ದಕ್ಷಿಣಕನ್ನಡ: ಧರ್ಮಸ್ಥಳದಲ್ಲಿ ಕಳೆದ ಕೆಲವು ದಿನಗಳಿಂದಾನೂ ಶವಗಳನ್ನು ಹೂತು ಹಾಕಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಆರನೇ ಸ್ಪಾಟ್ ನಲ್ಲಿ ಬಿಟ್ಟರೆ ಬೇರೆಲ್ಲೂ ಅಸ್ಥಿಪಂಜರದ ಕುರುಹು ಸಿಕ್ಕಿಲ್ಲ. ಆದರೆ ಈಗ ಒಂದಷ್ಟು ಚರ್ಚೆಗಳಾಗ್ತಾ ಇದ್ದು, ಮೂಳೆಗಳು ಮಣ್ಣಿನಲ್ಲಿ ಕರಗಿ ಹೋಗಿದೆ ಎಂಬ ವಿಚಾರ ಚರ್ಚೆಗೆ ಬರ್ತಿದೆ. ಇದರ ನಡುವೆ ತನಿಖೆ ಎಲ್ಲಿಯವರೆಗೂ ನಡೆಯಬಹುದು ಎಂಬ ಚರ್ಚೆಯೂ ಆಗ್ತಿದೆ.
ಎಸ್ಐಟಿ ಮುಂದಿನ ತಿಂಗಳ ಒಳಗೆ ತನಿಖೆಯನ್ನ ಪೂರ್ಣಗೊಳಿಸುವ ಟಾರ್ಗೆಟ್ ಇಟ್ಟುಕೊಂಡಿದೆಯಂತೆ. ನಾಲ್ಕೈದು ದಿನಗಳಲ್ಲಿ ತನಿಖೆಯ ದಿಕ್ಕಿಗೆ ಒಂದು ಸ್ಪಷ್ಟ ರೂಪ ಸಿಗಲಿದೆ. ವಾರದಲ್ಲಿಯೇ ಬುರುಡೆ, ಎಫ್ಎಸ್ಎಲ್ ವರದಿ ಬರಲಿದೆ ಎನ್ನಲಾಗಿದೆ. ಎಫ್ಎಸ್ಎಲ್ ವರದಿಗಾಗಿ ಎಸ್ಐಟಿ ಅಧಿಕಾರಿಗಳು ಕಾಯುತ್ತಿದ್ದು, ವರದಿ ಬಂದ ಬಳಿಕ ತನಿಖೆಯನ್ನ ಚುರುಕುಗೊಳಿಸಲಿದೆ ಎನ್ನಲಾಗಿದೆ. ಯಾಕಂದ್ರೆ ಎಫ್ಎಸ್ಎಲ್ ವರದಿ ಬಂದ ಬಳಿಕ ಸ್ಪಷ್ಟ ಹಾದಿ ತಿಳಿಯಲಿದೆ. ಈಗಾಗಲೇ ಮಣ್ಣಿನ ಸ್ಯಾಂಪಲ್ ಅನ್ನು ತೆಗೆದುಕೊಂಡು ಹೋಗಲಾಗಿದೆ. ಈ ಮೂಲಕ ಮಣ್ಣಿನಲ್ಲಿ ಮೂಳೆ ಕರಗಿ ಹೋಗಿದೆ ಎನ್ನುತ್ತಿರುವ ಮಾತಿಗೆ ವರದಿಯಲ್ಲಿ ಉತ್ತರ ಸಿಕ್ಕಂತೆ ಆಗಲಿದೆ.
ತನಿಖೆ ಇನ್ನು ಪ್ರಾಥಮಿಕ ಹಂತದಲ್ಲಿ ನಡೆಯುತ್ತಿದೆ. ಇದೇ ವಿಚಾರ ಸಿಎಂ ಸಿದ್ದರಾಮಯ್ಯ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ಈ ತನಿಖೆ ವೇಗದಲ್ಲಿ ನಡೆಯಲಿ ಎಂದಿದ್ದಾರಂತೆ. ಹೀಗಾಗಿ ಎಫ್ಎಸ್ಎಲ್ ವರದಿಗಾಗಿ ಎಸ್ಐಟಿ ಅಧಿಕಾರಿಗಳು ಕಾಯ್ತಾ ಇದೆ. ಈಗ ನಡೆಯುತ್ತಿರುವ ತನಿಖೆ, ವರದಿಯೆಲ್ಲವನ್ನು ಸಂಗ್ರಹಿಸಿ, ಸರ್ಕಾರಕ್ಕೆ ನೀಡಲು ಎಸ್ಐಟಿ ಎಲ್ಲಾ ರೀತಿಯ ಸಿದ್ಧತೆಯನ್ನು ನಡೆಸಿಕೊಂಡಿದೆ. ವರದಿ ಬಂದ ಬಳಿಕವಷ್ಟೇ ಅಲ್ಲಿ ಹೆಣಗಳಿದ್ವಾ..? ಏನು ಎಂಬೆಲ್ಲಾ ಮಾಹಿತಿ ಜನ ಸಾಮಾನ್ಯರಿಗೂ ತಿಳಿಯಲಿದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






