ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಮೊಟ್ಟೆಯದ್ದೇ ಜನರಿಗೆ ಆತಂಕವಾಗಿದೆ. ಮೊಟ್ಡೆ ತಿಂದರೆ ಕ್ಯಾನ್ಸರ್ ಬರುತ್ತೆ ಎಂದು ಸಂಶೋಧನೆ ಮಾಡಿದ ಬಳಿಕವಂತು ಮೊಟ್ಟೆ ಕಂಡರೆ ಓಡಿ ಹೋಗುವವರು ಹೆಚ್ಚಾಗಿದ್ದಾರೆ. ಮನೆಯಲ್ಲಿದ್ದ ಮೊಟ್ಟೆಗಳನ್ನ ತಿನ್ನುವುದಕ್ಕೂ ಭಯ ಪಡುವಂತೆ ಆಗಿದೆ. ಆದರೆ ಈ ಮೊಟ್ಟೆ ಆತಂಕಕ್ಕೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
ಎಗ್ಗೋಸ್ ಮೊಟ್ಟೆಗಳು ಮನುಷ್ಯರ ಆರೋಗ್ಯಕ್ಕರ ಹಾನಿಕಾರಕವಾಗಿದೆ. ಆಂಟಿ ಬಯೋಟಿಕ್ ನಿಂದ ಈ ಮೊಟ್ಟೆಗಳನ್ನು ಬಳಸಬಾರದೆಂದು ಮಾಹಿತಿ ಇದೆ. ಈ ಸಂಬಂದ್ ಸ್ಪಷ್ಟವಾದ ವಿಚಾರಗಳನ್ನ ತಿಳಿದುಕೊಳ್ಳುವುದಕ್ಕೆ ಇಲಾಖೆಗೆ ಹೇಳಿದ್ದೇನೆ. ಯಾಕಂದ್ರೆ ಮೊಟ್ಟೆಗಳು ಮನುಷ್ಯನ ದೇಹಕ್ಕೆ ತುಂಬಾ ಒಳ್ಳೆಯದು. ಎಗ್ಗೋಸ್ ಕಂಪನಿಯ ಸ್ಯಾಂಪಲ್ ಗಳನ್ನು ತೆಗೆದುಕೊಂಡಿದ್ದಾರೆ. ಟೆಸ್ಟ್ ಮಾಡಿದ ನಂತರದಲ್ಲಿ ಈ ವಿಚಾರವನ್ನು ತಮ್ಮ ಮುಂದೆ ಇಡಲಿದ್ದೇನೆ ಎಂದು ಸುವರ್ಣ ಸೌಧದಲ್ಲಿ ತಿಳಿಸಿದ್ದಾರೆ.
ಮೊನ್ನೆ ತಾನೇ ಎಗ್ಗೋಸ್ ಕಂಪನಿಯವರ ಮೊಟ್ಟೆಯಲ್ಲಿ ಉಪಯೋಗ ಮಾಡದೆ ಇರುವಂತ ಆಂಟಿಬಯೋಟಿಕ್ ಉಪಯೋಗಿಸಿದ್ದಾರೆ ಎಂಬ ಮಾಹಿತಿ ಇತ್ತು. ಅದರಿಂದ ಅದರ ಬಗ್ಗೆ ಸ್ಪಷ್ಟವಾದ ವಿಚಾರ ತಿಳಿದುಕೊಳ್ಳಬೇಕೆಂದು ನಮ್ಮ ಇಲಾಖೆಗೆ ತಿಳಿಸಿದ್ದೇನೆ. ಸ್ಯಾಂಪಲ್ ಗಳನ್ನು ತೆಗೆದುಕೊಳ್ಳಲಾಗಿದೆ. ಸದ್ಯದಲ್ಲಿ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸುತ್ತೇನೆ. ಯಾಕಂದ್ರೆ ಕಳೆದ ಸೆಪ್ಟೆಂಬರ್ – ಅಕ್ಟೋಬರ್ ತಿಂಗಳಲ್ಲಿ ಸುಮಾರು 125 ಮೊಟ್ಟೆಗಳ ಸ್ಯಾಂಪಲ್ಸ್ ಅನ್ನ ನಮ್ಮ ರಾಜ್ಯದಲ್ಲಿ ಚೆಕ್ ಮಾಡಿಸಿದ್ದೇವು. ಆಗ 123-124 ಗುಣಮಟ್ಟ ಇದೆ ಅಂತ ಬಂದಿತ್ತು. ಒಂದು ಮೊಟ್ಟೆಯ ಸ್ಯಾಂಪಲ್ ಮಾತ್ರ ಸ್ವಲ್ಪ ವ್ಯತ್ಯಾಸವಾಗಿತ್ತು. ಈಗ ಎಗ್ಗೋಸ್ ಕಂಪನಿಯ ಸುದ್ದಿ ಕೇಳಿ ಆತಂಕಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್