Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಾ.ಕಂಠೀರವ ಬಾಲ ಸರಸ್ವತಿ ನಿಧನ ; ನಾಳೆ ಅಂತ್ಯಕ್ರಿಯೆ !

---Advertisement---

 

ಸುದ್ದಿಒನ್, ಚಿತ್ರದುರ್ಗ, ಮೇ.10 : ಹಿರಿಯೂರು ತಾಲ್ಲೂಕಿನ ಬಸಪ್ಪನಮಾಳಿಗೆ ಗ್ರಾಮದ ಡಾ. ಕಂಠೀರವ ಬಾಲ ಸರಸ್ವತಿ (86 ವರ್ಷ) ಅವರು ಹೃದಯಾಘಾತದಿಂದ ನಿನ್ನೆ (ಮೇ. 09) ಮಧ್ಯಾನ್ಹ ಮೂರು ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ನಿಧನರಾದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಂತ್ಯಕ್ರಿಯೆ : ಅವರ ಪಾರ್ಥಿವ ಶರೀರವನ್ನು ನಾಳೆ        (ಮೇ. 11) ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಗೇಟ್ ನಂ. 3 ರ ಶವಾಗಾರದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ 4 ಗಂಟೆಗೆ ಹೆಬ್ಬಾಳದ ಚಿರಶಾಂತಿ ಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಿನ್ನೆಲೆ :
ಕಂಠೀರವ ಬಾಲಸರಸ್ವತಿ ಯವರು ಹಿರಿಯೂರು ತಾಲೂಕಿನ ಬಸಪ್ಪನ ಮಾಳಿಗೆ ಗ್ರಾಮದ ಬಿ.ಜಿ. ತಿಮ್ಮಾರೆಡ್ಡಿ ಮತ್ತು ತಿಪ್ಪಮ್ಮ ದಂಪತಿಗಳ ಮಗನಾಗಿ 22/2/1941 ರಂದು ಹಿರಿಯ ಮಗನಾಗಿ ಜನಿಸಿದರು.

1956 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಯಲ್ಲಿ ಮರಡಿಹಳ್ಳಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಸಾಧನೆ ಮಾಡಿದವರು. ಅನಂತರ ಚಿತ್ರದುರ್ಗದಲ್ಲಿ inter-mediate ಪೂರ್ಣಗೊಳಿಸಿ ಅನಂತರ ‘ಎಂ.ಬಿ.ಬಿ.ಎಸ್ ‘ ಕೋರ್ಸ್ ಗೆ ಸೇರಿ 1964 ರಲ್ಲಿ ಪೂರ್ಣ ಗೊಳಿಸಿ ‘Anasthesia’ ವಿಭಾಗದಲ್ಲಿ
‘ಎಂ.ಡಿ’ ಪೂರ್ಣಗೊಳಿಸಿ ‘1966’ ರಲ್ಲಿ ಇಂಗ್ಲೆಂಡ್ ನಲ್ಲಿ ವೈದ್ಯಕೀಯ ಸೇವೆ ಆರಂಭಿಸಿದರು.

ಅನಂತರ ಚಿಕಾಗೋ ದಲ್ಲಿ ಹದಿನೈದು ವರ್ಷ ಸೇವೆ ಸಲ್ಲಿಸಿ 1985 – 86 ರಲ್ಲಿ ಭಾರತಕ್ಕೆ ಹಿಂದಿರುಗಿ ಬೆಂಗಳೂರಿನ ಪ್ರತಿಷ್ಟಿತ ರಾಮಯ್ಯ ಮೆಡಿಕಲ್ ಕಾಲೇಜಿನ ಮುಖ್ಯಸ್ಥರು ಮತ್ತು ದಾವಣಗೆರೆ ಎಸ್. ಎಸ್. ಮೆಡಿಕಲ್ ಕಾಲೇಜಿನ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದರು. ಮುಂದಿನ ದಿನಗಳಲ್ಲಿ ಚಿತ್ರದುರ್ಗದಲ್ಲಿ ಬಸವೇಶ್ವರ ಆಸ್ಪತ್ರೆ ಸ್ಥಾಪನೆ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮತ್ತು ಬೆಳ್ಳೂರಿನ ಆದಿ ಚುಂಚನಗಿರಿ ಆಸ್ಪತ್ರೆ ಯಲ್ಲೂ ಸೇವೆ ಸಲ್ಲಿಸಿದ್ದರು ಹಾಗೂ ‘kamachur institute of medical science advisor’ ಆಗಿ ಅನೇಕ ಮೆಡಿಕಲ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರಿನ ಸೌತ್ ಸೆಂಟ್ರಲ್ ಪಾಸ್ಟ್ ಪ್ರೆಸಿಡೆಂಟ್, ಬೆಂಗಳೂರಿನ ಸ್ಟಡಿ ಸರ್ಕಲ್ ಪಾಸ್ಟ್ ಪ್ರೆಸಿಡೆಂಟ್ ಆಗಿದ್ದರು. ಮತ್ತು ಅಧ್ಯಕ್ಷರು student wellfare trust ಮರೆಡಿಹಳ್ಳಿ ಹಾಗೂ ಗೌರವಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಮರೆಡಿಹಳ್ಳಿ ಆಗಿದ್ದರು. ವೈದ್ಯ ವೃತ್ತಿ ಯೊಂದಿಗೆ ಸಮಾಜ ಮುಖಿ ಸೇವೆ ಮಾಡುತ್ತ ವಿದ್ಯಾಭ್ಯಾಸ ಮಾಡಿದ ಊರಿಗೆ, ಶಾಲೆಗಳಿಗೆ ಹಾಗು ಅನೇಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಹಾಯ ಹಸ್ತ ಚಾಚಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...