Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಸರಾ ಅಂಬಾರಿ ಆನೆ ಸ್ಮರಣಾರ್ಥ ಅರ್ಜುನ್ ಕಪ್-2023 | ಡಿಸೆಂಬರ್ 20 ರಿಂದ 24ರವರೆಗೆ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ : ಬಿ.ಕಾಂತರಾಜ್

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 19 : ದುರ್ಗಾ ಇಲೆವೆನ್ ಕ್ರಿಕೇಟರ್ಸ್ ವತಿಯಿಂದ ಸತತವಾಗಿ 8 ಬಾರಿ ದಸರಾ ಅಂಬಾರಿಯನ್ನು ಹೊತ್ತ ಆನೆ ಅರ್ಜನನ ಸ್ಮರಣಾರ್ಥ ಅರ್ಜುನ್ ಕಪ್-2023ನ್ನು ಡಿಸೆಂಬರ್ 20 ರಿಂದ 24ರವರೆಗೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹೊನಲು ರಾಜ್ಯ ಮಟ್ಟದ ಟೆನಿಸ್ ಬಾಲ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರಸಭಾ ಮಾಜಿ ಆಧ್ಯಕ್ಷರು, ಕ್ರಿಕೇಟ್ ಪಂದ್ಯಾವಳಿಯ ಆಯೋಜಕರಲ್ಲಿ ಒಬ್ಬರಾದ ಬಿ.ಕಾಂತರಾಜ್ ತಿಳಿಸಿದರು.

ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾನವ ಸ್ಮರಣಾರ್ಥ ಕ್ರಿಕೇಟ್ ಪಂದ್ಯಾವಳಿಯನ್ನು ಎಲ್ಲರು ಮಾಡುತ್ತಾರೆ ಆದರೆ ನಾವುಗಳು ಪ್ರಾಣಿಗಳ ಸ್ಮರಣಾರ್ಥ ಕ್ರಿಕೇಟ್ ಪಂದ್ಯಾವಳಿಯನ್ನು ರಾಜ್ಯದಲ್ಲಿಯೇ ಪ್ರಥಮವಾಗಿ ಹಮ್ಮಿಕೊಂಡಿದ್ದೇವೆ, ಈಗಾಲೇ ಇದರಲ್ಲಿ ಆಟವಾಡಲು ಚೆನೈ ಸೇರಿದಂತೆ ರಾಜ್ಯದ ವಿವಿಧ 35 ತಂಡಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿವೆ. ಈ ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟ್ಸ್ ಮನ್, ಉತ್ತಮ ಬೌಲರ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.

ಈ ಪಂದ್ಯಾವಳಿಯೂ ಆನೆ ಅರ್ಜುನ ಮಾತ್ರವಲ್ಲದೆ ಬಲರಾಮ ಮತ್ತು ದ್ರೋಣರ ಹೆಸರಿನಲ್ಲಿಯೂ ಸಹಾ ನಡೆಸಲಾಗುತ್ತಿದೆ . ಡಿ. 20 ರ ಸಂಜೆ 6 ಗಂಟೆಗೆ ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿರವರು ಪಂದ್ಯಾವಳಿಗೆ ಚಾಲನೆಯನ್ನು ನೀಡಲಿದ್ದಾರೆ. ಅರ್ಜುನ ಆನೆಯ ಮಾವುತರಾದ ರಾಜ ಮತ್ತು ವಿನುರವರನ್ನು ಕರೆಯಿಸಿ ಗೌರವಿಸಲಾಗುವುದು ಇದ್ದಲ್ಲದೆ ನಮ್ಮ ಕೈಲಾದ ಸಹಾಯವನ್ನು ಮಾಡಲಾಗುವುದು.

ಡಿ.23 ರಂದು ಧರ್ಮೆಂದ್ರ ಕುಮಾರ್ ರವರಿಂದ ಆನೆಗಳ ಬಗ್ಗೆ ಚಿತ್ರದುರ್ಗದ ಜನತೆಗೆ ಮಾಹಿತಿಯನ್ನು ನೀಡಲಿದ್ದಾರೆ. ಡಿ. 24 ರಂದು ಸಮಾರೋಪ ಸಮಾರಂಭದಲ್ಲಿ ಆರಣ್ಯ ಸಚಿವರಾದ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ ಅಂದು ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಗಣ್ಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಗುವುದೆಂದು ಕಾಂತರಾಜ್ ತಿಳಿಸಿದರು.

ಈ ಪಂದ್ಯಾವಳಿಯಲ್ಲಿ ಗೆದ್ದ ಪ್ರಥಮ ತಂಡಕ್ಕೆ ಅರ್ಜುನ ಟ್ರೋಫಿ ಮತ್ತು 2 ಲಕ್ಷ ರೂ, ದ್ವಿತೀಯ ಸ್ಥಾನಕ್ಕೆ  ಬಲರಾಮ ಟ್ರೋಫಿ ಮತ್ತು 1 ಲಕ್ಷ ರೂ ಹಾಗೂ ತೃತೀಯ ಸ್ಥಾನಗಳಿಸಿದ ತಂಡಕ್ಕೆ ದ್ರೋಣ ಟ್ರೋಫಿ 50 ಸಾವಿರ ಬಹುಮಾನ ನೀಡಲಾಗುವುದು.  ಪಂದ್ಯಾವಳಿಯನ್ನು ವೀಕ್ಷಿಸಲು ಆಗಮಿಸುವ ಕ್ರೀಡಾ ಪ್ರೇಮಿಗಳಿಗೆ ಉತ್ತಮವಾದ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ ಅಲ್ಲದೆ ಉತ್ತಮವಾದ ಬೆಳಕಿನ ವ್ಯವಸ್ಥೆಯನ್ನು ಸಹಾ ಮಾಡಲಾಗಿದೆ ಎಂದರು.

ಗೋಷ್ಟಿಯಲ್ಲಿ ಉದ್ಯಮಿಗಳಾದ ಸುರೇಶ್ ಬಾಬು, ಗೋಪಾಲಸ್ವಾಮಿ ನಾಯಕ್, ವೀರಶೈವ ಮುಖಂಡರಾದ ಪರಮೇಶ್ (ಕಾಫಿಪುಡಿ) ಸಿದ್ದೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment