ನಟ ಡಾಲಿ ಧನಂಜಯ್ ಸ್ನೇಹಿತರ ಜೊತೆಗೂಡಿ ಜಾಲಿ ಟ್ರಿಪ್ ನಲ್ಲಿದ್ದಾರೆ. ನಟ ನಾಗಭೂಷಣ್ ಅಂಡ್ ಟೀಂ ಅಮೆರಿಕಾದಲ್ಲಿ ಬೀಡು ಬಿಟ್ಟಿದೆ. ಅಷ್ಟೇ ಅಲ್ಲ ಅಮೆರಿಕಾದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿನ ವಿಶೇಷತೆಯನ್ನು ಸವಿಯುತ್ತಿದ್ದಾರೆ. ಅಷ್ಟೇ ಅಲ್ಲ ಡ್ರೈವರ್ ಇಲ್ಲದ ಕಾರಲ್ಲಿ ಓಡಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಅಮೆರಿಕಾದಲ್ಲಿ ಡ್ರೈವರ್ ಇಲ್ಲದ ಕಾರು ಚಾಲನೆಯ ಟೆಕ್ನಾಲಜಿ ಈಗಾಗಲೇ ಬಳಕೆಯಲ್ಲಿದೆ. ಡಾಲಿ ಧನಂಜಯ್, ತನ್ನ ಸ್ನೇಹಿತರೊಂದಿಗೆ ಅಂತ ಕಾರಲ್ಲಿ ಪ್ರಯಾಣ ಮಾಡಿ, ಎಕ್ಸೈಟ್ ಆಗಿದ್ದಾರೆ. ಜೊತೆ ಫುಲ್ ಖುಷಿಯಾಗಿದ್ದಾರೆ. ಡ್ರೈವರ್ ಇಲ್ಲದೆ ಇರುವ ಕಾರಲ್ಲಿ ಹೊಇಗುವುದು ಕೊಂಚ ಭಯವೇ ಆದರೂ, ಅದರ ಅನುಭವವೇ ಬೇರೆ ಥ್ರಿಲ್ ಕೊಟ್ಟಿದೆ. ಹೀಗಾಗಿ ಡಾಲಿ ಅಂಡ್ ಟೀಂ ಖುಷಿಯಾಗಿದೆ.
ಡಾಲಿ ಧನಂಜಯ್ ಹಾಗೂ ನಟ ನಾಗಭೂಷಣ್ ಸದ್ಯ ‘ಟಗರು ಪಲ್ಯ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಟಗರು ಒಕ್ಯ ಮೂಲಕ ಲವ್ಲಿ ಸ್ಟಾರ್ ಪ್ರೇಮ್ ಮಗಳು ಅಮೃತಾರನ್ನು ಸ್ಯಾಂಡಲ್ ವುಡ್ ಗೆ ಪರಿಚಯ ಮಾಡಲು ಹೊರಟಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









