ಅಡಿಕೆ ಗಿಡ ಕತ್ತರಿಸಿ ವಿಕೃತಿ ಮೆರೆದ ಕಿಡಿಗೇಡಿಗಳು, ಕಂಗಾಲಾದ ರೈತ ; ಆತ್ಮಸ್ಥೈರ್ಯ ತುಂಬಿದ ಜಿ. ರಘು ಆಚಾರ್

suddionenews
1 Min Read

ಚಿತ್ರದುರ್ಗ, (ಜೂ.06) : ಮುಂಗಾರು ಮಳೆ ಆರಂಭದಲ್ಲಿಯೇ ಜೋರಾಗಿ ಹಲವೆಡೆ ಬೆಳೆದ ಬೆಳೆ ನೆಲಕಚ್ಚಿದೆ. ಇದರಿಂದಾಗಿ ರೈತ ನಷ್ಟದಲ್ಲಿದ್ದಾನೆ. ಇದರ ಮಧ್ಯೆ ಕಿಡಿಗೇಡಿಗಳು ರೈತನ ಅಡಿಕೆಯನ್ನು ನಾಶ ಮಾಡಿರುವ ಘಟನೆ ತಾಲ್ಲೂಕಿನ ಕೆನ್ನಡಲು ಗ್ರಾಮದಲ್ಲಿ ನಡೆದಿದೆ.

ರೈತರು ಯಾವುದೇ ಬೆಳೆ ಬೆಳೆಯಲಿ ಅದನ್ನು ತನ್ನ ಮಗುವಿನಂತೆಯೇ ಸಾಕಿ ಸಲಹಿರುತ್ತಾರೆ. ಅದಕ್ಕೆಂದೆ ಸಾಕಷ್ಟು ಸಮಯ ನೀಡಿರುತ್ತಾರೆ. ಆ ಬೆಳೆ ಫಸಲು ಕೊಡುವಲ್ಲಿಗೆ ಬಂದರೆ ರೈತ ತಾನು ಪಟ್ಟ ಕಷ್ಟವನ್ನೆಲ್ಲಾ ಮರೆತೇ ಬಿಡುತ್ತಾನೆ. ಇಂಥ ಖುಷಿಯಲ್ಲಿರುವಾಗ ಬೆಳೆಯನ್ನೆ ನಾಶ ಮಾಡಿದರೆ ಆ ರೈತನಿಗೆ ಆಗುವ ನೋವು ಅಷ್ಟಿಷ್ಟಲ್ಲ.

ದಾಸರ ಗಿರಿಯಪ್ಪ ಎಂಬ ರೈತರ ಒಂದೂವರೆ ಎಕರೆ ತೋಟದಲ್ಲಿ ಬೆಳೆಯಲಾಗಿದ್ದ ಸುಮಾರು ನೂರಕ್ಕೂ ಹೆಚ್ಚು ಅಡಿಕೆ ಗಿಡಗಳುನ್ನು ಕಿಡಿಗೇಡಿಗಳು ಭಾನುವಾರ ನಾಶ ಮಾಡಿದ್ದಾರೆ. ಇದರಿಂದಾಗಿ ಅಂದಾಜು ಮೂರು ಲಕ್ಷ ರೂ. ನಷ್ಟ ಆಗಿದೆ ಎಂದು ರೈತ ಗಿರಿಯಪ್ಪ ಅಳಲು ತೋಡಿಕೊಂಡರು. ಈ ಗಿಡಗಳನ್ನು ಐದು ವರ್ಷದಿಂದ ಪೋಷಣೆ ಮಾಡಿದ್ದರು.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಮಾಜಿ ಸದಸ್ಯ ಜಿ. ರಘು ಆಚಾರ್ ಅವರು ನೊಂದ ರೈತ ಕುಟುಂಬಕ್ಕೆ ಧೈರ್ಯ ತುಂಬಿ, ಆಗಿರುವ ನಷ್ಟಕ್ಕೆ ಅಗತ್ಯ ಸಹಾಯ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ ಗ್ರಾಮಾಂತರ ಠಾಣೆ ಪೊಲೀಸರನ್ನು ಸಂಪರ್ಕಿಸಿ ಕಿಡಿಗೇಡಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಿ ರೈತನಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *