Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಗ್ ಬಾಸ್ ಮನೆಯಿಂದ ಇಂದು ಹೊರಗೆ ಬರೋದು ಯಾರು ಗೊತ್ತಾ..?

---Advertisement---

ಬಿಗ್ ಬಾಸ್ ಸೀಸನ್ 10 ಜಗಳ, ಮನಸ್ತಾಪ, ಒಬ್ಬರ ಮೇಲೊಬ್ಬರ ವಾಗ್ದಾಳಿ ಈ ಮೂಲಕವೇ ನಡೆದುಕೊಂಡು ಬರುತ್ತಿದೆ. ಬಿಗ್ ಬಾಸ್ ಶುರುವಾಗಿ ತಿಂಗಳಾಗಿದೆ. ಈ ವಾರವೂ ಮನೆಯಿಂದ ಒಬ್ಬರು ಹೊರಗೆ ಬರಲಿದ್ದಾರೆ. ದೀಪಾವಳಿ ಹಬ್ಬದ ದಿನ ಯಾರಿಗೆ ಕತ್ತಲು ಆವರಿಸಲಿದೆ ಎಂಬುದು ಕುತೂಹಲವಾಗಿದೆ.

ಈ ವಾರದ ನಾಮಿನೇಷನ್ ನಲ್ಲಿ ನಮ್ರತಾ, ಕಾರ್ತಿಕ್, ತುಕಾಲಿ, ಸ್ನೇಹಿತ್, ವರ್ತೂರ್ ಸಂತೋಷ್, ಇಶಾನಿ ಇದ್ದಾರೆ. ಈಗಾಗಲೇ ನಿನ್ನೆಯ ಎಪಿಸೋಡ್ ನಲ್ಲಿ ನಮ್ರತಾ, ಕಾರ್ತಿಕ್, ತುಕಾಲಿ ಸೇವ್ ಆಗಿದ್ದಾರೆ. ಇಂದು ವರ್ತೂರ್ ಸಂತೋಷ್ ಕೂಡ ಸೇವ್ ಆಗಲಿದ್ದಾರೆ. ಆದರೆ ವರ್ತೂರ್ ಸಂತೋಷ್ ಗೆ ಮನೆಯಲ್ಲಿ ಇರುವುದಕ್ಕೆ ಕೊಂಚವೂ ಇಷ್ಟವಿಲ್ಲ. ಹುಲಿ ಉಗುರು ಪ್ರಕರಣದಲ್ಲಿ ಜೈಲು ಸೇರಿದ್ದ ದಿನಗಳೇ ವರ್ತೂರ್ ಸಂತೋಷ್ ಅವರಿಗೆ ನೋವು ನೀಡಿದೆ. ಅದರಿಂದ ಹೊರಗೆ ಬರುವುದಕ್ಕೆ ಸಾಧ್ಯವೇ ಆಗುತ್ತಿಲ್ಲ. ಹೀಗಾಗಿ ನಾನು ಮನೆಯಲ್ಲಿ ಇರಲ್ಲ ಎಂದೇ ಹೇಳುತ್ತಿದ್ದಾರೆ. ಆದರೆ ಸುದೀಪ್, ಜನರ ಆಯ್ಕೆಗೆ ವಿರುದ್ಧವಾಗಿ ನಾನು ಹೋಗಲ್ಲ ಎಂದಿದ್ದಾರೆ.

ಇನ್ನು ಇಶಾನಿ ಕೂಡ ನಾಮಿನೇಷನ್ ಲೀಸ್ಟ್ ನಲ್ಲಿ ಇದ್ದಾರೆ. ಮೈಕೆಲ್ ತನ್ನ ಆಟವನ್ನು ಆಡುವುದಕ್ಕೆ ಬಿಡುತ್ತಿಲ್ಲ. ಡಾಮಿನೇಟ್ ಸಿಕ್ಕಾಪಟ್ಟೆ ಮಾಡುತ್ತಾರೆ. ಜೊತೆಗೆ ಮಾತಿಗೆ ಮುಂಚೆ ಜೋರಾಗಿ ಕಣ್ಣೀರು ಹಾಕಿ, ನೋಡುಗರಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಹೀಗಾಗಿ ಈ ವಾರ ಇಶಾನಿಯೇ ಮನೆಯಿಂದ ಹೊರಗೆ ಬರುವ ಸಾಧ್ಯತೆ ಹೆಚ್ಚಾಗಿದೆ. ಇಂದು ಸೂಪರ್ ಸಂಡೇ ವಿತ್ ಸುದೀಪ್ ಪಂಚಾಯ್ತಿ ಕಟ್ಟೆಯಲ್ಲಿ ದೀಪಾವಳಿಯ ದಿನ ಯಾರ ಬಿಗ್ ಬಾಸ್ ಜರ್ನಿ ಮುಗಿಯುತ್ತೆ ಎಂಬುದನ್ನು ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment