Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಡಿಕೆ ಶಿವಕುಮಾರ್ ಆದಷ್ಟು ಬೇಗ ಸಿಎಂ ಆಗ್ತಾರೆ : ಭವಿಷ್ಯ ನುಡಿದ ದೈವ

ಡಿಕೆ ಶಿವಕುಮಾರ್
---Advertisement---

ತುಮಕೂರು: ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಅವರ ಶ್ರಮವು ಹೆಚ್ಚಾಗಿರುವ ಕಾರಣ, ಸಿಎಂ ಆಗುವ ಭರವಸೆಯನ್ನ ಹಾಗೇ ಉಳಿಸಿಕೊಂಡಿದ್ದಾರೆ. ಅವರ ಬೆಂಬಲಿಗರು ಕೂಡ ಡಿಕೆ ಶಿವಕುಮಾರ್ ಸಿಎಂ ಆಗಲಿ ಅಂತಾನೇ ಬಯಸುತ್ತಿದ್ದಾರೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಸಿಎಂ ಚರ್ಚೆಯೇ ಬಹಳ ಕುತೂಹಲಕಾರಿಯಾಗಿದೆ. ಇದೀಗ ದೈವ ನುಡಿ ಡಿಕೆಶಿ ಬೆಂಬಲಿಗರಿಗೂ ಖುಷಿ ನೀಡಿದೆ.

ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ದೇಶ್ವರ ಸನ್ನಿಧಿಯಲ್ಲಿ ದೈವ ನುಡಿದಿರುವ ಸನ್ನಿವೇಶ ನಡೆದಿದೆ. ಡಿಕೆ ಶಿವಕುಮಾರ್ ಅಭಿಮಾನಿಯೊಬ್ಬರು ದೈವದ ಬಳಿ ಪ್ರಶ್ನೆ ಕೇಳಿದ್ದಾರೆ. ಆಗ ದೈವ ಈಗಾಗಲೇ ಭವಿಷ್ಯ ನುಡಿದು ಆಗಿದೆಯಲ್ಲ. ಆದಷ್ಟು ಬೇಗ ಸಿಎಂ ಆಗ್ತಾರೆ ಎಂದಿದೆ. ಅವರಿಗೆ ಬೇಕಾದ ಪ್ರಸಾದವನ್ನು ಕಳುಹಿಸಿದ್ದೇನೆ. ಆದಷ್ಟು ಬೇಗ ಆಸೆ ಈಡೇರುತ್ತದೆ. ಇಷ್ಟು ದಿನ ತಡವಾಗಿದ್ದರು ಸಹ, ಇನ್ನು ಮುಂದೆ ಅವರ ಅನುಗ್ರಹ ಇರಲಿದೆ. ಅವರು ಯಾವಾಗ ಆ ಸ್ಥಾನದಲ್ಲಿ ಕೂರ್ತಾರೋ ಸನ್ನಿಧಾನಕ್ಕೆ ಕೆಲವೊಂದು ವಿಚಾರಗಳನ್ನ ತಿಳಿಸಿಕೊಟ್ಟಿದ್ದಾರೆ. ಅದನ್ನು ಚಾಚು ತಪ್ಪದೆ ನಡೆದುಕೊಳ್ಳುವುದಕ್ಕೆ ಹೇಳಿ. ಆ ನಂತರ ಪ್ರಯತ್ನಕ್ಕೆ ಫಲವನ್ನು ದೇವರು ಒದಗಿಸಿಕೊಟ್ಟಂತೆ ಆಗುತ್ತದೆ ಎಂದಿದ್ದಾರೆ.

ದೈವದ ನುಡಿಯನ್ನು ನಂಬುವವರು ಅಪಾರವಾಗಿದ್ದಾರೆ. ಹೀಗಾಗಿ ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಏರುವ ಬಗ್ಗೆ, ದೈವದ ಸೂಚನೆಯಂತೆ ನಡೆದುಕೊಳ್ಳುವ ಬಗ್ಗೆ ಸೂಚನೆ ಸಿಕ್ಕಿದೆ. ಒಂದು ವೇಳೆ ಡಿಕೆ ಶಿವಕುಮಾರ್ ಅವರು, ದೈವ ಹೇಳಿದಂತೆ ನಡೆದುಕೊಂಡರೆ ಸಿಎಂ ಸ್ಥಾನಕ್ಕೆ ಏರಲು ಬಹುದು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now