ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 11 : ಕೋಮಲ ನರ್ಸಿಂಗ್ ಹೋಂನ ಡಾ.ಕೋಮಲ ವಿ.ಮರೆಗುದ್ದಿರವರು ಏಕನಾಥೇಶ್ವರಿ ಅಮ್ಮನ ಪಾದಗುಡಿ ಜಾತ್ರೆ ಬಯಲಿನಲ್ಲಿ ಅಂದಾಜು ಹತ್ತು ಲಕ್ಷ ರೂ.ಗಳ ಸ್ವಂತ ವೆಚ್ಚದಲ್ಲಿ ನಿರ್ಮಿಸಿರುವ ಮಹಾದ್ವಾರ ಬಾಗಿಲನ್ನು ಶುಕ್ರವಾರ ಉದ್ಘಾಟಿಸಿದರು.
ದಿವಂಗತರುಗಳಾದ ಶಾಂತಮ್ಮ, ಪಿ.ಹೆಚ್.ಚನ್ನವೀರಪ್ಪ ಹಾಗೂ ಪಿ.ಸಿ.ವೀರಣ್ಣ ಪಟ್ಟಣಶೆಟ್ರು ಇವರುಗಳ ಸ್ಮರಣಾರ್ಥವಾಗಿ ಏಕನಾಥೇಶ್ವರಿ ಅಮ್ಮನವರ ಪಾದಗುಡಿ ಜಾತ್ರೆ ಬಯಲಿನಲ್ಲಿ ನಿರ್ಮಿಸಲಾಗಿರುವ ಮಹಾದ್ವಾರ ಬಾಗಿಲು ಲೋಕಾರ್ಪಣೆಗೊಳಿಸಿ ನಂತರ ಸನ್ಮಾನ ಸ್ವೀಕರಿಸಿ ಏಕನಾಥೇಶ್ವರಿ ಅಮ್ಮ ನನ್ನ ಇಷ್ಟಾರ್ಥ ಈಡೇರಿಸಿದ್ದರಿಂದ ದ್ವಾರಬಾಗಿಲು ನಿರ್ಮಿಸಿ ಹರಕೆ ತೀರಿಸಿದ್ದೇನೆ. ಸಮಸ್ತ ಜನತೆಗೆ ಒಳಿತುಂಟು ಮಾಡಲಿ ಎಂದು ಏಕನಾಥೇಶ್ವರಿ ಅಮ್ಮನವರಲ್ಲಿ ಪ್ರಾರ್ಥಿಸಿದರು.
ಏಕನಾಥೇಶ್ವರಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ, ನಿರ್ದೇಶಕರುಗಳಾದ ಬಿ.ರಾಮಜ್ಜ, ಎಸ್.ಬಿ.ಎಲ್.ಮಲ್ಲಿಕಾರ್ಜುನ್, ಶಾರದ ಬ್ರಾಸ್ ಬ್ಯಾಂಡ್‍ನ ಗುರುಮೂರ್ತಿ, ಕೆ.ಪಿ.ಶಿವಕುಮಾರ್, ತಾಲ್ಲೂಕು ಕಚೇರಿಯ ಕಂದಾಯ ನಿರೀಕ್ಷಕ ಪ್ರಾಣೇಶ್, ಗ್ರಾಮ ಆಡಳಿತಾಧಿಕಾರಿ ಶ್ರೀನಿವಾಸ್, ಕೆ.ಇ.ಬಿ.ಷಣ್ಮುಖಪ್ಪ ಹಾಗೂ ನೂರಾರು ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.


















