ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರ ಸಂಧರ್ಭದಲ್ಲಿ ಈ ಕೆರೆಯ ಅಭಿವೃದ್ಧಿಗೆ ಯೋಜನೆ ಹಾಕಿತ್ತು ಈ ಕ್ಷೇತ್ರದ ಶಾಸಕರಾದ ಮುನಿರತ್ನರವರು ಯೋಜನೆಗಳನ್ನು ರೂಪಿಸಿದ್ರು ಎಂದು ಸಂಸದ ಡಿ ಕೆ ಸುರೇಶ್ ಹೇಳಿದರು. ಕೆಲ ಬದಲಾವಣೆಯಾದರೂ ಹೊಸ ಸರ್ಕಾರ ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ ಎಂದರು.
73 ಎಕರೆ ಕೆರೆಯ ಅಭಿವೃದ್ಧಿ ಶಂಕುಸ್ಥಾಪನೆ ಇದು ಮೂರನೇ ಸಲ ನಡಿತಿರೋದು, ಒಳಚರಂಡಿ ನೀರು ಕೆರೆಗಳಿಗೆ ಸೇರಿ ಕಲುಷಿತವಾಗಿದೆ. ಒಳಚರಂಡಿ ನೀರು ತಡೆದು ಶುದ್ಧೀಕರಣ ನೀರನ್ನು ಕೆರೆಗೆ ಬಿಡಬೇಕು ಎಂದು ನ್ಯಾಯಲಯದ ಆದೇಶವಿದೆ,ಅದರಂತೆ ಇಲ್ಲಿಯ ಅಭಿವೃದ್ಧಿಯಾಗಲಿ ಎಂದು ಸರ್ಕಾರದ ಗಮನಕ್ಕೆ ತರ್ತೀನಿ ಅಂತರ್ಜಲವನ್ನು ಕಾಪಾಡಿಕೊಳ್ಳಬೇಕು. ನಾನು ಕಾಂಗ್ರೆಸ್‌ನಲ್ಲಿ ಮಂತ್ರಿಯಾಗಲ್ಲ ಅಂತ ಬಿಜೆಪಿಗೆ ಹೋಗಿ ಮಂತ್ರಿಯಾಗಿದ್ದಾರೆ, ಅಶೋಕ್ ಅವ್ರು ಒಳ್ಳೆದಲ್ವಾ ಅಂತಿದ್ದಾರೆ ಮುಂದಕ್ಕೆ ಗೊತ್ತಾಗುತ್ತೆ ಎಂದು ಟಾಂಗ್ ಕೊಟ್ಟರು.