ವರದಿ: ಸುರೇಶ್ ಪಟ್ಟಣ್
ಚಿತ್ರದುರ್ಗ, (ಫೆ.19) : ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ತಂದೆ ತಾಯಂದಿರು ಮಕ್ಕಳು ಓದುವ ವಯಸ್ಸಿನಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಬೇಡಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ ಮಾಡಿದರು.
ತಾಲೂಕಿನ ಬೆಟ್ಟದನಾಗೇನಹಳ್ಳಿ , ಬೆನಕನಹಳ್ಳಿ, ಸಿಂಗಾಪುರ, ಹುಲ್ಲೂರು ಗ್ರಾಮಗಳ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಗೆ ಚಾಲನೆ ಮತ್ತು ಹುಲ್ಲೂರು ಗ್ರಾಮದಲ್ಲಿ ಡಿಎಂಎಫ್ ಅನುದಾನದಲ್ಲಿ ನಿರ್ಮಾಣ ಮಾಡಲಾದ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಹುಲ್ಲೂರು ಗ್ರಾಮಕ್ಕೆ ಶಾಲಾ ಕಟ್ಟಡ ಅವಶ್ಯಕತೆ ಇದೆ. 107 ಮಕ್ಕಳು ಇದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು. ಅದಕ್ಕಾಗಿ ಕೂಡಲೇ ಡಿಎಂಎಫ್ ಅನುದಾನದಲ್ಲಿ 32 ಲಕ್ಷ ವೆಚ್ಚದಲ್ಲಿ ಎರಡು ವಿಶಾಲವಾದ ಕೊಠಡಿ ನಿರ್ಮಾಣ ಮಾಡಿಕೊಟ್ಟಿದ್ದೇನೆ.
ಗ್ರಾಮೀಣ ಭಾಗದ ಮಕ್ಕಳು ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಅತ್ಯುತ್ತಮ ಸಾಧನೆಯನ್ನು ಮಾಡಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ.ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಂದರ್ಭದಲ್ಲಿ ಕುಟುಂಬದ ಸಮಸ್ಯೆಗಳಿಂದ ಶಿಕ್ಷಣ ಮೊಟಕುಗೊಳಿಸುತ್ತಾರೆ. ಅಂತಹ ಕೆಲಸ ಆಗಬಾರದು. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಶಿಕ್ಷಣವನ್ನೆ ಆಸ್ತಿಯನ್ನಾಗಿ ಮಾಡಿ , ಒಂದು ವೇಳೆ ಅಂತಹ ಕಷ್ಟವಿದ್ದರೆ ನಾನು ಸಹಕಾರ ಮಾಡುತ್ತೇನೆ ಅಭಯ ನೀಡಿದರು.
ಹುಲ್ಲೂರು ಗ್ರಾಮಕ್ಕೆ ಕೊಠಡಿ ಕೊರತೆ ಇದೆ ಎಂದು ಹೇಳಿದರು ಅದಕ್ಕೆ ಹಣ ನೀಡಿ ನೂತನ ಕೊಠಡಿ ಆಗಿದೆ. ಸರ್ಕಾರಿ ಶಾಲೆಗಳಿಗೆ ಹಂತ ಹಂತವಾಗಿ ಒತ್ತು ನೀಡುವ ಕೆಲಸ ಮಾಡುತ್ತಿದ್ದೇನೆ ಎಂದರು.
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆ ವತಿಯಿದ ಸುಮಾರು 2.30 ಕೋಟಿ ವೆಚ್ಚದಲ್ಲಿ ಸಿಂಗಾಪುರ ,ಬೆಟ್ಟದನಾಗೇನಹಳ್ಳಿ , ಬೆನಕನಹಳ್ಳಿ, ಹುಲ್ಲೂರು ಹಳ್ಳಿಗಳಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಎಲ್ಲಾ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ಮಾಡಲು ಖಡಕ್ ಆಗಿ ಹೇಳಿದ್ದೇನೆ. ಗುಣಮಟ್ಟದಲ್ಲಿ ರಾಜಿ ಇಲ್ಲ. ನಾನು ಇಡೀ ನನ್ನ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೆ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕೆಲಸಕ್ಕೆ ಒತ್ತು ನೀಡಿದ್ದು ಕೆಲವು ಹಳ್ಳಿಗಳಲ್ಲಿ ಮಾಡಲು ರಸ್ತೆಯೇ ಇಲ್ಲದಂತೆ ಪೂರ್ಣ ರಸ್ತೆ ಕಾಮಗಾರಿ ಮುಕ್ತಾಯವಾಗಿವೆ.
4.75 ಕೋಟಿ ವೆಚ್ಚದಲ್ಲಿ ಚಕ್ ಡ್ಯಾಂಗಳ ನಿರ್ಮಾಣ ಮಾಡಿದ್ದೇನೆ. ಈ ಭಾಗದ ಎಲ್ಲಾ ಹಳ್ಳಿಗಳಿಗೆ ಚಕ್ ಡ್ಯಾಂ 1 ಅಥವಾ 2 ಚಕ್ ಡ್ಯಾಂ ನಿರ್ಮಾಣ ಮಾಡಿದ್ದೇನೆ. ಅಂತರ್ಜಲದ ಮಟ್ಟ ಹೆಚ್ಚಿಸುವ ಕಡೆ ಗಮನ ನೀಡಿದ್ದು ಅಗತ್ಯ ಇರುವ ಕಡೆ ಇನ್ನು ಚಕ್ ಡ್ಯಾಂ ನೀಡುತ್ತಿದ್ದೇನೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯ ಲತಾ ರಾಜಪ್ಪ, ರಾಜಪ್ಪ, ರವಿಕುಮಾರ್, ಶೇಖರಪ್ಪ, ಉಮಾದೇವಿ,ಮೀನಾಕ್ಷಮ್ಮ ಮುಖಂಡರಾದ ಗಿರೀಶ್ , ಶೇಖರಪ್ಪ, ತಿಪ್ಪೇಶ್ ಮತ್ತು ಗ್ರಾಮಸ್ಥರು ಇದ್ದರು.