ಸುದ್ದಿಒನ್, ಹಿರಿಯೂರು, ಮೇ. 10 : ನಗರ ನೆಹರೂ ಮೈದಾನದಲ್ಲಿ ಸಚಿವ ಡಿ ಸುಧಾಕರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿ ಸೋಮವಾರ ಸಚಿವ ಡಿ ಸುಧಾಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಆಪ್ತನನ್ನು ನೆನದು ಕಣ್ಣೀರು ಹಾಕಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಆತ್ಮೀಯ ಸ್ನೇಹಿತ ಚಿಕ್ಕ ವಯಸ್ಸಿಗೆ ಕೊನೆಯುಸಿರೆಳೆಯುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ. ಆಸ್ಪತ್ರೆ ಸೇರುವ ಎರಡು ದಿನಗಳ ಹಿಂದೆ ಭೇಟಿಯಾಗಿದ್ದರು. ಡಿಸ್ಚಾರ್ಜ್ ಸಂದರ್ಭದಲ್ಲಿ ವೈದ್ಯರು ಲಂಗ್ ಇನ್ಫೆಕ್ಷನ್ ಬಗ್ಗೆ ತಿಳಿಸಿದ್ದರು. ನಾವಿಬ್ಬರೂ ಚಿಕ್ಕ ವಯಸ್ಸಿನಿಂದ ಸ್ನೇಹಿತರು. ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.ಅವರ ಕೆಲಸ ಸಹಕಾರ ರಂಗದಲ್ಲಿ ಮಾಡಿದ ಸೇವೆ ಶಾಶ್ವತವಾಗಿ ಉಳಿದಿದೆ. ಹೇಗೆ ಸುಧಾಕರ್ ಬೆಂಬಲಕ್ಕೆ ನಿಂತಿದ್ದೇವೋ ಹಾಗೆಯೇ ಅವರ ಕುಟುಂಬಕ್ಕೆ ನಿಲ್ಲುತ್ತೇವೆ ಸುಧಾಕರ್ ಜನಪ್ರಿಯತೆ ನೀವೆಲ್ಲ ಗಮನಿಸಬೇಕು. ಎಲ್ಲಾ ಸಮಾಜಗಳನ್ನು ಸಾಮಾಜಿಕ ನ್ಯಾಯದಡಿಯಲ್ಲಿ ಕೊಂಡೊಯ್ದುದರು. ಸುಧಾಕರ್ ನಿಧನದಿಂದ ನಮ್ಮ ಸರ್ಕಾರಕ್ಕೆ ದೊಡ್ಡ ಆಘಾತವಾಗಿದೆ.
ರಾಹುಲ್ ಸಾಂತ್ವನ: ಮಾಧ್ಯಮಗಳ ಜೊತೆ ಮಾತನಾಡುವಾಗ ರಾಹುಲ್ ಗಾಂಧಿಗೆ ಡಿಕೆಶಿ ಕರೆ ಮಾಡಿ ಪುತ್ರನಿಗೆ ರಾಹುಲ್ ಗಾಂಧಿ ದೂರವಾಣಿ ಮೂಲಕ ಸಾಂತ್ವನ ಹೇಳಿದರು.
ಚಳ್ಳಕೆರೆ ನಗರದ ಡಿ. ಸುಧಾಕರ್ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿ, ಸರ್ಕಾರದಿಂದ ಗೌರವ ನಮನ ಸಲ್ಲಿಸಿದ ಬಳಿಕ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ. ಜೈನ ಧರ್ಮದ ಸಂಪ್ರದಾಯದಂತೆ ಚಳ್ಳಕೆರೆಯ ಟೆನಿಸ್ ಕೋರ್ಟ್ ನಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ರಾಹುಲ್ ಗಾಂಧಿ ಅವರು ಪೋನ್ ಮಾಡಿ ಅಪ್ಪಾಜಿಯ ಅಗಲಿಕೆ ತೀವ್ರ ಕಂಬನಿ ಮಿಡಿದರು ಎಂದು ಸಚಿವ ಸುಧಾಕರ್ ಅವರ ಪುತ್ರ ಸುಹಾಸ್ ಹೇಳಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













