ಬೆಂಗಳೂರು; ಹೊಸದಾಗಿ ಆಸ್ತಿ ತೆಗೆದುಕೊಳ್ಳಬೇಕು ಅಥವಾ ಮಾರಾಟ ಮಾಡಬೇಕು ಎಂದುಕೊಂಡವರಿಗೆ ಸರ್ಕಾರದಿಂದ ಶಾಕಿಂಗ್ ನ್ಯೂಸ್ ಎದುರಾಗಿದೆ. ಹೊಸದೊಂದು ನಿಯಮವನ್ನ ಮಾಡಿದ್ದು, ಈ ನಿಯಮ ಪಾಲಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ಮುಂದೆ 30 ಲಕ್ಷದ ಮೇಲೆ ಏನಾದರೂ ಆಸ್ತಿ ಖರೀದಿ ಮಾಡ್ತೀನಿ ಅಂದ್ರೆ ಅಥವಾ ಮಾರಾಟ ಮಾಡ್ತೀನಿ ಅಂದ್ರೆ ಅವರಿಗೆಲ್ಲಾ ಈ ನಿಯಮ ಸಂಬಂಧಿಸುತ್ತದೆ.
30 ಲಕ್ಷದ ಮೇಲೆ ಏನಾದ್ರೂ ಆಸ್ತಿ ಖರೀದಿ ಅಥವಾ ಮಾರಾಟ ಮಾಡ್ತೀರಾ ಎಂಬುದಾದರೆ ಅದಕ್ಕೆ ಸಂಬಂಧಿಸಿದವರು ಪಾನ್ ಕಾರ್ಡ್ ಸೇರಿದಂತೆ ಅನೇಕ ಮಾಹಿತಿಯನ್ನು ರಿಜಿಸ್ಟರ್ ಆಫೀಸಿಗೆ ನೀಡಬೇಕಾಗುತ್ತದೆ. ಒಂದು ವೇಳೆ ನೀಡದೆ ಹೋದಲ್ಲಿ ನಿಮ್ಮ ಆಸ್ತಿ ರಿಜಿಸ್ಟರ್ ಆಗುವುದಿಲ್ಲ. ಎಲ್ಲಾ ವಿವರಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದುಕೊಡಬೇಕು. ಇದನ್ನು ನೋಂದಣಿ ಹಾಗೂ ಮುದ್ರಾಂಕ ಇಲಾಖೆಯೂ ಕಂದಾಯ ಇಲಾಖೆಗೆ ರವಾನೆ ಮಾಡುತ್ತದೆ. ಈ ಹೊಸ ನಿಯಮದ ಪ್ರಕಾರ ಬೇನಾಮಿ ಆಸ್ತಿ ಮಾಡುವವರ ಮೇಲೂ ನಿಗಾ ಇಡುವುದಕ್ಕೆ ಪ್ರಯೋಜನವಾಗುತ್ತದೆ.
ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಆದಾಯ ತೆರಿಗೆ ಇಲಾಖೆಗೆ ನೆರವಾಗಲು ಖರೀದಿದಾರರು ಮತ್ತು ಮಾರಾಟಗಾರರ ಸಂಪೂರ್ಣ ವಿವರ ಸಲ್ಲಿಸುವುದನ್ನು ಕಡ್ಡಾಯ ಮಾಡಿದೆ. ಆಸ್ತಿ ಖರೀದಿದಾರರು ಮತ್ತು ಮಾರಾಟಗಾರರ ವಿವರ ಸಲ್ಲಿಸದಿದ್ದರೆ ಅಂಥ ಆಸ್ತಿಗಳು ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೋಂದಣಿಯೇ ಆಗಲ್ಲ. ಖರೀದಿದಾರ ಮತ್ತು ಮಾರಾಟಗಾರನಿಂದ ಪಡೆದ ಆಸ್ತಿ ವಿವರ, ಪಾನ್ ಸಂಖ್ಯೆ, ಫಾರಂ 16 ಸ್ವೀಕೃತಿ, ಆಧಾರ್ ಸಂಖ್ಯೆ, ತಂದೆ ಹೆಸರು, ವಿಳಾಸ ಸೇರಿದಂತೆ ಸ್ವವಿವರದ ಪ್ರಮಾಣ ಪತ್ರವನ್ನು ಆಸ್ತಿ ದಸ್ತಾವೇಜು ಜೊತೆಯೇ ಸ್ಕ್ಯಾನ್ ಮಾಡಬೇಕು. ಈ ಸ್ಕ್ಯಾನ್ ಮಾಡಿದ ಹಾಳೆಯನ್ನು ಫೈಲ್ ರೂಪದಲ್ಲಿಯೇ ಆಸ್ತಿ ದಸ್ತಾವೇಜು ಹಾಳೆಗಳ ಜೊತೆಯೇ ತಂತ್ರಾಂಶಕ್ಕರ ಅಪ್ಲೋಡ್ ಮಾಡಬೇಕು.











