ಎನ್ಕೌಂಟರ್ ದಯಾ ನಾಯಕ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಂಥೆಂತ ಎನ್ಕೌಂಟರ್ ಮಾಡಿ, ರೌಡಿಗಳನ್ನ ನಡುಗಿಸಿದವರು. ಈಗ ತಮ್ಮ ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಈ ದಿನದಂದು ಅವರರ ಬಗೆಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಅದು 1990ರ ದಶಕ. ಮುಂಬೈ ಅಂಡರ್ ವರ್ಲ್ಡ್ ನಲ್ಲಿ ದಾವೂದ್ ಇಬ್ರಾಹಿಂನಿಂದ ಹಿಡಿದು ಚೋಟಾ ರಾಜನ್ ವರೆಗೆ ಎಲ್ಲರೂ ಮುಂಬೈ ನಗರವನ್ನ ಆಳ್ತಾ ಇದ್ದಂತ ಸಮಯ. ಅವರದ್ದೇ ದರ್ಬಾರು. ಮಿತಿಮೀರಿದ ನೆವಳಿಕೆಯೂ ಆಗಿತ್ತು. ಇದೆಲ್ಲವನ್ನು ಸರಿಪಡಿಸುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ ಎನ್ಕೌಂಟರ್ ಸದ್ದು ಮಾಡಿತ್ತು. ಭೂಗತ ಪಾತಕಿಗಳನ್ನ ಆ ಎನ್ಕೌಂಟರ್ ನಡುಗುವಂತೆ ಮಾಡಿತ್ತು. ಆ ಭಯ ಹುಟ್ಟಿಸಿದ್ದು ಇದೇ ದಯಾ ನಾಯಕ್.
ದಯಾ ನಾಯಕ್ ಆ ಸಯಮದಲ್ಲಿ ಮುಂಬೈನಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಅಂತಾನೇ ಹೆಸರನ್ನ ಪಡೆದುಕೊಂಡರು. 1995 ರಿಂದ 2000ದವರೆಗೆ ಸುಮಾರು 85ಕ್ಕೂ ಹೆಚ್ಚು ಎನ್ಕೌಂಟರ್ ಮಾಡಿದ್ದರು. 1995ರಲ್ಲಿ ಮುಂಬೈ ಪೊಲೀಸ್ ಗೆ ಸಬ್ ಇನ್ಸ್‌ಪೆಕ್ಟರ್ ಆಗಿ ಸೇರ್ತಾರೆ. 1996 ರಲ್ಲಿ ಜೂಹು ಪೊಲೀಸ್ ಠಾಣೆಯಲ್ಲಿ ತಮ್ಮ ಮೊದಲ ಎನ್ಕೌಂಟರ್ ಮಾಡುತ್ತಾರೆ. ಈ ಎನ್ಕೌಂಟರ್ ಚೋಟಾ ರಾಜನ್ ಗ್ಯಾಂಗ್ ನ ಸದಸ್ಯರು ಸಾಯ್ತಾರೆ. ಇಲ್ಲಿಂದ ಅಂಡರ್ ವರ್ಲ್ಡ್ ಗ್ಯಾಂಗ್ ಚಿತ್ತ ದಯಾ ನಾಯಕ್ ರತ್ತ ತಿರುಗುತ್ತೆ.
ವಿಶೇಷ ಎನ್ಕೌಂಟರ್ ತಂಡದ ಭಾಗವಾಗಿದ್ದವರು ಇವರು. ದಯಾ ನಾಯಕ್ ಅವರಿಗೆ ಖ್ಯಾತಿ ಬಂದಷ್ಟೆ ವೇಗವಾಗಿ ಆರೋಪಗಳು ಬರುತ್ತವೆ. ಫೇಕ್ ಎನ್ಕೌಂಟರ್ ಆರೋಪ ಬರುತ್ತೆ. ಆದರೆ ಈ ಆರೋಪಗಳು ಕಾನೂನಲ್ಲಿ ಸಾಬೀತಾಗಿಲ್ಲ. 2006ರಲ್ಲಿ ಅಕ್ರಮ ಆಸ್ತಿ ಗಳಿಕೆಯ ಆರೋಪದಲ್ಲಿ ಅಮಾನತುಗೊಳಿಸಲಾಗುತ್ತೆ. 2010ರಲ್ಲಿ ಆರೋಪದಿಂದ ಮುಕ್ತರಾಗುತ್ತಾರೆ. 2025 ಜುಲೈ 29ರಂದು ಮಹಾರಾಷ್ಟ್ರ ಸರ್ಕಾರವೂ ಅವರನ್ನು ಎಸಿಪಿಯಾಗಿ ಬಡ್ತಿ ನೀಡಿತ್ತು. ಆದರೆ ಈ ಬಡ್ತಿ ಅವರು ನಿವೃತ್ತಿಯಾಗುವುದಕ್ಕೆ ಎರಡೇ ದಿನ ಬಾಕಿ ಇತ್ತು. ನಿನ್ನೆ ಅವರು ತಮ್ಮ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.





















