Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸಾಮಾಜಿಕ ಕ್ರಾಂತಿಯ ಮೂಲಕ ಬದಲಾವಣೆಗೆ ನಾಂದಿಹಾಡಿದವರು ಡಾ.ಬಿ.ಆರ್.ಅಂಬೇಡ್ಕರ್ : ನರೇನಹಳ್ಳಿ ಅರುಣ್ ಕುಮಾರ್

---Advertisement---

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್ 14 : ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಜಾತಿ,ಧರ್ಮ ಮೀರಿ ನಿಂತ ನಾಯಕರಾಗಿದ್ದರು ಎಂದು ಪ್ರೋ.ಡಾ.ನಟರಾಜ್ ಹೇಳಿದರು.

ನಗರ ಸಮೀಪದ ಧಮ್ಮ ಕೇಂದ್ರದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆ,ಧಮ್ಮ ಸಾಂಸ್ಕೃತಿಕ ಕೇಂದ್ರ ಮತ್ತು ಶಾಂತಿ ಮತ್ತು ಸೌಹಾರ್ದ ವೇದಿಕೆವ ತಿಯಿಂದ ಹಮ್ಮಿಕೊಳ್ಳಲಾಗಿದ್ದ,ಡಾ.ಬಿ.ಆರ್.ಅಂಬೇಡ್ಕರ್ ರವರ 134 ನೇಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಬಾಬಾಸಾಹೇಬ್ ಅಂಬೇಡ್ಕರ್ ರವರು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಚಿಂತಕರಾಗಿದ್ದರು. ದಲಿತ, ಶೋಷಿತ, ಹಿಂದುಳಿದ ಮತ್ತು ಮಹಿಳೆಯರ ಪರವಾದ ನಿಲುವು ಹೊಂದಿದ್ದ ಬಾಬಾಸಾಹೇಬ್ ರು ಸಾಮಾಜಿಕವಾಗಿ ಸಮಾನತೆಯನ್ನು ಬಯಸಿದವರು ಹಾಗೂ ಶಿಕ್ಷಣದ ಹಕ್ಕಿಗಾಗಿ ಹೋರಾಟ ನಡೆಸಿದವರಾಗಿದ್ದರು. ಅಮೇರಿಕಾ ವಿಶ್ವವಿದ್ಯಾಲಯ ಮತ್ತು ಲಂಡನ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದುಕೊಂಡಿದ್ದ ಬಾಬಾಸಾಹೇಬ್ ರು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಘನತೆಯನ್ನು ಎತ್ತಿಹಿಡಿದ ವ್ಯಕ್ತಿತ್ವ ಹೊಂದಿದ್ದವರಾಗಿದ್ದರು ಎಂದರು.

ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷರಾದ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಭಾರತದ ಧಮನಿತ ಸಮುದಾಯದ ಧನಿಯಾಗಿದ್ದವರು, ದಲಿತರಿಗೆ ಚೌಡಯ್ಯನಕೆರೆ ನೀರು ಮುಟ್ಟುವ ಹೋರಾಟ, ಕಾಳರಾಂ ದೇವಸ್ಥಾನದ ಪ್ರವೇಶದಂತಹ ಸಾಮಾಜಿಕ ಕ್ರಾಂತಿಯ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿಹಾಡಿದವರು.

ದೇಶಕ್ಕೆ ಪವಿತ್ರ ಸಂವಿಧಾನ ನೀಡಿದಂತಹ ವ್ಯಕ್ತಿಯನ್ನು ಅವಮಾನಿಸಿದಂತವರು ಇಂದು ರಾಜಕೀಯ ಕಾರಣಕ್ಕೋ ,ಅವರುಗಳ ಅಸ್ತಿತ್ವಕ್ಕೋ ಅವರ ಹೆಸರು ಹೇಳಿಕೊಂಡು ಓಡಾಡುತ್ತಿರುವುದು ನೋಡಿದರೆ ಅಂಬೇಡ್ಕರ್ ಹೆಸರೆಳದೆ ಬದುಕಿಲ್ಲ ಅನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಅನಿಸುತ್ತದೆ ಎಂದರು.

ವಿಮುಕ್ತಿ ವಿದ್ಯಾ ಸಂಸ್ಥೆ,ಧಮ್ಮ ಕೇಂದ್ರದಲ್ಲಿ ಅಂಬೇಡ್ಕರ್ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮಗಳೆಲ್ಲವೂ ಕೂಡ ಸಂವಿಧಾನ,ಪ್ರಜಾಪ್ರಭುತ್ವ,ಸಂವಿಧಾನ ಪೀಠಿಕೆಗೆ ಪೂರಕವಾಗಿತ್ತು.

134 ನೇ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮವನ್ನು ವಿಶ್ವ ಸಾಗರ್ ಮತ್ತು ಅನ್ನಪೂರ್ಣ ದಂಪತಿಗಳು ವಿಶೇಷವಾಗಿ ಆಯೋಜನೆ ಮಾಡುವ ಮೂಲಕ ಜಯಂತಿಯನ್ನು ಸಾರ್ಥಕಗೊಳಿಸಿದರು.

ಅಂಬೇಡ್ಕರ್ ಜಯಂತಿ ಆಚರಣೆ ಸಂದರ್ಭದಲ್ಲಿ
ಬಸವೇಶ್ವರ ವೃೆದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ರವರು, ಬಸವೇಶ್ವರ ವಿದ್ಯಾ ಸಂಸ್ಥೆಯ ವಿ.ಕೆ.ಶಂಕರಪ್ಪ, ಅಲೆಮಾರಿ ಸಂಘಟನೆ ಮುಖಂಡರಾದ ವಸಂತ್ ಕುಮಾರ್ ,ಬಾಬು,ವಿಮುಕ್ತಿಯ ಸಂಯೋಜಕರಾದ ಶ್ರೀಮತಿ ನಾಗರತ್ನಮ್ಮ,ಬೀಬಿಜಾನ್,ಹೆಚ್,ಕುಮಾರ್ ,ಧಮ್ಮ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾದ ಅರಣ್ಯ ಸಾಗರ್, ಮತ್ತು ಸುತ್ತಮುತ್ತಲಿನ ಗ್ರಾಮದ ಕಿಶೋರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೃತ್ಯ ರೂಪಕಗಳನ್ನು ಪ್ರದರ್ಶನ ನೀಡಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...