Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೊತ್ತೂರು ಮಂಜು‌ನಾಥ್ ಗೆ ಅಯೋಗ್ಯ ಎಂದರಾ ಬಿವೈ ವಿಜಯೇಂದ್ರ..?

---Advertisement---

 

ತುಮಕೂರು; ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕೊತ್ತೂರು ಮಂಜುನಾಥ್ ಗೆ ಪರೋಕ್ಷವಾಗಿ ಅಯೋಗ್ಯ ಎಂದಿದ್ದಾರೆ. ಆಪರೇಷನ್ ಸಿಂಧೂರದ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಹೀಗಿರುವಾಗ ಹಲವರು ಸಾಕ್ಷಿಯನ್ನು ಕೇಳಿದ್ದಾರೆ ಈ ಬಗ್ಗೆ ಮಾತನಾಡುವಾಗ ಅಯೋಗ್ಯ ಎಂಬ ಪದ ಬಳಸಿದ್ದಾರೆ.

ಕೊತ್ತೂರು ಮಜುನಾಥ್ ಇರಬಹುದು, ಕಾಂಗ್ರೆಸ್ ನವರು ಇರಬಹುದು, ಯಾರೇ ಇರಬಹುದು. ಇಂತಹ ಸಂದರ್ಭದಲ್ಲಿ ದೇಶದ ಪರ ನಿಲ್ಲಬೇಕಾಗುತ್ತದೆ. ದೇಶ ದ್ರೋಹದ ಕೆಲಸ ಮಾಡಬಾರದು. ದೇಶದ ವಿರುದ್ಧ ಹೇಳಿಕೆ ಕೊಡಬಾರದು. ಪಾಕಿಸ್ತಾನದ ಪರವಾಗಿಯೂ ಹೇಳಿಕೆ ಕೊಡಬಾರದು. ಆ ಅಯೋಗ್ಯರು ಕೆಲವರು ಆ ರೀತಿ ಹೇಳಿಕೆ ಕೊಡ್ತಿದ್ದಾರೆ. ಅವರನ್ನ ಆ ಪಕ್ಷದ ಮುಖಂಎರು ಗಮನಿಸಬೇಕು ಎಂದು ಹೇಳುವ ಮೂಲಕ ಆಪರೇಷನ್ ಸಿಂಧೂರದ ಬಗ್ಗೆ‌ಮಾತಾಡಿದವರಿಗೆ ಅಯೋಗ್ಯ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟಿದ್ದರು. ತಿರಂಗ ಯಾತ್ರೆ ಇಡೀ ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.‌ದೊಡ್ಡ ಸಂಖ್ಯೆಯಲ್ಲಿ ನಾಗರೀಕರು, ದೇಶಭಕ್ತರು ತಿರಂಗ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.

ತಿರಂಗ ಯಾತ್ರೆ ಯಶಸ್ವಿಯಾಗಿದೆ. ರಾಜಕೀಯ ಕಾರಣಕ್ಕಾಗಿ ಈ ಯಾತ್ರೆ ನಡೆಯುತ್ತಿಲ್ಲ. ದೇಶದ ಜನರಲ್ಲಿ ಜಾಗೃತಿ ಮೂಡಿಸುವುದು, ಆಪರೇಷನ್ ಸಿಂಧೂರದಲ್ಕಿ ಪಾಲ್ಗೊಂಡ ಸೈನಿಕರಿಗೆ ನೈತಿಕ ಬೆಂಬಲ ಹಾಗೂ ಅಭಿನಂದನೆ ಸಲ್ಲಿಸುವುದಾಗಿದೆ. ಎಲ್ಲಾ ಮುಖಂಡರು ಸೇರಿ ತಿರಂಗ ಯಾತ್ರೆಯನ್ನು ಯಶಸ್ವಿಗೊಳಿಸಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎನ್ನುವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ವಿಧಾನಸೌಧದೊಳಗೆ ಪಾಕಿಸ್ತಾನ ಜಿಂದಾಬಾದ್ ಕೂಗುವ ದೇಶ ದ್ರೋಹಿಗಳು ನಮ್ಮ ರಾಜ್ಯದಲ್ಲೂ ಇದ್ದಾರೆ. ದೇಶದಲ್ಲೂ ಇದ್ದಾರೆ. ಅಂತಹವರನ್ನು ಹುಡುಕುವ ಕೆಲಸ ಆಗಬೇಕಾಗಿದೆ. ನರೇಂದ್ರ ಮೋದಿ ಜೀ ಅವರು ಆ ಕೆಲಸ ಮಾಡ್ತಾರೆ. ತಿರಂಗಯಾತ್ರೆಯಲ್ಲಿ ಬಿಜೆಪಿ ಬಾವುಟ ಕಾಣಲ್ಲ. ಪಕ್ಷಕ್ಕೆ ಸೀಮಿತವಾಗದೆ, ರಾಜಕೀಯೇತರವಾಗಿ ಸಮಾಜ‌ದ ಎಲ್ಲಾ ವರ್ಗದವನ್ನ ಮುಂಚೂಣಿಯಲ್ಲಿ ಕರೆದುಕೊಂಡು ತಿರಂಗ ಯಾತ್ರೆ ಮಾಡ್ತಿದ್ದೇವೆ. ಯಾತ್ರೆಯಲ್ಲಿ ರಾಜಕೀಯ ತಂತ್ರ, ಕುತಂತ್ರಗಳಿಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment