Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕನ್ನಡ ಭಾಷೆಯನ್ನು ಕಡೆಗಣಿಸದಿರಿ ; ಸಾಧನೆಗೆ ಭಾಷೆ ಅಡ್ಡಿಯಾಗಲಾರದು: ಶಾಸಕ ಟಿ ರಘುಮೂರ್ತಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ನವೆಂಬರ್. 01 : ಕನ್ನಡ ಭಾಷೆ ಜನ್ಮ ನೀಡಿದ ತಾಯಿಗೆ ಸಮಾನವಾದದ್ದು ಕನ್ನಡ ರಾಜ್ಯೋತ್ಸವವನ್ನು ತಾಯಿಯ ಜನ್ಮ ದಿನದಂತೆ ಆಚರಿಸಬೇಕು ಎಂದು ಶಾಸಕ ಟಿ ರಘುಮೂರ್ತಿ ಕರೆ ನೀಡಿದರು.

ನಗರದ ಬಿಎಂಜಿಎಚ್ ಎಸ್ ಪ್ರೌಢಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 70 ನೇ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ ಕರ್ನಾಟಕದ ಏಕೀಕರಣಕ್ಕಾಗಿ ಕನ್ನಡ ಭಾಷೆ ನೆಲ ಜಲ  ಉಳುವಿಗಾಗಿ‌ ಹೋರಾಡಿದ ಕರ್ನಾಟಕದ ಏಕೀಕರಣದ ಶಿಲ್ಪಿ ಮಾಜಿ ಮುಖ್ಯಮಂತ್ರಿ ಚಿತ್ರದುರ್ಗದ ನಿಜಲಿಂಗಪ್ಪ ಸೇರಿದಂತೆ ಹಿರಿಯರನ್ನು ಸ್ಮರಿಸುವುದು ಆದ್ಯ ಕರ್ತವ್ಯ ಕನ್ನಡ ಭಾಷೆ ಸಾಹಿತ್ಯಕ್ಕೆ ನಮ್ಮ ನಾಡಿನ ಕವಿ ಮಹೋನ್ನತರು ಎಂಟು ಜ್ಞಾನ ಪೀಠ ಪ್ರಶಸ್ತಿಗಳನ್ನು ತಂದು ಕೊಟ್ಟಿದ್ದಾರೆ. ಇಂದಿನ ಯುವ ಸಮೂಹ ಹಾಗೂ ಗ್ರಾಮೀಣ ಭಾಗದ ಪೋಷಕರು ಸಹ ನಮ್ಮ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂಬ ಮಹದಾಸೆಯಿಂದ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡ ಭಾಷೆಯನ್ನು ಕಡೆಗಣಿಸುತಿದ್ದಾರೆ.

ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿ ಅನೇಕರು ಉನ್ನತ ಹುದ್ದೆ ಅಲಂಕರಿಸಿದ್ದಾರೆ ಸಾಧನೆಗೆ ಭಾಷೆ ಅಡ್ಡಿಯಾಗುವುದಿಲ್ಲ ತಂದೆ ತಾಯಿಗೆ ಗೌರವ ಸೂಚಿಸಿದಂತೆ ಭಾಷೆಗೂ ಸಹ ಅಷ್ಟೆ ಆದ್ಯತೆ ನೀಡಿ ಪ್ರೀತಿಸಬೇಕು ರಾಜ್ಯದಲ್ಲಿ ಈಗಾಗಲೇ ಸರ್ಕಾರದ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಿ ಆಂಗ್ಲ ಮಾಧ್ಯಮದಲ್ಲಿಯೇ ಎಲ್ಕೆಜಿ ಯುಕೆಜಿ ಶಿಕ್ಷಣವನ್ನು ನೀಡಲು ಸರ್ಕಾರ ಮುಂದಾಗಿದೆ ತಾಲೂಕಿನ ಹೆಗ್ಗೆರೆ ತಾಯಮ್ಮ ಬಿ ಎಂ ಜಿ ಎಚ್ ಎಸ್ ಶಾಲೆ ಗಳನ್ನು ಸರ್ಕಾರ ಪಬ್ಲಿಕ್ ಶಾಲೆಗಳನ್ನಾಗಿ ಮಾರ್ಪಡಿಸಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತಾಡಿದ ತಹಶೀಲ್ದಾರ್ ರೆಹಾನ್ ಪಾಷ  ಕರ್ನಾಟಕದ ನೆಲ ಜಲ ಭಾಷೆಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಕನ್ನಡಕ್ಕೆ ಧಕ್ಕೆ ಬಂದಾಗ ಜಾತಿ ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಡಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ ಕರ್ನಾಟಕದಲ್ಲಿ ಜನಿಸಿ ಕನ್ನಡವನ್ನೇ ಮಾತನಾಡದಿದ್ದರೆ ನಮ್ಮತನವನ್ನು ನಾವು ಕಳೆದುಕೊಂಡಂತಾಗುತ್ತದೆ ಭಾಷೆ ವಿಚಾರದಲ್ಲಿ ಪರಭಾಷೆಯವರೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೆ ಅವರಿಗೂ ಸಹ ಕನ್ನಡವನ್ನು ಕಲಿಸಿದಾಗ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ ವೀರೇಶ್ ಮಾತನಾಡಿ ಕನ್ನಡ ರಾಜ್ಯೋತ್ಸವ ಕನ್ನಡ ಭಾಷೆ ನೆಲ ಜಲದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವಾಗಿದ್ದು ಯಾವುದೇ ಜಾತಿ ಮತ ಭೇದವಿಲ್ಲದ ಆಚರಿಸುವ ಹಬ್ಬವಾಗಿದೆ. 1956 ರಲ್ಲಿ ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಣೆ ಮಾಡಿ ಮೈಸೂರು ರಾಜ್ಯವಾಗಿ ರೂಪುಗೊಂಡು 1972ರಲ್ಲಿ ಕರ್ನಾಟಕ ಎಂಬ ಹೆಸರಿನೊಂದಿಗೆ ನಾಮಾಂಕಿತಗೊಂಡಿತು ಅಂದಿನಿಂದ ಹೊಸ ರೂಪ ಪಡೆದು ಇಂದು 52ರ ಸಂಭ್ರಮ ಆಚರಣೆ ಮಾಡಲಾಗುತ್ತಿದೆ. ಆಡಳಿತದಲ್ಲಿ ಶಿಕ್ಷಣದಲ್ಲಿ ಉದ್ಯಮಗಳಲ್ಲಿ ತಂತ್ರಜ್ಞಾನ ಬಳಕೆಯಲ್ಲಿ ಕನ್ನಡ ವ್ಯಾಪಕವಾಗಿ ಬಳಕೆಯಾಗಬೇಕು ಇದರಿಂದ ಕನ್ನಡ ಭಾಷೆ ಸಂಸ್ಕೃತಿ ಕನ್ನಡತನ ಉಳಿಯಲು ಸಾಧ್ಯವಾಗುತ್ತದೆ ಕುವೆಂಪು ಮಾಸ್ತಿ ಶಿವರಾಮ ಕಾರಂತ ಸೇರಿದಂತೆ ಹಲವರು ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ನಡೆಸಿದ್ದಾರೆ ಕನ್ನಡ ರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸುವ ಮುನ್ನ ಕನ್ನಡ ಭಾಷೆಯ ಉಳಿವಿನ ಬಗ್ಗೆ ನಮ್ಮಲ್ಲಿ ಜಾಗೃತಿ ಮೂಡಬೇಕು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಗಣ್ಯರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.ಕಲೆ ಸಾಮಾಜಿಕ ಕ್ಷೇತ್ರ ವಿ ತಿಪ್ಪೇಸ್ವಾಮಿ ಜಾನಪದ ಪಿ ಓದಜ,, ಒಮ್ಮೆ ನನ್ನ ಒ ನನ್ನ ಬಗ್ಗೆ ಒತ್ತು ನನ್ನ ಓಕೆ ಒ ಜಾರಿ ಬಗ್ಗೆಬಣ್ಣ ಸಾಹಿತ್ಯ ಗಾಯನ ಪಿ ರಾಜಣ್ಣ ಕ್ರೀಡೆ ಸಾತ್ವಿಕ್ ಎಸ್ ಚಿತ್ರಕಲೆ ಮಂಜಣ್ಣ ನಾಯಕ ಕೋಲಾಟ ನರಸಜ್ಜ ಕಾರ್ಮಿಕ ಇಲಾಖೆ ಕುಸುಮ ಕಂದಾಯ ಅನಿಲ್ ಕುಮಾರ್ ವೈದ್ಯಕೀಯ ನಂದಿನಿ ಲಾವಣ್ಯ ಶಿಕ್ಷಣ ಇಲಾಖೆ ಮಾರುತಿ ಭಂಡಾರಿ ಕೆ ಎಸ್ ಸುರೇಶ್ ಎನ್ ಮಲ್ಲೇಶ್ ಕಾಂತರಾಜ್ ಚಂದನ ಬೆಸ್ಕಾಂ ಡಿ ವೀರೇಶ್ ರವರಿಗೆ ಶಾಸಕರು ಪ್ರಶಸ್ತಿ ಪತ್ರ ಪಾರಿತೋಷಕ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಕನ್ನಡದ ಹಾಡುಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ಮಾಡಿದ 4 ಶಾಲೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಶಿಲ್ಪ ಮುರಳಿ, ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ನಗರ ಸಭೆ ಸದಸ್ಯ ರಾಘವೇಂದ್ರ ಪ್ರಕಾಶ್ ರಮೇಶ್ ಗೌಡ ಜಯಣ್ಣ ಬಿ ಓ ಕೆ ಎಸ್ ಸುರೇಶ್, ತಾಲೂಕು ಇಓ ಎಚ್ ಶಶಿಧರ್. ಡಿವೈಎಸ್ಪಿ ಸತ್ಯನಾರಾಯಣರಾವ್.. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now