Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆರ್ಯವೈಶ್ಯ ಸಂಘದಿಂದ ನವೆಂಬರ್ 05 ರಂದು ಚಿತ್ರದುರ್ಗದಲ್ಲಿ ದೇವತೆಗಳ ಸಮಾಗಮ ಊರಹಬ್ಬ ಮತ್ತು ಪಂಚ್ಯಗವ್ಯ ಹೋಮ

---Advertisement---

ವರದಿ ಮತ್ತು ಫೋಟೋ ಕೃಪೆ : ಸುರೇಶ್ ಪಟ್ಟಣ್,                             ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ನವೆಂಬರ್. 02 : ಆರ್ಯ ವೈಶ್ಯ ಸಂಘ ಮತ್ತು ಜೈ ವಾಸವಿ ಮಿತ್ರ ವೃಂದ ಇವರ ಸಂಯುಕ್ತಾಶ್ರಯದಲ್ಲಿ ನವೆಂಬರ್ 05 ರ ಭಾನುವಾರ ಹನ್ನೂಂದು ದೇವತೆಗಳ ಸಮಾಗಮ ಊರಹಬ್ಬ ಮತ್ತು ಲೋಕ ಕಲ್ಯಾಣಕ್ಕಾಗಿ ಪಂಚ್ಯಗವ್ಯ ಹೋಮವನ್ನು ನಗರದ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯವೈಶ್ಯ ಸಂಘದ ಗೌರವಾಧ್ಯಕ್ಷರಾದ ಎಸ್.ಎನ್. ಕಾಶಿ ವಿಶ್ವನಾಥ್ ಶೆಟ್ಟಿ ಮತ್ತು ಅಧ್ಯಕ್ಷರಾದ ಎಂ.ಕೆ.ವೆಂಕಟೇಶ್ ತಿಳಿಸಿದ್ದಾರೆ.

ಜೈ ವಾಸವಿ ಮಿತ್ರ ವೃಂದದ  14ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರಲ್ಲಿ ಶ್ರೀ ಕನ್ಯಕಾಪರಮೇಶ್ವರಿ, ಶ್ರೀ ಏಕನಾಥೇಶ್ವರಿ ಶ್ರೀ ಉಚ್ಚಂಗಿಯಲ್ಲಮ್ಮ, ಶ್ರೀ ಬರಗೇರಮ್ಮ, ಶ್ರೀ ಗೌರಸಂದ್ರ ಮಾರಮ್ಮ, ಶ್ರೀ ಕಾಳಿಕಮಠೇಶ್ವರಿ, ಶ್ರೀ ದುರ್ಗಾದೇವಿ, ಶ್ರೀ ಬುಡ್ಡಾಂಬಿಕದೇವಿ, ಶ್ರೀ ಬನಶಂಕರಿ ಶ್ರೀ ಚೇಳುಗುಡ್ಡ ಗೌರಸಂದ್ರ ಹಾಗೂ ಶ್ರೀ ದೊಡ್ಡ ಮಾರಮ್ಮ ಅಮ್ಮನವರು ಆಗಮಿಸಲಿದ್ದಾರೆ.

ಅಂದು ಬೆಳಿಗ್ಗೆ 8 ಗಂಟೆಗೆ ಅಮ್ಮನವರನ್ನು ಮೆರವಣಿಗೆಯ ಮೂಲಕ ಸಿಹಿನೀರಿನ ಹೊಂಡದಿಂದ ಕರೆದುಕೊಂಡು ನಗರದ ವಾಸವಿ ಮಹಲ್ ರಸ್ತೆಯಲ್ಲಿನ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯಕ್ಕೆ ಬರಲಾಗುವುದು. ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ಭಕ್ತಾಧಿಗಳಿಗೆ ಅಮ್ಮನವರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ, ಅಲ್ಲದೆ ಅಮ್ಮನವರಿಗೆ ಮಡಿಲು ಅಕ್ಕಿಯನ್ನು ಹಾಕುವುದಕ್ಕೂ ಸಹಾ ಅವಕಾಶವನ್ನು ಕಲ್ಪಿಸಲಾಗಿದೆ ಮದ್ಯಾಹ್ನ 12 ಗಂಟೆಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಗರದ ಸರ್ವ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಮನವಿ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...