Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಟೀ ಕುಡಿದ್ರೆ ಲಾಭ ಜಾಸ್ತಿ.. ಆದರೆ ಅದಕ್ಕೂ ಮುನ್ನ ಒಂದು ಲೋಟ ನೀರು ಕುಡಿಯಿರಿ..!

---Advertisement---

ಸಾಕಷ್ಟು ಜನ ಟೀ ಅಥವಾ ಕಾಫಿಗೆ ಅಡಿಕ್ಟ್ ಆಗಿರುವವರೆ ಹೆಚ್ಚು. ಟೀ ಕುಡಿಯದೆ ಇರುವುದಕ್ಕೆ ಆಗುವುದೇ ಇಲ್ಲ ಅಂತಾರೆ. ಟೀ ಕುಡಿಯದೆ ಮೈಂಡ್ ರಿಲ್ಯಾಕ್ಸ್ ಆಗೋದೆ ಇಲ್ಲ ಎನ್ನುವವರು ಇದ್ದಾರೆ. ಒಂದು ಲೋಟ ಟೀ ಕುಡಿದರೆ ಸಾಕು ಎಲ್ಲಾ ಕೆಲಸವನ್ನು ಬಹಳ ಬೇಗನೇ ಮಾಡಿ ಬಿಡುತ್ತಾರೆ. ಸಾಕಷ್ಟು ಜನ ಟೀಗೆ ಅಡಿಕ್ಟ್ ಆದವರೇ ಹೆಚ್ಚು. ಆದರೆ ಕೆಲವರು ಟೀ ಕುಡಿದರೆ ಆರೋಗ್ಯಕ್ಕೆ ಹಾನಿಕಾರಕ ಅಂತಾನೇ ಹೇಳ್ತಾರೆ. ಟೀ ಕುಡಿದಷ್ಟು ಗ್ಯಾಸ್ಟ್ರಿಕ್‌ ಸಮಸ್ಯೆ ಕಾಡುತ್ತದೆ ಎಂದೇ ಹೇಳುತ್ತಾರೆ.

ಅದು ಸತ್ಯವೆ ಇರಬಹುದು. ಟೀ ಕುಡಿದಾಗ ಯಾವ ಸಮಯದಲ್ಲಿ ಟೀ ಕುಡಿಯುತ್ತೀವಿ ಎಂಬುದು ಗಮನವಿರಬೇಕು. ಒಮ್ಮೊಮ್ಮೆ ಊಟ, ತಿಂಡಿ ಮಾಡುವ ಸಮಯಕ್ಕೆ ಟೀ ಕುಡಿದರೆ ಅದರಿಂದ ಊಟ, ತಿಂಡಿ ಸ್ಕಿಪ್ ಆಗುತ್ತದೆ‌. ಹೀಗಾಗಿ ಅದು ಗ್ಯಾಸ್ಟ್ರಿಕ್‌ ಗೆ ಕನ್ವರ್ಟ್ ಆಗುತ್ತದೆ. ಟೀ ಕುಡಿದರೆ ಸಂಪೂರ್ಣವಾಗಿ ಆರೋಗ್ಯವೇನು ಹಾಳಾಗುವುದಿಲ್ಲ. ಬದಲಿಗೆ ಟೀ ಕುಡಿಯುವುದಕ್ಕೂ ಮುನ್ನ ಏನು ಮಾಡಬೇಕು ಎಂಬುದನ್ನ ನೋಡಬೇಕಿದೆ.

ಟೀ ಕುಡಿಯಲೇಬೇಕು ಎಂಬ ಅಭ್ಯಾಸ ಇರುವವರು ಅದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೇಗೆ ಅಂತೀರಾ..? ನೀವೂ ಟೀ ಕುಡಿಯುವ ಮೊದಲು ಒಂದು ಗ್ಲಾಸ್ ನೀರನ್ನ ಕುಡಿಯಿರಿ. ಟೀ ನಲ್ಲಿ ಪಾಲಿಪಿನಾಲ್ಸ್ ಎಂಬ ಆಂಟಿ ಆಕ್ಸಿಡೆಂಟ್ ಇರುತ್ತದೆ. ಇದು ದೇಹಕ್ಕೆ ಒಳ್ಳೆಯದ್ದನ್ನೇ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಟೀ ಕುಡಿದಾಗ ಆಗುವ ಅನಾಹುತಗಳು, ಗ್ಯಾಸ್ಟ್ರಿಕ್‌ ಸಮಸ್ಯೆ, ಟೀ ಕುಡಿಯುವ ಮುನ್ನ ನೀರು ಕುಡಿದು ಟೀ ಕುಡಿದರೆ ಆಗುವುದಿಲ್ಲ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment