ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 30 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತಪರ ಸಂಘಟನೆಗಳು ಭೀಮ ಸಮುದ್ರದಲ್ಲಿ ನಡೆಸುತ್ತಿರುವ ಧರಣಿ ಭಾನುವಾರ 23 ನೇ ದಿನಕ್ಕೆ ಕಾಲಿಟ್ಟಿದೆ.
ತಾಲ್ಲೂಕಿನ ಭೀಮ ಸಮುದ್ರದಲ್ಲಿ ಗಣಿ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ಹಾಗೂ ಭೀಮಸಮುದ್ರ ರೈತ ಸಂಘ ವತಿಯಿಂದ ನಡೆಯುತ್ತಿರುವ ಧರಣಿ ನಿರತ ರೈತರನ್ನು ಅಪರ ಜಿಲ್ಲಾಧಿಕಾರಿ ಕೆ.ಟಿ. ಕುಮಾರಸ್ವಾಮಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಭಂಡಾರರು ಭೇಟಿ ನೀಡಿ ಧರಣಿ ನಿರತರನ್ನು ಮನೆ ಮನವೊಲಿಸಿದರು.
ಆದರೆ ಧರಣಿನಿರತ ರೈತರು ಹಾಗೂ ಗಣಿ ಬಾಧಿತ ಸದಸ್ಯರುಗಳು ಒಪ್ಪಲಿಲ್ಲ. ಭೀಮಸಮುದ್ರ ಗ್ರಾಮದ ಒಳಗೆ ಯಾವುದೇ ಕಾರಣಕ್ಕೂ ಗ್ರಾಮದ ಒಳಗೆ ಲಾರಿ ಓಡಾಡಬಾರದು ಜನರಿಗೆ ಅನಾರೋಗ್ಯದ ಸಮಸ್ಯೆ ಹಾಗೂ ಶಾಲಾ ಮಕ್ಕಳಿಗೆ ಓಡಾಡಲು ಬಹಳ ತೊಂದರೆಯಾಗುತ್ತಿದೆ ಸಾರ್ವಜನಿಕರ ಯಾವುದೇ ರೀತಿಯ ತೊಂದರೆ ಆಗದಂತೆ ಕಾರಿಡಾರ್ ಯೋಜನೆ ರೂಪಿಸಿ ಗಣಿ ಲಾರಿಗಳನ್ನು ಅದರ ಮುಖಾಂತರ ತೆಗೆದುಕೊಂಡು ಹೋಗಬೇಕು ಇಲ್ಲದಿದ್ದರೆ ಧರಣಿ ಮುಂದುವರಿಸುತ್ತೇವೆ ಎಂದು ಸಂಘದ ಸದಸ್ಯರುಗಳು ತಿಳಿಸಿದರು.
ಅಪ್ಪರ್ ಜಿಲ್ಲಾಧಿಕಾರಿ ಕೆ.ಟಿ. ಕುಮಾರಸ್ವಾಮಿ ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಟಾಸ್ಕ್ ಫೊರ್ಸ್ ರಚನೆ ಮಾಡಿ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರುತ್ತೇವೆ. ಈ ರೀತಿ ಧರಣಿ ಕೂತರೆ ನಿಮ್ಮ ಕೆಲಸ ಕಾರ್ಯಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಆದುದರಿಂದ ನೀವು ಧರಣಿಯನ್ನು ಕೈಬಿಡಿಯ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ವೀರೇಶ್ ಭೀಮಸಮುದ್ರ ಮಾತನಾಡಿ ಸುಮಾರು ವರ್ಷಗಳಿಂದ ಲಾರಿಗಳು ರಸ್ತೆಯಲ್ಲಿ ಸಂಚರಿಸುವಾಗ ಅದರಿಂದ ಬಂದ ಧೂಳು ಕಣ್ಣಿಗೆ ನೇರವಾಗಿ ತೊಂದರೆ ಮಾಡುತ್ತದೆ. ಹಾಗೂ ಶ್ವಾಶಕೋಶಕ್ಕೆ ತೊಂದರೆಯಾಗಿದೆ. ಇದನ್ನು ಯಾವ ಮೈನ್ಸ್ ಹಾಗೂ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಮೂರು ನಾಲ್ಕು ವರ್ಷಗಳಿಂದ ಬಿ.ದುರ್ಗದಿಂದ ಚಿತ್ರದುರ್ಗಕ್ಕೆ ರಸ್ತೆ ಹದಗಟ್ಟಿದ್ದು ಇದನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಅಡಿಕೆ ತೋಟ ಹಾಗೂ ಬಾಳೆ ತೆಂಗು ಬೆಳೆಗಳ ಮೇಲೆ ಧೂಳು ಕೂತು ಬೆಳೆ ನಾಶವಾಗುತ್ತಿದೆ. ರೈತರು ಬದುಕುವುದು ಕಷ್ಟವಕರವಾಗಿದೆ ಆದುದರಿಂದ ದಯಮಾಡಿ ಗ್ರಾಮದ ಒಳಗಡೆ ಲಾರಿ ಸಂಚಾರವನ್ನು ರದ್ದುಪಡಿಸಬೇಕು ಎಂದು ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದರು.

ಭೀಮಸಮುದ್ರ ರೈತ ಸಂಘದ ಅಧ್ಯಕ್ಷರಾದ ಶಂಕ್ರಮೂರ್ತಿ ಮಾತನಾಡಿ, ನಾವು ಮಾಡುತ್ತಿರುವುದು ನಮ್ಮ ಮನೆಯ ಕೆಲಸಕ್ಕೆ ಧರಣಿ ನಡೆಸುತ್ತಿಲ್ಲ. ಸಾರ್ವಜನಿಕರಿಗೆ ಒಳ್ಳೆಯದಾಗಲಿ ಎಂದು ಈ ಧರಣಿ ಮಾಡುತಿದ್ದೇವೆ. ತಾವುಗಳು ಇದನ್ನು ಗಮನ ಹರಿಸಿ ಇದಕ್ಕೆ ಪರಿಹಾರ ಒದಗಿಸಿಕೊಡಬೇಕು ರಸ್ತೆ ಸರಿ ಇಲ್ಲದ ಕಾರಣ ವಿ ಪಾಳ್ಯ ಗ್ರಾಮಕ್ಕೆ ಆಂಬುಲೆನ್ಸ್ ಸಿಬ್ಬಂದಿಗಳು ಹೋಗುವುದಿಲ್ಲ. ರಾತ್ರಿ ಯಾರಿಗಾದರೂ ಅನಾರೋಗ್ಯದ ತೊಂದರೆ ಆದರೆ ಆಸ್ಪತ್ರೆಗೆ ಹೋಗಲು ಕಷ್ಟಕರವಾಗುತ್ತದೆ. ಒಂದು ವಾರದ ಮುಂಚೆ ಭೀಮಸಮುದ್ರದ ರತ್ನಮ್ಮ ಎಂಬುವವರು ರಸ್ತೆಯಲ್ಲಿ ಬಿದ್ದು ದಾವಣಗೆರೆಯ ಎಸ್ ಎಸ್ ಹೈಟೆಕ್ ಹಾಸ್ಪಿಟಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗೆ 3,00,000 ಹಣ ಬೇಕಾಗಿದೆ ಇದನ್ನು ಯಾರು ಕೊಡುತ್ತಾರೆ. ಆದುದರಿಂದ ತಾವುಗಳು ಈ ರಸ್ತೆಯ ಮಾರ್ಗ ಕೈಬಿಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೀಮಸಮುದ್ರ ರೈತ ಸಂಘದ ಅಧ್ಯಕ್ಷರಾದ ಶಂಕರ ಮೂರ್ತಿ, ಪ್ರಸನ್ನ ಕುಮಾರ್, ಶೈಲೇಂದ್ರ, ರಘು, ವೀರೇಶ್, ಬಸವರಾಜಪ್ಪ, ವಿನಯ್ ಕುಮಾರ್ ಹಾಗೂ ವಿ. ಪಾಳ್ಯ ಮತ್ತು ಭೀಮಸಮುದ್ರ ಗ್ರಾಮಸ್ಥರು ಇದ್ದರು.















