ಯಶ್ ಅಭಿಮಾನಿಗಳು ನಿರೀಕ್ಷೆಯಿಂದ ಕಾಯ್ತಾ ಇದ್ದ ಟಾಕ್ಸಿಕ್ ಸಿನಿಮಾ ಹೇಳಿದ್ದ ಡೇಟ್ ಗೆ ರಿಲೀಸ್ ಆಗ್ತಿಲ್ಲ. ಬದಲಿಗೆ ಜೂನ್ 4ಕ್ಕೆ ಮುಂದೂಡಿಕೆಯಾಗಿದೆ. ಟಾಕ್ಸಿಕ್ ಗೆ ಟಫ್ ಕಾಂಪಿಟೇಷನ್ ಕೊಡ್ತಾ ಇದ್ದ ಧುರಂಧರ್ 2 ಮಾತ್ರ ಡೇಟ್ ಬದಲಾಯಿಸಿಲ್ಲ. ಅದೇ ಡೇಟ್ ಗೆ ರಿಲೀಸ್ ಆಗ್ತಾ ಇದೆ. ಹಾಗಾದ್ರೆ ಟಾಕ್ಸಿಕ್ ಗೆ ಮಾತ್ರ ಯುದ್ಧದ ಬಿಸಿ ತಟ್ಟಿದ್ಯಾಕೆ ಅನ್ನೋ ಪ್ರಶ್ನೆ ಸಾಮಾನ್ಯವಾಗಿಯೇ ಎಲ್ಲರನ್ನ ಕಾಡುತ್ತೆ. ಅದಕ್ಕೂ ಬಹಳ ಮುಖ್ಯವಾದ ಕಾರಣವಿದೆ.
ಗಲ್ಫ್ ರಾಷ್ಟ್ರಗಳಲ್ಲಿ ‘ಧುರಂಧರ್ 2’ ಬಿಡುಗಡೆ ಆಗುತ್ತಿಲ್ಲ. ಕಳೆದ ವರ್ಷ ತೆರೆಕಂಡಿದ್ದ ‘ಧುರಂಧರ್’ ಸಿನಿಮಾದಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ತಾಣ ಎಂದು ಬಿಂಬಿಸಿದ್ದರಿಂದ ಯುಎಇ, ಸೌದಿ ಅರೇಬಿಯಾ, ಖತಾರ್ ಸೇರಿದಂತೆ ಆರು ಗಲ್ಫ್ ರಾಷ್ಟ್ರಗಳು ಚಿತ್ರಕ್ಕೆ ನಿಷೇಧ ಹೇರಿದ್ದವು. ಸೀಕ್ವೆಲ್ ಮೇಲೂ ನಿಷೇಧ ಹೇರಲಾಗಿದೆ. ‘ಧುರಂಧರ್ 2’ ಕೂಡ ಮೊದಲ ಭಾಗದ ಕಥೆಯ ಮುಂದುವರಿದ ಭಾಗವಾಗಿದ್ದು, ಪಾಕಿಸ್ತಾನದ ಕುರಿತಾದ ಕಠಿಣ ನಿಲುವು ಹೊಂದಿರುವುದರಿಂದ ಇದು ಕೂಡ ಗಲ್ಫ್‌ನಲ್ಲಿ ಬಿಡುಗಡೆ ಆಗುವುದಿಲ್ಲ. ಹಾಗಾಗಿ ಅಲ್ಲಿನ ಯುದ್ಧದ ಪರಿಸ್ಥಿತಿ ಈ ಚಿತ್ರದ ಕಲೆಕ್ಷನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಆದರೆ ಯಶ್ ವಿಚಾರ ಹಾಗಲ್ಲ. ಯಶ್ ಗೆ ದುಬೈನಲ್ಲೂ ಅಭಿಮಾನಿಗಳಿದ್ದಾರೆ. ಭಾರತೀಯ ಸಿನಿಮಾಗಳಿಗೆ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳು ದೊಡ್ಡ ಮಾರುಕಟ್ಟೆಯಾಗಿದ್ದು, ಅಲ್ಲಿನ ಸದ್ಯದ ಪರಿಸ್ಥಿತಿಯು ಸಿನಿಮಾದ ಕಲೆಕ್ಷನ್ ಮೇಲೆ ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರವನ್ನು ಜೂನ್ ತಿಂಗಳಿಗೆ ಮುಂದೂಡಲಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












