ಚಿತ್ರದುರ್ಗ,(ಜೂ.06): ಪ್ರಕೃತಿಯಲ್ಲಿ ಜೀವಿಸು ಪ್ರತಿಯೊಂದು ಪ್ರಾಣಿ ಪಕ್ಷಿ ಸಕಲ ಜೀವರಾಶಿಗೆ ಮುಖ್ಯವಾಗಿ ಗಾಳಿ ನೀರು ಬೆಳಕು,ಅದರಲ್ಲಿ ಮುಖ್ಯವಾಗಿ ಉಸಿರಾಡುವುದಕ್ಕೆ ಆಮ್ಲಜನಕ ಬೇಕು. ಇತಂಹ ಆಮ್ಲಜನಕ ಸಿಗುವುದ ಮರಗಳಿಂದ ಆದುದರಿಂದ ಹೆಚ್ಚು ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸಬೇಕಾಗುತ್ತದೆ. ಮತ್ತು ಈ ಮೂಲಕ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ನಗರದ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ನಂತರ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮಗೆ ಬೇಕಾಗುವಂತಹ ಎಲ್ಲಾ ಸೌಕರ್ಯವು ಪರಿಸರದಲ್ಲಿ ಸಿಗುತ್ತದೆ ಇಂತಹ ಪರಿಸರವನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಜೊತೆಗೆ ಪರಿಸರ ಉಳಿಸಿ ಬೆಳೆಸುವಂತಹ ಕಾರ್ಯವಾಗಬೇಕು. ಆದರೆ ಮನುಷ್ಯನ ದುರಾಸೆಯಿಂದ ಹಳ್ಳ-ಕೊಳ್ಳಗಳು ರಾಜಕಾಲುವೆಗಳು ಕೆರೆಗಳು ಗೋಮಾಳಗಳು ಒತ್ತುವರಿಯಾಗಿವೆ ಕಣ್ಮರೆಯಾಗುತ್ತಿವೆ.
ಮನುಷ್ಯನ ದುರಾಸೆಯಿಂದ ಸಕಲ ಪ್ರಾಣಿಗಳು ಸಹ ಕಣ್ಮರೆಯಾಗುತ್ತಿವೆ ಆದರೆ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ನಮಗೆ ಅವಶ್ಯಕವಾಗಿರುವ ಅಂತಹ ಗಾಳಿ ಬೆಳಕು ಆಮ್ಲಜನಕ ಸಿಗುವಂತಹ ಹೆಚ್ಚು ಹೆಚ್ಚು ಮರಗಳನ್ನು ಬಳಸಬೇಕು .ಇದು ಬಯಲುನಾಡು ಬರದ ನಾಡು ಎಂದೇ ಹಣೆಪಟ್ಟಿ ಕಟ್ಟಿಕೊಂಡಿದೆ. ಆದ್ದರಿಂದ ಈ ತಾಲೂಕಿನಲ್ಲಿ ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳಸಿ ಹಚ್ಚ ಹಸುರಿನಿಂದ ಕಂಗೊಳಿಸುವಂತೆ ಮಾಡಬೇಕು. ಜೊತೆಗೆ ಬಿದ್ದಂತಹ ಮಳೆನೀರನ್ನು ತಡೆಯಲು ಮರಗಳು ಸಹಕಾರಿಯಾಗುತ್ತವೆ.
ಸಾಲು ಮರಗಳನ್ನು ನೆಟ್ಟು ಬೀಳುವಂತಹ ಮಳೆ ನೀರನ್ನು ತಡೆದು ನೀರನ್ನು ಭೂಮಿಗೆ ಇಂಗಿಸಿದರೆ ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಆದರೆ ಮನುಷ್ಯನು ಬಿದ್ದ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಈ ಭಾಗದ ಜೀವನದಿ ಎಂದರೆ ವೇದಾವತಿ ನದಿಯಲ್ಲಿ ಅತಿ ಹೆಚ್ಚು ಮರಳು ಗಣಿಗಾರಿಕೆ ಮಾಡಿ ನದಿಯನ್ನು ಬರಿದು ಮಾಡಿದ್ದಾರೆ.
ವಿವಿ ಸಾಗರ ವೇದಾವತಿಗೆ ನೀರು ತಂದ ಕಾರಣದಿಂದಾಗಿ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದು ಅರೆಮಲೆನಾಡು ಗೋಚರಿಸುತ್ತಿದೆ. ಇದಕ್ಕಾಗಿಯೇ ಪ್ರತಿಯೊಬ್ಬ ವಿದ್ಯಾರ್ಥಿಗಳು ಮನೆಯ ಸುತ್ತಮುತ್ತ ಶಾಲೆ ಕಾಲೇಜು ಅವರಣಗಳಲ್ಲಿ ಒಂದು ಗಿಡ ನೆಟ್ಟು ಪೋಷಣೆ ಮಾಡಿದರೆ ಸಾಕು ನಮಗೆ ಬೇಕಾದ್ದನ್ನೆಲ್ಲ ಮರಗಿಡಗಳಿಂದ ಸಿಗುತ್ತದೆ.
ತಾಲೂಕು ಆಡಳಿತ ತಾಲೂಕು ಪಂಚಾಯಿತಿ ಪೊಲೀಸ್ ಇಲಾಖೆ ವಿವಿಧ ಇಲಾಖೆಯ ಎಲ್ಲ ಅಧಿಕಾರಿಗಳು ಪ್ರತಿ ಇಲಾಖೆಯಿಂದ 100- 100 ಗಿಡಗಳನ್ನು ನೆಟ್ಟು ಬೆಳೆಸುವ ಸಂಕಲ್ಪವನ್ನು ತೊಟ್ಟಿದ್ದೇವೆ. ಅದರಂತೆ ನೀವು ಸಹ ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ಪರಿಸರ ಉಳಿಸುವ ಕಾರ್ಯವಾಗುತ್ತದೆ. ಜತೆಗೆ ಅಂದು ಚುನಾವಣೆ ಇಲಾಖೆ ವತಿಯಿಂದ ಮತದಾನ ಪಟ್ಟಿಗೆ ಮತದಾರರ ಸೇರ್ಪಡೆ ಕಡ್ಡಾಯ. ಸೇರ್ಪಡೆಗೊಂಡ ಅಂತಹ ಮತದಾರರಿಗೆ ಮತದಾನ ಕಡ್ಡಾಯ ಈ ಎರಡು ಅಂಶವನ್ನು ನಾವು ಪರಿಸರ ದಿನಾಚರಣೆ ಹಮ್ಮಿಕೊಂಡಿದ್ದೆವೆ.
ಇದಕ್ಕಾಗಿಯೆ ನೀವು ಪ್ರತಿಯೊಬ್ಬರೂ ಮತದಾನ ಹಕ್ಕು ಪಡೆಯುವಂತಹ ಪ್ರತಿಯೊಬ್ಬ ನಾಗರಿಕರಿಗೂ ಅನಕ್ಷರಸ್ಥರಿಗೂ ಮತದಾನದ ಮಹತ್ವ ತಿಳಿಸಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನ ಪಟ್ಟಿಗೆ ಸೇರುವಂತೆ ಪ್ರೇರೇಪಿಸಿ ಪ್ರತಿ ಚುನಾವಣೆಗಳಲ್ಲಿ ಮತದಾನ ಕಡ್ಡಾಯ ಎನ್ನುವ ಅಂಶವೂ ಸಹ ಅವರಿಗೆ ಮನವರಿಕೆ ಮಾಡಿಕೊಡಿ. ಕೇಂದ್ರ ಚುನಾವಣಾ ಆಯೋಗದಂತೆ ನಾವು ಸಹ ಮತದಾರರ ಪಟ್ಟಿಯಲ್ಲಿ ಸೇರ್ಪಡೆ. ಮಾಡಲಾಗುವುದು ಎಂದರು .
ಪತ್ರಕರ್ತ ಹಾಗೂ ಕವಿ ಕೊರ್ಲಕುಂಟೆ. ಜೆ. ತಿಪ್ಪೇಸ್ವಾಮಿ ಮಾತನಾಡಿ ಇಡೀ ವಿಶ್ವದಲ್ಲಿ ಮನುಷ್ಯಜೀವಿ ಏಕಾಂಗಿಯಲ್ಲ. ಈ ಸೃಷ್ಟಿ ಮನುಷ್ಯನ ಸ್ವತ್ತು ಅಲ್ಲವೇ ಅಲ್ಲ ನಮ್ಮ ಸುತ್ತಮುತ್ತ ಪ್ರಾಣಿ ಪಕ್ಷಿ ಕಾಡು ಮರ ಬೆಟ್ಟ-ಗುಡ್ಡಗಳು ಕ್ರಿಮಿಕೀಟಗಳು ನದಿ-ಹಳ್ಳಗಳ ನೀರು ಮಣ್ಣು ಆಕಾಶ ಬೆಳಕು ಇವುಗಳೆಲ್ಲವನ್ನು ಒಳಗೊಂಡ ಸಮೂಹವೇ ಪರಿಸರ.
ಮಾನವನು ಅನ್ಯೋನ್ಯತೆಯಿಂದ ಜೀವಿಸುತ್ತಿದ್ದಾರೆ. ಇವೆಲ್ಲದರ ನಡುವೆ ಮಾನವನು ತನ್ನ ಸ್ವಾರ್ಥತೆಯನ್ನು ಈ ಸೃಷ್ಟಿಗೆ ವಕ್ರದೃಷ್ಟಿ ತೋರಿಸುತ್ತಿದ್ದಾನೆ. ಇದರಿಂದಾಗಿ ಪರಿಸರ ಹಲವಾರು ತೊಂದರೆಗೆ ಅನುಭವಿಸುವಂತಾಗುತ್ತದೆ ಪ್ರಕೃತಿ ನಮಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ನೀರು ಗಾಳಿ ಆಹಾರ ಸೇರಿದ ಇನ್ನೂ ಅನೇಕ ಅಗತ್ಯ ವಸ್ತುಗಳು ನೀಡುತ್ತದೆ ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ .ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಬೇಕು.
ಭೂಮಿಯಲ್ಲಿ ಏರುಪೇರುಗಳಿಂದ ಭೂಮಿಯ ತಾಪಮಾನ ಹೆಚ್ಚಾಗುತ್ತದೆ.
ಆದ್ದರಿಂದ ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬರು ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸಿಕೊಂಡು ಕಾಡನ್ನು ಉಳಿಸಿ ಬೆಳೆಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಇಂತಹ ವಿಷಯಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿಗೂ ನಾಟ ಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಪ್ರಭಾರಿ ಮುಖ್ಯೋಪಾಧ್ಯಾಯಿನಿ ವೇಣಿ, ಸಹ ಶಿಕ್ಷಕರಾದ ಸುಜಾತ, ಉಮಾ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕ ಪ್ರದೀಪ್, ರಾಜಕುಮಾರ್, ಶಿವಕೀರ್ತಿ, ಉಮಾ ಹಾಗೂ ದೈಹಿಕ ಶಿಕ್ಷಕರಾದ ಪ್ರಾಣೇಶ ಹಾಗೂ ಶಾಲಾ ಮಕ್ಕಳು ಇದ್ದರು.