ರಾಯಚೂರು: ನಿನ್ನೆ ಡಿಸಿಎಂ ಡಿಕೆ ಶಿವಕುನಾರ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದ ಬಗ್ಗೆ ಮಠದ ಸುಬುದೇಂದ್ರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ಮಂಚಾಲಮ್ಮ, ರಾಯರ ದರ್ಶನ ಮಾಡಿದ್ರು. ಗೋಶಾಲೆಗೆ ಹೋಗಿ ಬಹಳ ಸಂತೋಷ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ಅವರ ಜೊತೆಗೆ ಬಂದಾಗ ಒಮ್ಮೆ ಕುಟುಂಬ ಸಮೇತ ಬನ್ನಿ ಎಂದು ಹೇಳಿದ್ದೆವು. ಆದ ಕಾರಣ ಕುಟುಂಬ ಸಮೇತ ಬಂದು ಪೂಜೆ ಸಲ್ಲಿಸಿದ್ದಾರೆ. ಮೂಲ ರಾಮದೇವರ ಪೂಜೆ, ದರ್ಶನ, ಅವರ ಅನುಗ್ರಹ ಪ್ರಸಾದ ಎನ್ನುವಂತದ್ದು ಎಲ್ಲಾ ರೀತಿಯಾದಂತಹ ಇಷ್ಟಾರ್ಥಗಳಿಗೆ ಅದು ಕಾರಣವಾಗುತ್ತದೆ. ಎಲ್ಲಾ ಕಷ್ಟಗಳನ್ನ ಪರಿಹಾರ ಮಾಡುತ್ತದೆ. ಅಂತಹ ಮೂಲ ರಾಮದೇವರ ದರ್ಶನವನ್ನು ಅವರು ಪಡೆದಿದ್ದಾರೆ.
ಬಹಳ ಶ್ರದ್ಧೆ ಭಕ್ತಿಯಿಂದ ಕುಟುಂಬ ಸಮೇತ ಕೂತು ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಅವರು ಕೂಡ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ರಾಯರ ಅನುಗ್ರಹ ಇಲ್ಲಿ ಬರುವ ಪ್ರತಿ ಭಕ್ತರಿಗೂ ಆಗುತ್ತದೆ. ಅದೇ ರೀತಿ ಡಿಕೆ ಶಿವಕುಮಾರ್ ಅವರು ಕುಟುಂಬಸ್ಥರು ಬಂದಿದ್ದಾರೆ ಪೂಜೆ ಸಲ್ಲಿಸಿದ್ದಾರೆ ಎಂದಿದ್ದಾರೆ.

ಇನ್ನು ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಸಿಎಂ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ಅವರು ಟೆಂಪಲ್ ರನ್ ಆರಂಭಿಸಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸುಬುದೇಂದ್ರ ಶ್ರೀಗಳು, ಅದು ರಾಜಕೀಯ ವಿಚಾರ. ರಾಜಕೀಯ ಮಾಧ್ಯಮದಲ್ಲಿ ಕೇಳಬೇಕು. ಇದು ಧಾರ್ಮಿಕ ಕ್ಷೇತ್ರ. ನಾವೂ ಧಾರ್ಮಿಕವಾಗಿ ಆಶೀರ್ವಾದ ಮಾಡಿದ್ದೇವೆ. ಅದನ್ನ ಹೊರತು ಪಡಿಸಿ ಬೇರೇನು ಇಲ್ಲ. ದೈವ ಬೆಂಬಲ ಇದ್ದರೇನೆ ಇಲ್ಲಿಗೆ ಬರುವುದಕ್ಕೆ ಸಾಧ್ಯ. ಮಂತ್ರಾಲಯ ಯಾತ್ರೆ ಕೈಗೊಂಡಿದ್ದಾರೆ ಎಂದರೆ ಅದಕ್ಕೆ ದೇವರ ಅನುಗ್ರಹ ಇದೆ ಎಂದೇ ಅರ್ಥ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















