Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಾನವೀಯತೆ ಮೆರೆದ ದುನಿಯಾ ವಿಜಯ್ ಗೆ ಸಂಕಷ್ಟ..!

---Advertisement---

ಕೆಲವೊಮ್ಮೆ ಮಾಡುವ ಒಳ್ಳೆ ಕೆಲಸಗಳೇ ಜೀವನಕ್ಕೆ ಮುಳ್ಳಾಗಿ ಬಿಡುತ್ತವೆ. ಈ ಮಾತು ಈಗ ದುನಿಯಾ ವಿಜಯ್ ಗೆ ಪಕ್ಕಾ ಮ್ಯಾಚ್ ಆಗ್ತಾ ಇದೆ. ಭೀಮಾ ಸಿನಿಮಾ ಸಮಯದಲ್ಲಿ ಜೈಲು ಹಕ್ಕಿಗಳಿಗೆ ಬಿಡುಗಡೆಯ ಭಾಗ್ಯ ಕಲ್ಪಿಸಿದ್ದರು. ಸುಮಾರು ವರ್ಷ ಜೈಲಿನಲ್ಲಿಯೇ ಇದ್ದ ಆರೋಪಿಗಳಿಗೆ ಜಾಮೀನು ಸಿಕ್ಕಿರಲಿಲ್ಲ. ಅಂತ ಹತ್ತು ಆರೋಪಿಗಳಿಗೆ ಲಕ್ಷ ಲಕ್ಷ ಶ್ಯೂರಿಟಿ ಕೊಟ್ಟು ಬಿಡುಗಡೆ ಮಾಡಿಸಿದ್ದರು. ಇದೀಗ ಅದೇ ದುನಿಯಾ ವಿಜಯ್ ಅವರಿಗೆ ಸಂಕಷ್ಟ ತಂದೊಡ್ಡುತ್ತಿದೆ.

ಸುರೇಶ್ ಎಂಬಾತ ಇತ್ತೀಚೆಗೆ ಕೋಪದ ಕೈಗೆ ಬುದ್ದಿ ಕೊಟ್ಟು ಎರಡು ಕೊಲೆಯನ್ನು ಮಾಡಿದ್ದ. ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈಗ ಕೊಲೆಯ ತನಿಖೆ ನಡೆಯುತ್ತಿದ್ದು, ಸುರೇಶ್ ಗೆ ಶ್ಯೂರಿಟಿ ಕೊಟ್ಟವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ಅಂದು ಶ್ಯೂರಿಟಿ ಕೊಟ್ಟು ಬಿಡಿಸಿದ್ದ ದುನಿಯಾ ವಿಜಯ್ ಅವರನ್ನು ವಿಚಾರಣೆ ನಡೆಸಲಿದ್ದಾರೆ. ದುನಿಯಾ ವಿಜಯ್ ಅವರಿಗೆ ಪೊಲೀಸರು ನೋಟೀಸ್ ನೀಡಲಿದ್ದಾರೆ. ಬಳಿಕ ದುನಿಯಾ ವಿಜಯ್ ಅವರು ಸುರೇಶ್ ಗೆ ಜಾಮೀನು ಕೊಡಿಸಿದ ಬಗ್ಗೆ ಪ್ರಶ್ನೆಗಳು ಎದುರಾಗಬಹುದು.

ಬಿಡಿಸಲು ಯಾರೂ ಇಲ್ಲದ ಕಾರಣ ಜೈಲಿನಲ್ಲಿಯೇ ಕಾಲ ಕಳೆಯುತ್ತಿದ್ದ ಸುರೇಶ್ ಪಾಲಿಗೆ ದೇವರಾಗಿ ಬಂದದ್ದು ದುನಿಯಾ ವಿಜಯ್‌. ಜೈಲಿನಿಂದ ಹೊರ ಬಂದ ಮೇಲೂ ಅಲ್ಲೋ ಇಲ್ಲೋ ಕೆಲಸ ಮಾಡಿಕೊಂಡು ಕಾಲ ಕಳೆಯುತ್ತಿದ್ದ ಸುರೇಶ್, ಕೊಲೆಯಾದ ವ್ಯಕ್ತಿಗಳು ರೇಗಿಸಿದರು ಎಂಬ ಕಾರಣಕ್ಕೆ ಮತ್ತದೆ ತಪ್ಪನ್ನ ಮಾಡಿದ್ದಾನೆ. ಈಗ ಮತ್ತೆ ಜೈಲಿಗೆ ಹೋಗಿದ್ದಾನೆ. ಅದೃಷ್ಟ ಚೆನ್ನಾಗಿದ್ದು ಹೊರಗೆ ಬಂದಿದ್ದಾತ ಮತ್ತದೆ ಜೈಲು ಸೇರಿದ್ದಾನೆ. ಇದರಿಂದ ದುನಿಯಾ ವಿಜಯ್ ಗೂ ಸಂಕಷ್ಟ ಎದುರಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...