ಹುಬ್ಬಳ್ಳಿ; ಸವದತ್ತಿ ಯಲ್ಲಮ್ಮ ಗುಡ್ಡದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರದ ವಿರುದ್ಧ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ. ಕರ್ನಾಟಕದಿಂದ ದೇವಸ್ಥಾನಗಳ ಅಭಿವೃದ್ಧಿ ಸಲುವಾಗಿ 15 ರಿಂದ 20 ಪ್ರಪೋಷಲ್ ಹೋಗಿದ್ದವು. ಇದರಲ್ಲಿ ಬೆಂಗಳೂರಿನ ದೇವಿಕಾರಾಣಿ ಎಸ್ಟೇಟ್ ದೇವಾಲಯ, ಸವದತ್ತಿಯ ರೇಣುಕಾ ಎಲ್ಲಮ್ಮ ದೇವಸ್ಥಾನ ಸಹ ಒಂದು ಎಂದಹ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತು ಬೆಳಗಾವಿ ಅಧಿಕಾರಿ ಹಾಗೂ ಡಿಸಿ ಅವರಿಗೆ ಮನವರಿಕೆ ಮಾಡಿದೆ. ಕೇಂದ್ರ ಪ್ರಚಾಸ ಸಚಿವರ ಗಮನಕ್ಕೆ ತಂದು ಮಾಹಿತಿ ಕೊಟ್ಟೆ. ನಾನು ಸೂಚನೆ ನೀಡಿದ ಕಾರಣ ಅನುದಾನ ಬಂದಿದೆ. 118 ಕೋಟಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗಿದೆ. 118 ಅನುದಾನ ಖರ್ಚು ಆಗಿದ್ದು, ಇದನ್ನು ಖರ್ಚು ಮಾಡುವ ಹೊಣೆ ರಾಜ್ಯ ಸರಕಾರದ್ದು. ರಾಜ್ಯ ಸರ್ಕಾರದ ಪ್ರವಾಸೋದ್ಯಮ ಸಚಿವರು ಎಚ್ ಕೆ ಪಾಟೀಲ್ ಇದ್ದಾರೆ. ಆದರೆ ನನ್ನ ಯಾವುದೇ ರೀತಿಯಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳತಾ ಇಲ್ಲ.
ಯಾವುದೇ ನಿರ್ಣಯ , ಸಭೆ ಮಾಡಿದರೆ ಕೊನೆಯ ಸಮಯದಲ್ಲಿ ಗಮನಕ್ಕೆ ತರುತ್ತಾರೆ. ನಾಳೆ ಸಭೆ ಇದ್ದರೆ ಇಂದು ಮಾಹಿತಿ ಕೊಡುತ್ತಾರೆ. ನಾನು ಸಂಸದ ಇದ್ದೇನೆ ನನ್ನದೇ ಸಲಹೆ ಸೂಚನೆಗಳು ಇವೆ. ನಾನು ಸಹ ಮಾಹಿತಿ ,ಸಲಹೆ ಸೂಚನೆ ಮಾರ್ಗದರ್ಶನ ನೀಡಲು ಆಗತಾ ಇಲ್ಲ. ಆದರೆ ನನಗೆ ಸರಿಯಾದ ಮಾಹಿತಿ ಕೊಡತಾ ಇಲ್ಲ. ರಾಜಕೀಯ ಕಾರಣಕ್ಕೆ ಜೊತೆಗೆ ಬೇರೆ ಬೇರೆ ಕಾರಣಕ್ಕೆ ನನಗೆ ಮಾಹಿತಿ ಕೊಡತಾ ಇಲ್ಲ. ಇಂದು ಲೋಕಸಭಾ ಸದಸ್ಯರನ್ನ ಬಿಟ್ಟು ಸಭೆ ಮಾಡಲಾಗುತ್ತಿದೆ. ಈ ಕುರಿತು ಪ್ರವಾಸೋದ್ಯಮ ಸಚಿವರಿಗೆ ಪತ್ರ ಸಹ ಬರೆದಿದ್ದೇನೆ. ಮುಂದಿನ ದಿನಗಳಲ್ಲಿ ಇದು ಸರಿಹೋಗ ಬಹುದು. ರಾಜ್ಯ ಸರ್ಕಾರದ ಯಾವುದೇ ಅನುದಾನ ಕೊಡತಾ ಇಲ್ಲ.
ಕಳೆದ ಬಜೆಟ್ ನಲ್ಲಿ ಸಹ ಸಿಎಂ ಸಿದ್ದರಾಮಯ್ಯ ಹೇಳಿದ್ದರು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು. ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಕೊಟ್ಟ 118 ಕೋಟಿ ಅನುದಾನ ಖರ್ಚು ಮಾಡತಾ ಇದ್ದಿರಿ ಅಷ್ಟೇ. ಇದಕ್ಕೂ ನಮ್ಮ ಯಾವುದೇ ತಕರಾರು ಇಲ್ಲ. ಆದರೆ ರಾಜ್ಯ ಸರ್ಕಾರ ದೇವಸ್ಥಾನ ಅಭಿವೃದ್ಧಿ ಅನುದಾನ ಕೊಟ್ಟಿದ್ದೇವೆ ಅಂತಾ ಸುಳ್ಳು ಹೇಳ್ತಾ ಇದ್ದಾರೆ ಎಂದಿದ್ದಾರೆ.






