Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ನಿಮ್ಮ ಬಾಯಿಂದ ದುರ್ವಾಸನೆ ಬರುತ್ತಿದೆಯೇ ? ಕಾರಣಗಳು ಮತ್ತು ಪರಿಹಾರ…!

---Advertisement---

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಬಾಯಿಂದ ದುರ್ವಾಸನೆ ಬರುವುದು ಒಂದು ಅನಾರೋಗ್ಯಕರ ಲಕ್ಷಣವಾಗಿದ್ದು, ಇದಕ್ಕೆ ಹತ್ತಾರು ಕಾರಣಗಳಿರುತ್ತವೆ,  ಸಾಮಾಜಿಕವಾಗಿ ಬೆರೆಯಲು,ಮುಕ್ತವಾಗಿ ಮತ್ತೊಬ್ಬರೊಡನೆ ಮಾತನಾಡಲು ಅತ್ಯಂತ ಅವಮಾನ ಹಾಗೂ ಮುಜುಗರ ತರುವ ದುರ್ವಾಸನೆ ಸಮಸ್ಯೆಯು ಎಂಥಹವರ ಆತ್ಮವಿಶ್ವಾಸವನ್ನು ಕೂಡ ಕುಸಿಯುವಂತೆ ಮಾಡುತ್ತದೆ.

ಸಾಮಾನ್ಯವಾಗಿ ದುರ್ವಾಸನೆ ಸಮಸ್ಯೆ ಇರುವ ವ್ಯಕ್ತಿಗೆ ತನಗೆ ದುರ್ವಾಸನೆ ಬರುತ್ತಿರುವ ಬಗ್ಗೆ ಗಮನಕ್ಕೆ ಬೇಗನೆ ಬರುವುದಿಲ್ಲ. ಎದುರಿಗೆ ನಿಂತಿರುವ ವ್ಯಕ್ತಿಯ ಗಮನಕ್ಕೆ ಮಾತ್ರ ಬೇಗನೆ ಬರುತ್ತದೆ.
ದುರ್ವಾಸನೆಗೆ ಸಾಮಾನ್ಯವಾಗಿ ಗಂಧಕ ಉತ್ಪತ್ತಿಯೇ ಪ್ರಮುಖ ಕಾರಣವಾಗಿರುತ್ತದೆ.
ವೈಜ್ಞಾನಿಕವಾಗಿ ಇದಕ್ಕೆ Halitosis ಎನ್ನಲಾಗುತ್ತದೆ.
ದುರ್ವಾಸನೆ ಆಗದಂತೆ ನೋಡಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿರುತ್ತದೆ.

ದುರ್ವಾಸನೆಗೆ ಕಾರಣಗಳೇನು ?
* ಬಾಯಿಯ ಸ್ವಚ್ಛತೆಯಲ್ಲಿ ತೀವ್ರ ಕೊರತೆ, ವಸಡಿನ ಸಮಸ್ಯೆ ವಸಡಿನ ಉರಿಯೂತ,ವಸಡಿನಲ್ಲಿ ರಕ್ತಸ್ರಾವ, ವಸಡಿನ ಕೆಳಭಾಗದ ದವಡೆಯಲ್ಲಿ ಸೋಂಕು.
* ಸರಿಯಾದ ರೀತಿಯಲ್ಲಿ ಬ್ರಶ್ ಮಾಡದೆ ಇರುವುದು, ಆಹಾರಕಣ ಹಲ್ಲುಗಳಲ್ಲಿ ಸೇರಿಕೊಂಡಿರುವುದು, ಪದೇಪದೇ ಕಡ್ಡಿ ಹಾಕುವುದು.
* ಒಣಬಾಯಿ ಸಮಸ್ಯೆ, ನೆಗಡಿಯಾದಾಗ ತೆಗೆದುಕೊಳ್ಳುವ ಮಾತ್ರೆಗಳಿಂದ. ದೀರ್ಘಕಾಲಿನ ಸಕ್ಕರೆ ಕಾಯಿಲೆಗೆ ತೆಗೆದುಕೊಳ್ಳುವ ಮಾತ್ರೆಗಳಿಂದ.
* ಮಸಾಲೆ ಪದಾರ್ಥ, ಎಣ್ಣೆ ಪದಾರ್ಥಗಳ ಆಹಾರ ಸೇವನೆ, ಮಾಂಸಹಾರ ಸೇವನೆ, ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದು.
* ಈರುಳ್ಳಿ,ಬೆಳ್ಳುಳ್ಳಿ … ಮುಂತಾದ ಆಹಾರ ಪದಾರ್ಥಗಳ ಸೇವನೆ.
* ಮದ್ಯಪಾನ,ಧೂಮಪಾನ..
* ಸಕ್ಕರೆ ಕಾಯಿಲೆ ಬಿಪಿ ಗೆ ತೆಗೆದುಕೊಳ್ಳುವ ಮಾತ್ರೆಗಳಿಂದ.
* ಶ್ವಾಸಕೋಶಗಳ ಸಮಸ್ಯೆ, ಸೈನುಸೈಟೀಸ್..
* ಬಾಯಲ್ಲಿ ಕಡಿಮೆಯಾದ ಜೊಲ್ಲಿನ ಉತ್ಪತ್ತಿ.
* ತೀವ್ರ ಗ್ಯಾಸ್ಟಿಕ್ ಸಮಸ್ಯೆ. ಆಮ್ಲೀಯ ಗುಣಲಕ್ಷಣದ ಆಹಾರದ ಸೇವನೆ.

ಪರಿಹಾರವೇನು:
* ಬಾಯಿಯ ಸ್ವಚ್ಛತೆ ಪ್ರತಿದಿನ ಕಾಪಾಡಿಕೊಳ್ಳುವುದು.
* ಏನೇ ಆಹಾರ ತಿಂದರೂ ನೀರು ಹಾಕಿ ಮುಕ್ಕುಳಿಸಿ ಸ್ವಚ್ಛತೆ ಮಾಡಿಕೊಳ್ಳುವುದು.
* ಕಾಫಿ ಟೀ ಸೇವನೆ ಕನಿಷ್ಠ ಗೊಳಿಸುವುದು. ಆಮ್ಲೀಯ ಗುಣಲಕ್ಷಣದ ಆಹಾರ ಪದಾರ್ಥ ಸೇವನೆ ಮಾಡಬಾರದು.
* ಪ್ರತಿ 1/2 ಗಂಟೆಗೆ ಒಂದು ಲೋಟ ನೀರು ಕುಡಿಯುವುದು ಹಾಗೂ ಬಾಯಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುವುದು.
* ಮಾಂಸಹಾರ ಸೇವನೆ ಕನಿಷ್ಠ ಗೊಳಿಸುವುದು. ಧೂಮಪಾನ ಮದ್ಯಪಾನ ಮಾಡದಿರುವುದು.
* ಶ್ವಾಸ ಮಾರ್ಗಗಳ ಸೋಂಕನ್ನು ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು.
* ಬಾಯಲ್ಲಿ ಹುಳುಕುಹಲ್ಲು ವೈದ್ಯರಿಂದ ಸಮಸ್ಯೆಗೆ ಸಲಹೆ ಚಿಕಿತ್ಸೆ ಪಡೆದುಕೊಂಡು ಸರಿಪಡಿಸಿಕೊಳ್ಳುವುದು.
* ಆಗಾಗ ಲವಂಗ,ಏಲಕ್ಕಿ ಬಾಯಲ್ಲಿ ಹಾಕಿಕೊಂಡು ಜಗೆಯುತ್ತಿರುವುದು.
* ದೀರ್ಘಕಾಲಿನವಾಗಿ ಉಪವಾಸ ಮಾಡದಿರುವುದು.
* ನಾಲಿಗೆ ಸ್ವಚ್ಛ ಮಾಡಿಕೊಳ್ಳುವುದು.
* ಪ್ರತಿದಿನ ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ನೋಡಿಕೊಳ್ಳುವುದು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now