Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಏನ್ ಮಾಡ್ತೀರಾ ಮಾಡ್ಕೊಳಿ.. ರೈತರ ಮೇಲೆ ಡಿಕೆ ಶಿವಕುಮಾರ್ ಗರಂ, ಅಂತದ್ದೇನಾಯ್ತು..?

ಡಿಕೆ ಶಿವಕುಮಾರ್
---Advertisement---

 

ರಾಮನಗರ: ಗ್ರೇಟರ್ ಬೆಂಗಳೂರು ಮಾಡುವುದಕ್ಕೆ ಹೊರಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಗ್ರೇಟರ್ ಬೆಂಗಳೂರು ಯೋಜನೆಗೆ ರಾಮನಗರ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ಈ ವಿಚಾರ ತಿಳಿದ ತಕ್ಷಣ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಂದ ಡಿಕೆ ಶಿವಕುಮಾರ್ ಅವರು, ರೈತರೊಂದಿಗೆ ಸಂವಾದ ನಡೆಸಿದ್ದಾರೆ. ರೈತರಿಗೆ ಸಮಾಧಾನ ಮಾಡುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಮಾತನಾಡುವ ನಡುವೆಯೇ ರೈತರು ಹಾಗೂ ಡಿಕೆ ಶಿವಕುಮಾರ್ ನಡುವಿನ ಮಾತುಕತೆ ಜೋರಾಗಿದೆ. ಈ ವೇಳೆ ಡಿಕೆ ಶಿವಕುಮಾರ್ ಅವರು ರೈತರ ಮೇಲೆ ರೇಗಿದ್ದಾರೆ.

ನನ್ನ ಶಾಸಕನಿಗೆ ಅವಮಾನ ಮಾಡಿದರೆ ಹೇಗೆ..? ನಿಮ್ಮಿಂದ ಧಿಕ್ಕಾರ ಕೂಗುವುದಕ್ಕೆ ಮಾತ್ರ ಸಾಧ್ಯ. ಏನು ಮಾಡ್ತೀರಾ, ಮಾಡಿಕೊಳ್ಳಿ. ಕಾನೂನಿನಲ್ಲಿ ಏನು ಸಹಾಯ ಮಾಡಬೇಕೋ ಮಾಡುತ್ತೇನೆ. ಅದನ್ನ ಬಿಟ್ಟು ಹೀಗೆ ಕೂಗಾಡಿದರೆ ಏನು ಆಗಲ್ಲ. ಯಾವನ್ ಬಂದಿದ್ದ ನಿಮ್ಮ ಪರವಾಗಿ ಎಂದು ಗರಂ ಆಗಿದ್ದಾರೆ. ಈ ಬೆಳವಣಿಗೆ ರೈತರಿಗೆ ಬೇಸರ ತರಿಸಿದೆ. ಈ ಯೋಜನೆಯಲ್ಲಿ ಶಾಸಕ ಬಾಲಕೃಷ್ಣ ಅವರ ಪಾತ್ರ ಇರಬಹುದು ಎಂಬುದು ರೈತರ ಅನುಮಾನವಾಗಿದೆ. ಇದೇ ಕಾರಣಕ್ಕಾಗಿಯೇ ರೈತರು ಇಂದು ಪ್ರತಿಭಟನೆ ನಡೆಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...