Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೋಟೆನಾಡಿನ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ Destiny-2022 ; ಜುಲೈ 12 ರಿಂದ 27 ರವರೆಗೆ ಸಾಂಸ್ಕೃತಿಕ ರಸದೌತಣ

Facebook
Twitter
Telegram
WhatsApp

ಚಿತ್ರದುರ್ಗ :  ಜಿಲ್ಲೆಯಲ್ಲಿ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ‘ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯು ಪ್ರಾರಂಭವಾಗಿ ಸುಮಾರು 39 ವರ್ಷಗಳನ್ನು ಕಳೆದು 40 ನೇ ವಸಂತಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಆಶಾಕಿರಣವಾಗಿ ಮಧ್ಯ ಕರ್ನಾಟಕದಲ್ಲಿಯೇ ಅತ್ಯುನ್ನತ ಮಟ್ಟದಲ್ಲಿ ಸುಸಜ್ಜಿತ ಶೈಕ್ಷಣಿಕ ಕಟ್ಟಡಗಳನ್ನು ನಿರ್ಮಿಸಿ ಆಡಳಿತ ಮಂಡಳಿಯು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ಜಿಲ್ಲೆಯು ಬರಪೀಡಿತ ಜಿಲ್ಲೆಯಾಗಿದ್ದು ಎಲ್ಲಾ ಕ್ಷೇತ್ರಗಳಲ್ಲಿ ಅಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿದ್ದು ಇಂತಹ ಸಂದರ್ಭದಲ್ಲಿ 1983-84 ರಲ್ಲಿ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯನ್ನು ಶ್ರೀಯುತ ಎಂ. ಚಂದ್ರಪ್ಪರವರು (ಶಾಸಕರು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಹಾಗೂ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳು) ಎಂ.ಎಂ. ಶಾಲೆಯನ್ನು ಮೊಟ್ಟ ಮೊದಲ ಬಾರಿಗೆ ಪ್ರಾರಂಭ ಮಾಡಿದರು.

ಈ ಸಂಸ್ಥೆಯು ತದನಂತರ ವೆಂಕಟೇಶ್ವರ ಬಿ.ಇಡಿ. ಕಾಲೇಜು, ಎಸ್.ಎಲ್.ವಿ. ನರ್ಸಿಂಗ್ ಕಾಲೇಜು, ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜು, ಇಂಡಿಯನ್ ಇಂಟರ್ ನ್ಯಾಷನಲ್ ಸಿಬಿಎಸ್‍ಇ ಹಾಗೂ ಸ್ಟೇಟ್ ಶಾಲೆ, ಎಸ್.ಎಲ್.ವಿ. ಪಿ.ಯು. ಕಾಲೇಜು, ಆದ್ಯ ಫಾರ್ಮಸಿ ಕಾಲೇಜು ಹಾಗೂ ಪ್ರಕೃತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜುಗಳನ್ನು ಪ್ರಾರಂಭಿಸಿದರು.

ಈ ಸಂಸ್ಥೆಯು ಪ್ರಾರಂಭವಾಗಿ ಇಂದಿಗೆ 40 ವರ್ಷಗಳಾಗಿದ್ದು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದಂತಹ ಸಾವಿರಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಹಾಗೇ ಈ ಸಂಸ್ಥೆಯಲ್ಲಿ ಸುಮಾರು 6000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಮತ್ತು 1000 ಕ್ಕೂ ಹೆಚ್ಚು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಂದರ್ಭದಲ್ಲಿ 40 ನೇ ವರ್ಷದ ‘DESTINY -2022’  ಕಾರ್ಯಕ್ರಮವನ್ನು  ಜುಲೈ 12 ರಿಂದ 27 ರವರೆಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳುವ ಉದ್ದೇಶ ಇಂದಿನ ಶೈಕ್ಷಣಿಕ ಚಟುವಟಿಕೆಗಳನ್ನು ಗಮನಿಸಿದರೆ ವಿದ್ಯಾರ್ಥಿಗಳು ಕೇವಲ ಓದು ಬರಹ ಹಾಗೂ ಮೊಬೈಲ್ ಗೇಮ್‍ಗಳ ಕಡೆ ಹೆಚ್ಚಿನ ಗಮನಕೊಡುತ್ತಿದ್ದಾರೆ. ಇಂದಿನ ಮಕ್ಕಳಿಗೆ ಆಟಗಳ ಬಗ್ಗೆ ಆಗಲಿ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಆಗಲಿ ಯಾವುದೇ ಜ್ಞಾನವಿರುವುದಿಲ್ಲ. ಈ ಮೊಬೈಲ್ ಗೇಮ್‍ನಿಂದ ಮಕ್ಕಳನ್ನು ಹೊರತರುವ ಉದ್ದೇಶದಿಂದ ಸುಮಾರು 15 ದಿನಗಳ ಕಾಲ ಈ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಈ ಚಟುವಟಿಕೆಗಳಲ್ಲಿ ಜಿಲ್ಲೆಯಾದ್ಯಂತ  ಪ್ರಾಥಮಿಕ ಶಾಲೆಗಳ ಹಂತದಿಂದ ಪದವಿ ಕಾಲೇಜು ಹಂತದವರೆಗೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.

ಈ ಕಾರ್ಯಕ್ರಮವು 15 ದಿನಗಳ ಕಾಲ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿದ್ದು ಇಲ್ಲಿ ನೃತ್ಯ, ಸಂಗೀತ, ರಸಪ್ರಶ್ನೆ, ಬರವಣಿಗೆ ಕೌಶಲ, ಕನ್ನಡ ಭಾಷಾ ಸಾಮಥ್ರ್ಯ, ವೇಷಭೂಷಣ, ವಿಜ್ಞಾನ ವಸ್ತು ಪ್ರದರ್ಶನ, ಚರ್ಚಾಸ್ಪರ್ಧೆ, ಓಟ ಸ್ಪರ್ಧೆ, ವಾಲಿಬಾಲ್, ಥ್ರೋಬಾಲ್, ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್, ಚೆಸ್, ಕೇರಂ ಇನ್ನೂ ಮುಂತಾದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿದಿನ ನಡೆಯಲಿದ್ದು ಅದೇ ದಿನ ಸಂಜೆ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ನಗದು ಬಹುಮಾನ ವಿತರಣೆ ಮಾಡಲಾಗುವುದು. ಹಾಗೆಯೇ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ 100 ಜನ ಗಣ್ಯರಿಗೆ ಆಹ್ವಾನಿಸಿ ವಿಶೇಷ ಸನ್ಮಾನ ಹಾಗೂ ಗೌರವ ಸಮರ್ಪಣೆಯನ್ನು ಮಾಡಲಾಗುವುದು ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ. ರಘುಚಂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇತ್ತಿಚೆಗಷ್ಟೇ ಗೆಲುವಿನ ಹಾದಿಯಲ್ಲಿ ಆರ್ಸಿಬಿ : ಇಂದು ನಡೆಯಬೇಕಿದ್ದ ಮ್ಯಾಚ್ ರದ್ದಾಗುತ್ತಾ..?

ಬೆಂಗಳೂರು: ನಿನ್ನೆಯಿಂದ ರಾಜ್ಯಾದ್ಯಂತ ಮಳೆರಾಯನ ದರ್ಶನವಾಗಿದೆ. ಎಲ್ಲೆಲ್ಲೂ ಉತ್ತಮ ಮಳೆ ಬಂದಿದೆ. ಇನ್ನು ಮೂರು ದಿನಗಳ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಹವಮಾನ ಇಲಾಖೆ ನೀಡಿದೆ. ಹೀಗಾಗಿ ಇದು ಕ್ರಿಕೆಟ್ ಪ್ರಿಯರಿಗೆ ಮ್ಯಾಚ್ ಬಗ್ಗೆ ಚಿಂತೆ

ಇತ್ತಿಚೆಗಷ್ಟೇ ಗೆಲುವಿನ ಹಾದಿಯಲ್ಲಿ ಆರ್ಸಿಬಿ : ಇಂದು ನಡೆಯಬೇಕಿದ್ದ ಮ್ಯಾಚ್ ರದ್ದಾಗುತ್ತಾ..?

ಬೆಂಗಳೂರು: ನಿನ್ನೆಯಿಂದ ರಾಜ್ಯಾದ್ಯಂತ ಮಳೆರಾಯನ ದರ್ಶನವಾಗಿದೆ. ಎಲ್ಲೆಲ್ಲೂ ಉತ್ತಮ ಮಳೆ ಬಂದಿದೆ. ಇನ್ನು ಮೂರು ದಿನಗಳ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಹವಮಾನ ಇಲಾಖೆ ನೀಡಿದೆ. ಹೀಗಾಗಿ ಇದು ಕ್ರಿಕೆಟ್ ಪ್ರಿಯರಿಗೆ ಮ್ಯಾಚ್ ಬಗ್ಗೆ ಚಿಂತೆ

ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ನಾನು ಗೆದ್ದಂಗೆ: ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಮುಖ್ಯಮಂತ್ರಿಯಾಗಿ ನನಗೆ ಹೆಚ್ಚು ಶಕ್ತಿ ಬರುತ್ತದೆ: ದಾವಣಗೆರೆಯಲ್ಲಿ  ಸಿ.ಎಂ. ಸಿದ್ದರಾಮಯ್ಯ ಹೇಳಿಕೆ

ದಾವಣಗೆರೆ ಮೇ 4: ನನ್ನ ಮತ್ತು ಕನಕಪೀಠದ ನಿರಂಜನಾನಂದಪುರಿ ಶ್ರೀಗಳ ಮಾತನ್ನು ತಿರಸ್ಕರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ವಿನಯ್ ಕುಮಾರ್ ನನ್ನು ನೀವೆಲ್ಲರೂ ತಿರಸ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಇಲ್ಲಿ ನಡೆದ

error: Content is protected !!