Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಿಸೆಂಬರ್  22 ರಂದು ಚಳ್ಳಕೆರೆಯಲ್ಲಿ ಜಿಲ್ಲಾಮಟ್ಟದ ಜನತಾ ದರ್ಶನ

Facebook
Twitter
Telegram
WhatsApp

 

 

ಚಿತ್ರದುರ್ಗ. ಡಿ.18: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ನೇತೃತ್ವದಲ್ಲಿ ಇದೇ ಡಿಸೆಂಬರ್ 22ರಂದು ಚಳ್ಳಕೆರೆ ಪಟ್ಟಣದ ಶ್ರೀ ಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಾರ್ವಜನಿಕರ ಕುಂದು ಕೊರತೆಗಳನ್ನು ಸ್ಥಳೀಯ ಮಟ್ಟದಲ್ಲಿ ನಿವಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿ ತಿಂಗಳು ಜಿಲ್ಲಾಮಟ್ಟದ ಜನತಾ ದರ್ಶನ ಏರ್ಪಡಿಸಲಾಗುತ್ತಿದ್ದು, ಈ ಬಾರಿಯ ಜಿಲ್ಲಾಮಟ್ಟದ ಜನತಾ ದರ್ಶನ ಇದೇ ಡಿಸೆಂಬರ್ 22ರಂದು ಬೆಳಿಗ್ಗೆ 10ಕ್ಕೆ ಚಳ್ಳಕೆರೆ ಪಟ್ಟಣದ ಶ್ರೀ ಗುರು ರಾಘವೇಂದ್ರ  ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.

ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಜನತಾ ದರ್ಶನದಲ್ಲಿ ಉಪಸ್ಥಿತರಿರುವರು. ಸಾರ್ವಜನಿಕರಿಂದ ಅರ್ಜಿಗಳನ್ನು ಪಡೆದು ಸ್ವೀಕೃತಿ ನೀಡುವ ಸಲುವಾಗಿ ಸಮರ್ಪಕ ರೀತಿಯಲ್ಲಿ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ತಮ್ಮ ಕುಂದುಕೊರತೆ ಕುರಿತ ಅಹವಾಲು, ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚಿದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಹವಾಮಾನದ ಬದಲಾವಣೆಗೆ ಅನುಗುಣವಾಗಿ ಚರ್ಮ ಮತ್ತು ಕೂದಲಿಗೆ ಸರಿಯಾದ ಪೋಷಣೆ ನೀಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಅನೇಕ ಜನರು ತಮ್ಮ ಕೂದಲಿಗೆ ಎಣ್ಣೆಯನ್ನು ಹಾಕುವುದಿಲ್ಲ ಏಕೆಂದರೆ ಅದು ಬೇಸಿಗೆಯಲ್ಲಿ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

error: Content is protected !!