Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿಮ್ಮ ಸ್ಮಾರ್ಟ್‌ ಫೋನ್‌ ಗೂ ಇರುತ್ತಾ ಎಕ್ಸ್‌ ಪೈರಿ ಡೇಟ್? ಈ ವಿಷಯ ತಿಳಿಯದಿದ್ದರೆ ನಿಮ್ಮ ಡೇಟಾ ಡೇಂಜರ್!

---Advertisement---

ನಾವು ಹೊಸ ಫೋನ್ ಖರೀದಿಸುವಾಗ ಸಾಮಾನ್ಯವಾಗಿ ಕ್ಯಾಮೆರಾ, ಬ್ಯಾಟರಿ ಅಥವಾ RAM ಬಗ್ಗೆ ಮಾತ್ರ ಯೋಚಿಸುತ್ತೇವೆ. ಆದರೆ, ಆ ಫೋನ್‌ ಗೆ ಕಂಪನಿಯು ಎಷ್ಟು ವರ್ಷಗಳವರೆಗೆ ಸಾಫ್ಟ್‌ ವೇರ್ ಸಪೋರ್ಟ್ ನೀಡುತ್ತದೆ ಎಂಬುದನ್ನು ಗಮನಿಸುವುದು ಅತ್ಯಂತ ಮುಖ್ಯ. ಒಂದು ವೇಳೆ ಫೋನ್‌ ಗೆ ಸೆಕ್ಯೂರಿಟಿ ಅಪ್‌ ಡೇಟ್ಸ್ ಬರುವುದು ನಿಂತು ಹೋದರೆ, ನಿಮ್ಮ ಫೋನ್ ಹ್ಯಾಕ್ ಆಗುವ ಅಪಾಯ ತುಂಬಾ ಹೆಚ್ಚಿರುತ್ತದೆ. ಹಾಗಾದರೆ ನಿಮ್ಮ ಫೋನ್ ಇನ್ನೂ ಸೇಫ್ ಜೋನ್‌ ನಲ್ಲಿದೆಯೇ? ಅಥವಾ ಅದರ ಜೀವಿತಾವಧಿ ಮುಗಿದಿದೆಯೇ? ಎಂಬುದನ್ನು ತಿಳಿಯಲು ಇಲ್ಲಿದೆ ಉಪಯುಕ್ತ ಮಾಹಿತಿ.

‘ಎಂಡ್ ಆಫ್ ಲೈಫ್’ (End of Life) ಎಂದರೇನು?

ಸ್ಮಾರ್ಟ್‌ ಫೋನ್ ತಯಾರಕ ಕಂಪನಿಗಳು ತಾವು ಬಿಡುಗಡೆ ಮಾಡುವ ಫೋನ್‌ ಗಳಿಗೆ ನಿರ್ದಿಷ್ಟ ಅವಧಿಯವರೆಗೆ ಮಾತ್ರ ‘ಆಪರೇಟಿಂಗ್ ಸಿಸ್ಟಮ್’ (OS) ಅಪ್‌ ಡೇಟ್ಸ್ ಮತ್ತು ‘ಸೆಕ್ಯೂರಿಟಿ ಪ್ಯಾಚ್‌’ಗಳನ್ನು ಒದಗಿಸುತ್ತವೆ. ಕಂಪನಿಯು ಈ ಅಪ್‌ ಡೇಟ್‌ಗಳನ್ನು ನೀಡುವುದನ್ನು ನಿಲ್ಲಿಸುವ ಸಮಯವನ್ನೇ ತಾಂತ್ರಿಕ ಭಾಷೆಯಲ್ಲಿ ‘ಎಂಡ್ ಆಫ್ ಲೈಫ್’ ಎನ್ನಲಾಗುತ್ತದೆ. ಒಮ್ಮೆ ಸೆಕ್ಯೂರಿಟಿ ಅಪ್‌ಡೇಟ್ಸ್ ನಿಂತು ಹೋದರೆ, ಫೋನ್‌ ನಲ್ಲಿ ಉಂಟಾಗುವ ಭದ್ರತಾ ಲೋಪಗಳನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ. ಇದನ್ನು ಬಳಸಿಕೊಂಡು ಹ್ಯಾಕರ್‌ ಗಳು ಸುಲಭವಾಗಿ ನಿಮ್ಮ ಫೋನ್ ಮೇಲೆ ದಾಳಿ ನಡೆಸಿ, ವೈಯಕ್ತಿಕ ಡೇಟಾವನ್ನು ಕದಿಯಬಹುದು.

ನಿಮ್ಮ ಫೋನ್‌ ನ ಎಕ್ಸ್‌ ಪೈರಿ ಡೇಟ್ ತಿಳಿಯುವುದು ಹೇಗೆ?

ನಿಮ್ಮ ಫೋನ್‌ ನ ಸಾಫ್ಟ್‌ ವೇರ್ ಸಪೋರ್ಟ್ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ತಿಳಿಯಲು ಎರಡು ಸುಲಭ ಮಾರ್ಗಗಳಿವೆ:
endoflife.date ವೆಬ್‌ಸೈಟ್: ಬ್ರೌಸರ್‌ನಲ್ಲಿ ಈ ವೆಬ್‌ಸೈಟ್ ಓಪನ್ ಮಾಡಿ, ನಿಮ್ಮ ಫೋನ್ ಬ್ರಾಂಡ್ ಮತ್ತು ಮಾಡೆಲ್ ಹೆಸರನ್ನು ಸರ್ಚ್ ಮಾಡಿ. ಅಲ್ಲಿ ನಿಮ್ಮ ಫೋನ್‌ ಗೆ ಸಾಫ್ಟ್‌ ವೇರ್ ಸಪೋರ್ಟ್ ಕೊನೆಗೊಳ್ಳುವ ನಿಖರವಾದ ದಿನಾಂಕ ತಿಳಿಯುತ್ತದೆ.
ಗೂಗಲ್ ಸರ್ಚ್: ಗೂಗಲ್‌ ನಲ್ಲಿ ನಿಮ್ಮ ಮೊಬೈಲ್ ಮಾಡೆಲ್ ಹೆಸರು + end of software support ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ, ಕಂಪನಿಯ ಅಧಿಕೃತ ವೆಬ್‌ಸೈಟ್ ಮಾಹಿತಿ ನಿಮಗೆ ಸಿಗುತ್ತದೆ.

ಅಪ್‌ ಡೇಟ್ ನಿಂತರೆ ಯಾವ ಜಾಗ್ರತೆಗಳನ್ನು ವಹಿಸಬೇಕು?
ಒಂದು ವೇಳೆ ನಿಮ್ಮ ಫೋನ್‌ ಗೆ ಅಪ್‌ ಡೇಟ್‌ ಗಳು ಬರುವುದು ನಿಂತು ಹೋದರೆ, ಅದನ್ನು ತಕ್ಷಣವೇ ಬಿಸಾಡಬೇಕಾಗಿಲ್ಲ. ಆದರೆ, ಜಾಗರೂಕರಾಗಿರಬೇಕು:

ಸಾಫ್ಟ್‌ ವೇರ್ ಸಪೋರ್ಟ್ ಮುಗಿದಿರುವ ಫೋನ್‌ ಗಳಲ್ಲಿ ಬ್ಯಾಂಕಿಂಗ್ ಆ್ಯಪ್ಸ್, ಯುಪಿಐ (UPI) ಪೇಮೆಂಟ್‌ ಗಳು ಅಥವಾ ಆನ್‌ ಲೈನ್ ಶಾಪಿಂಗ್‌ ನಂತಹ ಆರ್ಥಿಕ ವಹಿವಾಟುಗಳನ್ನು ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಂತಹ ಹಳೆಯ ಫೋನ್‌ಗಳನ್ನು ಕೇವಲ ಮ್ಯೂಸಿಕ್ ಕೇಳಲು, ವಿಡಿಯೋ ವೀಕ್ಷಿಸಲು ಅಥವಾ ಮಕ್ಕಳ ಆನ್‌ಲೈನ್ ಕ್ಲಾಸ್‌ ಗಳಿಗಾಗಿ ಮಾತ್ರ ಬಳಸಿಕೊಳ್ಳುವುದು ಸುರಕ್ಷಿತ.

ಹೊಸ ಫೋನ್ ಖರೀದಿಸುವಾಗ ಸ್ಮಾರ್ಟ್ ನಿರ್ಧಾರ ತಗೊಳ್ಳಿ!
ಭವಿಷ್ಯದಲ್ಲಿ ನೀವು ಹೊಸ ಫೋನ್ ಖರೀದಿಸುವಾಗ ಕೇವಲ ಡಿಸೈನ್ ಅಥವಾ ಕ್ಯಾಮೆರಾವನ್ನು ಮಾತ್ರ ನೋಡಬೇಡಿ. ಆ ಕಂಪನಿಯು ಎಷ್ಟು ವರ್ಷಗಳವರೆಗೆ ಸಾಫ್ಟ್‌ ವೇರ್ ಅಪ್‌ಡೇಟ್ ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸದ್ಯಕ್ಕೆ ಗೂಗಲ್ ಮತ್ತು ಸ್ಯಾಮ್‌ ಸಂಗ್‌ ನಂತಹ ಪ್ರಮುಖ ಕಂಪನಿಗಳು ತಮ್ಮ ಕೆಲವು ಮಾಡೆಲ್‌ ಗಳಿಗೆ ಬರೋಬ್ಬರಿ 7 ವರ್ಷಗಳವರೆಗೆ ಅಪ್‌ಡೇಟ್ ನೀಡುವುದಾಗಿ ಘೋಷಿಸಿವೆ. ಆದ್ದರಿಂದ, ಖರೀದಿಸುವ ಮುನ್ನವೇ ‘ಅಪ್‌ ಡೇಟ್ ಪಾಲಿಸಿ’ ಪರಿಶೀಲಿಸುವುದು ಒಬ್ಬ ಸ್ಮಾರ್ಟ್ ಗ್ರಾಹಕನ ಲಕ್ಷಣವಾಗಿದೆ. ನಿಮ್ಮ ಡೇಟಾವನ್ನು ಸುರಕ್ಷಿತವಾಗಿಡಲು ಕಾಲಕಾಲಕ್ಕೆ ಅಪ್‌ ಡೇಟ್ ಆಗುವ ಫೋನ್ ಬಳಸುವುದು ಒಂದೇ ಪರಿಹಾರ.

Join WhatsApp

Join Now

Join Telegram

Join Now