Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಮಾಡಿಯೇ ಮಾಡ್ತೀವಿ : ರೇಣುಕಾಚಾರ್ಯ

---Advertisement---

 

ದಾವಣಗೆರೆ: ಯಾರೇ ಯಡಿಯೂರಪ್ಪ ಅವರ ಕುಟುಂಬಸ್ಥರ ವಿರುದ್ಧ ಮಾತನಾಡಿದರು ಮಾಜಿ ಸಚಿವ ರೇಣುಕಾಚಾರ್ಯ ಅವರು ಸಹಿಸುವುದಿಲ್ಲ. ಈಗ ಅವರ ಪರ ಮಾತಾಡಿದ್ದಾರೆ. ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಮಾಡಿಯೇ ಮಾಡ್ತೀವಿ ಎಂದಿದ್ದಾರೆ.

ಯಡಿಯೂರಪ್ಪ ಅವರ ಬಗ್ಗೆ ನಿಮ್ಮದು ಏನು ಅಜೆಂಡಾ. ಯಡಿಯೂರಪ್ಪ ಅವರು ಯಾವ ಪುರುಷಾರ್ಥಕ್ಕೆ ರಾಜ್ಯ ಪ್ತವಾಸ ಮಾಡ್ತಾರೆ ಅಂತ ಹೇಳ್ತೀರಲ್ವಾ. ಈ ರಾಜ್ಯದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಬೇಕು ಅಂತೇಳಿ ಯಡಿಯೂರಪ್ಪ ಅವರು ಪ್ರವಾಸವನ್ನು ಮಾಡ್ತೀನಿ ಅಂತ ಹೇಳಿದ್ದಾರೆ. ಯಡಿಯೂರಪ್ಪ ಅವರು ವಿಜಯೇಂದ್ರ ಅವರು ಮುಖ್ಯಮಂತ್ರಿ ಆಗಲಿ ಅಂತ ಹೇಳಲಿಲ್ಲವಿಜಯೇಂದ್ರ ಅವರು ಮುಖ್ಯಮಂತ್ರಿ ಆಗಬೇಕು ಅಂತ ಹೇಳಿ ರಾಜ್ಯದ ಜನ ಹೇಳ್ತಾ ಇದಾರೆ‌.

ನಾವೂ ಸಂಕಲ್ಪ ಮಾಡ್ತೇವೆ ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಮಾಡಿಯೇ ಮಾಡ್ತೀವಿ. ಯಾವ ದುಷ್ಟಶಕ್ತಿಯೂ ಅದನ್ನು ತಡೆಯುವುದಕ್ಕೆ ಆಗಲ್ಲ. ಮಾತೆತ್ತಿದ್ದರೆ ಯಡಿಯೂರಪ್ಪ ಅವರ ಒಬ್ಬರ ಹೆಸರನ್ನಷ್ಟೇ ತಗೊಳೋದಾ..? ನಂಗೆ ಗೊತ್ತಿದೆ ನಿಮಗೆ ಪ್ರಚೋದನೆ ಮಾಡುವುದು ಯಾರು ಎಂದು. ಮಹಾನ್ ನಾಯಕನೊಬ್ಬ ಸೋತ ಶಾಸಕರ ಸಭೆಯ ನಂತರ 17 ಜನ ತನಗೆ ಫೋನ್ ಮಾಡಿ ವಿಜಯೇಂದ್ರನ ಒತ್ತಾಯಕ್ಕೆ ಮಣಿದು ಸಭೆಗೆ ಹೋಗಿದ್ದೆವು ಅಂದಿದ್ದಾನೆ. ಬೇರೆ ಪಕ್ಷದಲ್ಲಿದ್ದ ಅವನು ಯಡಿಯೂರಪ್ಪನವರ ಕಾಲು ಹಿಡಿದು ಬಿಜೆಪಿಗೆ ಸೇರಿದ್ದು ತನಗೆ ಗೊತ್ತಿಲ್ಲವೇ. ಅಂದು ಏನು ಹೇಳಿದ್ರಿ ಶಟ್ರು ಭಟ್ರು ಪಾರ್ಟಿ ಅಂತ ಹೇಳಿ ವಿಧಾನ ಪರಿಷತ್ ನಲ್ಲಿ ಹೇಳಿದ್ರಿ ಮರೆತು ಬಿಟ್ಟಿದ್ದೀರಾ. ಭಾರತೀಯ ಜನತಾ ಪಾರ್ಟಿ ಯಾವ ವರ್ಗದವರ ಪಕ್ಷ ಅಲ್ಲ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಎಲ್ಲಾ ಸಮಾಜ ಒಳಗೊಂಡಂತೆ ಬಿಜೆಪಿ ಪಾರ್ಟಿಯನ್ನು ಕಟ್ಟಿದ್ದು. ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿದರೆ ನಾವೂ ಸಹಿಸಲ್ಲ ಎಂದು ಮಾಜಿ ಸಚಿವ ರೇಣುಕಾಚಾರ್ಯ ಗುಡುಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment