ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಗೆ ಇಬ್ಬರು ಮಕ್ಕಳು. ಒಂದು ಗಂಡು, ಮತ್ತೊಂದು ಹೆಣ್ಣು ಮಗು. ಮೊದಲ ಮಗು ಹೆಣ್ಣು. ಆದರೆ ಬಹಳ ದಿನಗಳಾದರೂ ಮೊದಲ ಮಗುವಿಗೂ ನಾಮಕರಣ ಮಾಡಿರಲಿಲ್ಲ. ಎರಡನೇ ಮಗು ಗಂಡಾದ ಮೇಲೂ ಯಾವಾಗ ನಾಮಕರಣ ಮಾಡುತ್ತಾರೆ ಎಂಬ ಕುತೂಹಲವಿತ್ತು. ಅಭಿಮಾನಿಗಳು ಸಹ ಕುತೂಹಲದಿಂದಾನೇ ಮಕ್ಕಳ ನಾಮಕರಣಕ್ಕಾಗಿ ಕಾಯುತ್ತಾ ಇದ್ದರು.
ಧ್ರುವ ಸರ್ಜಾ ಸಿಕ್ಕಾಗಲೂ ಅಭಿಮಾನಿಗಳು ಆ ಬಗ್ಗೆ ಕುತೂಹಲ ಹೊರ ಹಾಕುತ್ತಿದ್ದರು. ಮಕ್ಕಳಿಗೆ ನಾಮಕರಣ ಯಾವಾಗ ಮಾಡುತ್ತೀರಾ ಅಂತ. ಒಂದೊಳ್ಳೆ ಗಳಿಗೆ ನೋಡಿಕೊಂಡು ನಾಮಕರಣ ಮಾಡುತ್ತೀನಿ ಅಂತಾನೇ ಧ್ರುವ ಸರ್ಜಾ ಮಾಹಿತಿನೀಡಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಾಂಕ ನಿಗದಿಯಾದಾಗಲೇ ಧ್ರುವ ಸರ್ಜಾ ಕೂಡ ನಿರ್ಧಾರ ಮಾಡಿದ್ದರು. ಆ ಶುಭ ಗಳಿಗೆಯ ದಿನವೇ ಮಕ್ಕಳಿಗೆ ನಾಮಕರಣ ಮಾಡುವುದಾಗಿ ಹೇಳಿದ್ದರು.
ಧ್ರುವ ಸರ್ಜಾ ಫ್ಯಾಮಿಲಿ ಹೇಳಿಕೇಳಿ ಆಂಜನೇಯನ ಭಕ್ತರು. ಒಂದು ಊಹೆ ಮಾಡಲಾಗಿತ್ತು. ಆಂಜನೇಯನಿಗೆ ಸಂಬಂಧಿಸಿದ ಹೆಸರನ್ನೇ ಇಡಬಹುದು ಎಂದು. ಇದೀಗ ಆ ಹೆಸರುಗಳು ಏನಿರಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ತನ್ನಿಬ್ಬರು ಮಕ್ಕಳಿಗೆ ವಾವ್ ಎನಿಸುವಂತ ಹೆಸರುಗಳನ್ನೇ ಇಟ್ಟಿದ್ದಾರೆ.
ಧ್ರುವ ಸರ್ಜಾ ತಮ್ಮ ಮಗಳಿಗೆ ರುದ್ರಾಕ್ಷಿ ಧ್ರುವ ಸರ್ಜಾ ಹಾಗೂ ಮಗನಿಗೆ ಹಯಗ್ರೀವ ಧ್ರುವ ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ಪಂಚಮುಖಿ ಆಂಜನೇಯನಿಗೆ ಇರುವ ಮತ್ತೊಂದು ಹೆಸರೇ ಹಯಗ್ರೀವ. ಆಂಜನೇಯನ ಹೆಸರನ್ನೇ ಮಗನಿಗೆ ಇಟ್ಟಿದ್ದಾರೆ. ಈ ಸುಂದರ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಸೇರಿದಂತೆ ಇಡೀ ಕುಟುಂಬಸ್ಥರು ಪಾಲ್ಗೊಂಡು ಮಕ್ಕಳಿಗೆ ಆಶೀರ್ವಾದ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











