Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಾರತೀಯ ವೈದ್ಯಕೀಯ ಸಂಘದ ನೂತನ ಅಧ್ಯಕ್ಷರಾಗಿ ಡಾ. ಪಿ.ಟಿ. ವಿಜಯ್‌ ಕುಮಾರ್ ಅವಿರೋಧ ಆಯ್ಕೆ

---Advertisement---

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 25 : ಭಾರತೀಯ ವೈದ್ಯಕೀಯ ಸಂಘದ ಚಿತ್ರದುರ್ಗ ಶಾಖೆಗೆ 2023-24ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆ ಮಾಡಲಾಗಿದ್ದು, ಡಾ. ಪಿ.ಟಿ. ವಿಜಯ್‌ ಕುಮಾರ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನಗರದ ಭಾರತೀಯ ವೈದ್ಯಕೀಯ ಸಂಘದ ಹಾಲ್‌ನಲ್ಲಿ ಸೆಪ್ಟೆಂಬರ್ 22 ರಂದು (ಶುಕ್ರವಾರ) ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿಯಾದ
ಡಾ. ಸಿ. ನಾರಾಯಣ ಮೂರ್ತಿಯವರು‌ ತಿಳಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಘದ ಚಿತ್ರದುರ್ಗ ಶಾಖೆಗೆ ಆಯ್ಕೆಯಾದ ನೂತನ ಪದಾಧಿಕಾರಿಗಳ ವಿವರ
ಈ ಕೆಳಕಂಡಂತಿದೆ.

ಅಧ್ಯಕ್ಷರು : ಪಿ.ಟಿ. ವಿಜಯ್‌ ಕುಮಾರ್

ಉಪಾಧ್ಯಕ್ಷರುಗಳು :
ಡಾ. ತೋಯಜಾಕ್ಷಿ ಬಾಯಿ,
ಡಾ.ಕೃಪಾದೇವಿ ಕೆ. ಮತ್ತು
ಡಾ.ಲಕ್ಷ್ಮೀ ಪ್ರಶಾಂತ

ಕಾರ್ಯದರ್ಶಿಗಳು: ಡಾ. ಬಸವರಾಜ್ ಕೆ.ಎಂ.

ಖಜಾಂಚಿ : ಡಾ.ಕೃಷ್ಣಮೂರ್ತಿ.ಆರ್.

ಸಾರ್ವಜನಿಕ ಸಂಪರ್ಕ ಅಧಿಕಾರಿ : ಡಾ.ಆರ್.ಟಿ.ಚಂದ್ರಶೇಖರ್

ಸಹ ಕಾರ್ಯದರ್ಶಿ:                 ಡಾ.ಎಸ್.ಹೆಚ್.ದೇವರಾಜ್,                  ಡಾ.ಜಿ.ಎಸ್.ಆಶ್ವಿನಿ,
ಡಾ.ಜ್ಯೋತಿ ಶರತ್‌ಕುಮಾರ್

ಅಂತರಿಕ ಲೆಕ್ಕ ಪರಿಶೋಧಕ : ಡಾ.ಜಿ.ಬಿ.ಸುಧೀಂದ್ರ

ಕೇಂದ್ರ ಮಂಡಳಿ ಸದಸ್ಯರು :    ಡಾ.ಸಿ.ನಾರಾಯಣಮೂರ್ತಿ,                ಡಾ.ಎಂ.ಯೋಗೇಂದ್ರ

ರಾಜ್ಯ ಮಂಡಳಿ ಸದಸ್ಯರು :             ಡಾ.ಎಸ್.ಪಿ.ರವೀಂದ್ರ,
ಡಾ.ಎಸ್.ಪಿ.ದಿನೇಶ್,
ಡಾ.ಎಸ್. ಕೆ. ಮೋಹನ್ ಕುಮಾರ್
ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...