಕೊಟ್ಟಿಲ್ಲ ಅವರೆಲ್ಲಾ ನನ್ನ ಹಿಂದೆ ಇದ್ದಾರೆ. ಬರೀ ಸಿದ್ದರಾಮಯ್ಯ ಅವರ ವಿಚಾರ ಅಲ್ಲ. ನಾನು ಕೊಟ್ಟ ಅರ್ಜಿಯಲ್ಲಿ ನಿವೇಶನದ ಬಗ್ಗೆ ಮೆನ್ಶನ್ ಮಾಡಿದ್ದೇನೆ. ಕಾಂಗ್ರೆಸ್ ನವರು ನೇರವಾಗಿ ಹೋರಾಟ ಮಾಡೋದಕ್ಕೆ ಆಗಲ್ಲ. ಅವರು ಪರೋಕ್ಷವಾಗಿ ಬೆಂಬಲ ಕೊಡ್ತಾ ಇದಾರೆ. ಹಲವು ದಾಖಲೆಗಳನ್ನ ಕಾಂಗ್ರೆಸ್ ಪಕ್ಷದ ಮುಖಂಡರೆ ನನಗೆ ತಂದುಕೊಟ್ಟಿದ್ದಾರೆ.

ವಕೀಲರನ್ನೇ ನಾನು ನೇಮಿಸಿಕೊಂಡಿಲ್ಲ. ನನಗೆ ಅಷ್ಟು ಜ್ಞಾನ ಇದೆ. ಹೀಗಾಗಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಾದವನ್ನ ನಾನೇ ಮಂಡಿಸಿದ್ದೀನಿ. ಆದರೆ ಹೈಕೋರ್ಟ್ ಗೆ ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದ್ದ ಕಾರಣ ವಕೀಲರಿಗೆ ಮನವಿ ಮಾಡಿಕೊಳ್ಳುತ್ತಾ ಇದ್ದೀನಿ. ಮತ್ತೆ ತನಿಖೆ ಮಾಡಬೇಕು ಅಂತಾನೇ ಹೇಳೋದು. ತಾರ್ಕಿಕ ಅಂತ್ಯ ಕಾಣಿಸುವವರೆಗೂ ಈ ಹೋರಾಟ ನಿಲ್ಲಿಸೋದಿಲ್ಲ. ಸಿದ್ದರಾಮಯ್ಯ ಅವರಿಗೆ ಶಿಕ್ಷೆ ಆಗುವಂತೆ ತಕರಾರು ಅರ್ಜಿಯನ್ನ ಸಿದ್ಧ ಮಾಡ್ತಾ ಇದ್ದೀನಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...