Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಳೆದ ಅಧಿವೇಶನದಲ್ಲಿಯೇ ಸಾಕಾಗಿದೆ : ಬಿಜೆಪಿಗರ ಬಗ್ಗೆ ಶಿವಲಿಂಗೇಗೌಡ ಬೇಸರ

---Advertisement---

ಬೆಂಗಳೂರು: ಅಧಿವೇಶನ ನಡೆಯುವಾಗ ಆಡಳಿತ ಪಕ್ಷದ ಮೇಲೆ ವಿರೋಧ ಪಕ್ಷದ ನಾಯಕರು ಹೌಹಾರೋದು ಸರ್ವೇ ಸಾಮಾನ್ಯ. ಇದೀಗ ಕೆ.ಎಂ.ಶಿವಲಿಂಗೇಗೌಡ ಅವರು ಸದನದಲ್ಲಿ ಮಾತನ್ನಾಡುವಾಗ ಬಿಜೆಪಿ ನಾಯಕರಿಗೆ ಎಚ್ಚರಿಕೆಯನ್ನ ಕೊಟ್ಟಿದ್ದಾರೆ. ನೀವೂ ಮಾತನ್ನಾಡುವಾಗ ನಾನು ತುಟಿಕ್ ಪಿಟಿಕ್ ಅಂದಿಲ್ಲ. ನೀವೂ ಅನ್ನಬಾರದು ಎಂದಿದ್ದಾರೆ.

2025-26ನೇ ಸಾಲಿನ ಎಂದು ಶಿವಲಿಂಗೇಗೌಡ ಅವರು ಮಾತು ಶುರು ಮಾಡುತ್ತಲೇ ಬಿಜೆಪಿ ನಾಯಕರು ಧ್ವನಿ ಏರಿಸಿದ್ದರು. ಆಗ ಶಿವಲಿಂಗೇಗೌಡ ಅವರು ಅಶೋಕಣ್ಣ, ನೀನು ಮಾತನ್ನಾಡುವಾಗ ನಾನು ಒಂದು ಚೂರು ಮೇಲಕ್ಕೆ ಎದ್ದು ನಿಂತಿದ್ದಿಲ್ಲ. ನಾನು ಬಿಜೆಪಿಯವರಿಗೆ ಯಾರಿಗೂ ಏನು ಅಂದಿಲ್ಲ. ನಾನು ಏನು ಕೇಳಿಲ್ಲ. ದಯಮಾಡಿ ನಾನು ಮಾತನ್ನಾಡುವಾಗಲೂ ನೀವೇನು ಮಾತನಾಡಬಾರದು. ನಮ್ಮ ಮುಖ್ಯಮಂತ್ರಿಗಳನ್ನ, ನಮ್ಮ. ಸರ್ಕಾರವನ್ನ ಟೀಕೆ ಮಾಡಿದ್ರಿ ಅದಕ್ಕೆ ಪೂರಕವಾಗಿ ಅಂಕಿ ಅಂಶಗಳ ಸಮೇತ, ಕಾನೂನಾತ್ಮಕವಾಗಿ ಎಂದು ಹೇಳುವಾಗಲೇ ಮತ್ತೆ ಬಿಜೆಪಿ ನಾಯಕರ ಧ್ವನಿ ಕೇಳಿಸಿದೆ.

ಅಯ್ಯೋ ಇರ್ರೀ ಸ್ವಾಮೀ, ಏನಪ್ಪ ಇದು ಸದನ. ದಯಮಾಡಿ ಯಾರೂ ಮಧ್ಯೆ ಡಿಸ್ಟರ್ಬ್ ಮಾಡಬೇಡಿ. ನಾನೇನಾದ್ರೂ ತಪ್ಪು ಮಾತು ಹೇಳಿ ಸದನಕ್ಕೇನಾದರೂ ಮಿಸ್ ಗೈಡ್ ಮಾಡಿದ್ರೆ, ಮಿಸ್ ಲೀಡ್ ಮಾಡಿದ್ರೆ ತದ ನಂತರ ಏನು ಬೇಕಾದರೂ ನನ್ನ ಮೇಲೆ ಶಿಸ್ತು ಕ್ರಮ ಜರುಗಿಸಿ, ನಾನೇನು ಬೇಡ ಅನ್ನಲ್ಲ. ಸುಮ್ಮನೆ ಮಾತನ್ನಾಡುವಾಗ ನೀವೇನೋ ಹೇಳೋದು, ನಾನೇನೋ ಹೇಳೋದು ಅದು ಬೇರೆ ರೀತಿ ಹೋಗೋದು ಅದು ಬೇಡ. ನಿಮ್ಮನ್ನೇ ನೋಡಿ ಮಾತನ್ನಾಡ್ತೇನೆ. ಆ ಕಡೆ ತಿರುಗಿಯೂ ನೋಡಲ್ಲ. ಕಳೆದ ಬಾರಿಯ ಅಧಿವೇಶನದಲ್ಲಿಯೇ ಸಾಕಾಗಿದೆ ಎಂದು ಮಾತನ್ನ ಶುರು ಮಾಡಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...