ಸ್ವರಾಜ್ ಇಂಡಿಯಾ ಜಿಲ್ಲಾಧ್ಯಕ್ಷರಾಗಿ ಜೆ.ಯಾದವ ರೆಡ್ಡಿ ಮರು ಆಯ್ಕೆ

suddionenews
1 Min Read

 

ಸುದ್ದಿಒನ್, ಚಿತ್ರದುರ್ಗ : ಸ್ವರಾಜ್ ಇಂಡಿಯಾದ ಜಿಲ್ಲಾ ಅಧ್ಯಕ್ಷರಾಗಿ ಜೆ.ಯಾದವರೆಡ್ಡಿ ಅವರು ಮರು ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಗರದ ರೈತ ಭವನದಲ್ಲಿ ನಡೆದ ಸಭೆಯಲ್ಲಿ
ಸ್ವರಾಜ್ ಇಂಡಿಯಾದ ಕೇಂದ್ರ ಸಮಿತಿ ವೀಕ್ಷಕರಾಗಿ ಆಗಮಿಸಿದ್ದ ರಾಷ್ಟ್ರೀಯ ಸಮಿತಿ ಸದಸ್ಯ ಅಮ್ಮದ್ ಬಾಷಾ ಹಾಗೂ ರಾಜ್ಯ ಸಮಿತಿ ಉಪಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಅವರು ಜೆ.ಯಾದವ ರೆಡ್ಡಿ ಅವರನ್ನೊಳಗೊಂಡ ಜಿಲ್ಲಾ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಸಮಿತಿಯನ್ನು ರಚಿಸಿದರು.

ಜಿಲ್ಲಾ ಸಮಿತಿಯ ಸದಸ್ಯರ ವಿವರ ಈ ಕೆಳಗಿನಂತಿದೆ.

ಅಧ್ಯಕ್ಷರು – ಜೆ.ಯಾದವ ರೆಡ್ಡಿ
ಕಾರ್ಯಾಧ್ಯಕ್ಷ – ಬಿ.ಆರ್‌. ಶಿವಕುಮಾರ್‌
ಉಪಾಧ್ಯಕ್ಷರು – ಸೈಯದ್ ಇಸಾಕ್,
ಎನ್.ಆರ್. ಮಹಂತರೆಡ್ಡಿ, ಕೆ.ಸಿ. ಹೊರಕೇರಪ್ಪ,

ಪ್ರಧಾನ ಕಾರ್ಯದರ್ಶಿ – ಎಂ.ಆರ್.ದಾಸೇಗೌಡ
ಸಂಘಟನಾ ಕಾರ್ಯದರ್ಶಿ –  ಹೊಳೆಯಪ್ಪ.ಕೆ ಮತ್ತು ಹಿರೇಹಳ್ಳಿ ಮಂಜಣ್ಣ

ಮಹಿಳಾ ಸಂಚಾಲಕರು –  ತಿಮ್ಮಕ್ಕ ಮತ್ತು ನೇತ್ರಾ  ಸೂರ್ಯ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.

ಈ ಸಭೆಯಲ್ಲಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಇಂದಿನ ಪರಿಸ್ಥಿತಿಯಲ್ಲಿ ಪರ್ಯಾಯ ರಾಜಕಾರಣ ಕಷ್ಟವಾದರೂ ಈ ಕಾಲಮಾನದ ತುರ್ತು ಅಗತ್ಯವೆಂದು ಅಹ್ಮದ್ ಭಾಷಾ ಹೇಳಿದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೇವಲ 8 ತಿಂಗಳಲ್ಲಿ ಅಂದಿನ ಸಂದರ್ಭಕ್ಕೆ ಜೆ.ಪಿ.ನೇತೃತ್ವದಲ್ಲಿ ರಾಷ್ಟ್ರೀಯ ಪರ್ಯಾಯ ರಾಜಕಾರಣ ಸಾಧ್ಯವಾಯಿತು ಎಂದು ಜೆ.ಎಂ‌.ವೀರ ಸಂಗಯ್ಯ ಹೇಳಿದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್ ಬಾಬು, ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ಉಪಾಧ್ಯಕ್ಷರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಚಿತ್ರದುರ್ಗ ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಗೌ.ಅಧ್ಯಕ್ಷ, ಮುದ್ದಾಪುರ ನಾಗರಾಜ್, ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಯಾದವ್, ಕಾರ್ಯದರ್ಶಿ ಕೋಗುಂಡೆ ರವಿ,  ಹಿರಿಯೂರು ತಾಲ್ಲೂಕು ಅಧ್ಯಕ್ಷ ಶಿವಕುಮಾರ್, ಕಾರ್ಯಾಧ್ಯಕ್ಷ ದಸ್ತಗೀರ್‌ಸಾಬ್‌, ಚಳ್ಳಕೆರೆ ತಾಲ್ಲೂಕು ಕಾರ್ಯದರ್ಶಿ ತಿಪ್ಪೇಸ್ವಾಮಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *