ಅಡುಗೆ ಮನೆಯಲ್ಲಿ ಅಮ್ಮಂದಿರು ಬಳಸುವ ಪ್ರತಿಯೊಂದು ಪದಾರ್ಥದಲ್ಲೂ ಹಲವು ಪೌಷ್ಠಿಕಾಂಶಗಳು ಅಡಗಿವೆಮ ಅಷ್ಟೇ ಅಲ್ಲ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲು ಬೇರೆಲ್ಲೂ ಹೋಗಬೇಕಾದ ಅವಶ್ಯಕತೆಯೇ ಇರುವುದಿಲ್ಲ. ಅದರಲ್ಲೂ ಅಳವಿ ಬೀಜ ಒಂದಿದ್ದರು ಎಷ್ಟೋ ಕಾಯಿಲೆಗಳು ಗುಣಮುಖವಾಗುತ್ತವೆ.
ಅಳವಿ ಬೀಜದಲ್ಲಿ ಕಬ್ಬಿಣಾಂಶ, ಫಾಲಿಕ್ ಆಸಿಡ್, ವಿಟಮಿನ್ ಎ ಹಾಗೂ ವಿಟಮಿನ್ ಸಿ ಅಂಶಗಳು ಇದಾವೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಈ ಅಳವಿ ಬೀಜಗಳನ್ನ ಬಳಸುವುದರಿಂದ ಮೈ ಕೈ ನೋವು ಸೊಂಟ ನೋವು ಮಾಯವಾಗುತ್ತದೆ. ರಿಲ್ಯಾಕ್ಸ್ ಸಿಗುತ್ತದೆ. ಅಷ್ಟೇ ಅಲ್ಲ, ಬಾಣಂತಿಯರ ಎದೆ ಹಾಲು ಹೆಚ್ಚಿಸುವ ಗುಣ ಹೊಂದಿವೆ. ಮಲಬದ್ಧತೆಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಅತಿಸಾರ ಏನಾದರೂ ಹೆಚ್ಚಾಗಿದ್ದರೆ ಕಡಿಮೆ ಮಾಡುತ್ತದೆ.

ಸಾಕಷ್ಟು ಜನ ತೂಕ ಇಳಿಸಲು ಒದ್ದಾಡುತ್ತಾರೆ ಅಲ್ವಾ ಅಂಥವರು , ಅಳವಿ ಬೀಜಗಳನ್ನ ಡಯೆಟ್ ರೀತಿ ಬಳಸಬಹುದಾಗಿದೆ. ಕೈ ಕಾಲು ಉಳುಕಿದಾಗ ಬೀಜಗಳನ್ನು ಅರೆದು ಲಿಂಬೆ ರಸ ಸೇರಿಸಿ ಲೇಪಿಸಬೇಕು. ಬೀಜಗಳನ್ನು ಎಳ್ಳೆಣ್ಣೆ ಯಲ್ಲಿ ಕುದಿಸಿ ಸೋಸಿ ಶರೀರದ ಬಾವು ನೋವುಗಳಿಗೆ ಲೇಪಿಸಬೇಕು. ಬೀಜಗಳನ್ನು ನೀರಿನಲ್ಲಿ ನೆನೆಸಿದಾಗ ಕಾಮ ಕಸ್ತೂರಿ ಬೀಜಗಳ ಹಾಗೆ ಉಬ್ಬುತ್ತವೆ. ಈ ಬೀಜಗಳನ್ನು ಸಕ್ಕರೆ
ಬೆರೆಸಿದ ಬಿಸಿ ಹಾಲಿನಲ್ಲಿ ಹಾಕಿ ತುಪ್ಪ ಸೇರಿಸಿ ಕುಡಿಯ ಬಹುದು. ಈ ಮೂಲಕ ಅಳವಿಬೀಜ ಹಲವು ರೋಗಗಳಿಗೆ ಮದ್ದು ಸರಿ. ಅದರಲ್ಲೂ ಬಾಣಂತಿಯರಿಗೆ ಈ ಬೀಜಗಳನ್ನ ಹೆಚ್ಚಾಗಿ ನೀಡುತ್ತಾರೆ. ರೋಗನಿರೋಧಕ ಶಕ್ತಿಯನ್ನು ಇದರಿಂದ ಹೆಚ್ಚಿಸಿಕೊಳ್ಳಬಹುದಾಗಿದೆ. ಹೀಗಾಗಿ ನೀವೂ ಅದನ್ನ ಸ್ವೀಟ್ ಉಂಡೆ ಮಾಡಿಕೊಂಡು ಸೇವಿಸಬಹುದು.









