Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಗನನ್ನು ವಾಪಾಸ್ ಕೊಟ್ಟಿದ್ದಕ್ಕೆ ಚಿರ ಋಣಿ : ಪ್ರತಾಪ್ ತಾಯಿ ಕಣ್ಣೀರು

---Advertisement---

ಇಂದು ಮತ್ತು ನಾಳೆ ಬಿಗ್ ಬಾಸ್ ಸೀಸನ್ 10 ಫಿನಾಲೆ ನಡೆಯುತ್ತಿದೆ. ನಾಳೆ ವಿನ್ನರ್ ಯಾರಾಗ್ತಾರೆ ಎಂಬ ಕುತೂಹಲ ಕರ್ನಾಟಕದ ಮಂದಿಯಲ್ಲಿ ಇದೆ. ಒಂದು ಹಂತದಲ್ಲಿ ಇವರೇ ಆಗಬಹುದು ಎಂದು ಲೆಕ್ಕಾಚಾರ ಹಾಕಿದರು ಕೂಡ, ಎಷ್ಟೋ ಸೀಸನ್ ನಲ್ಲಿ ಅದು ಉಲ್ಟಾ ಆಗಿದೆ. ಹೀಗಾಗಿ ನಾಳೆಯ ದಿನಕ್ಕಾಗಿಯೇ ಎಲ್ಲರೂ ಕಾಯುತ್ತಿದ್ದಾರೆ.

ಇಂದು ಫಿನಾಲೆಯ ವೇದಿಕೆಯಲ್ಲಿ ಎಲ್ಲಾ ಸ್ಪರ್ಧಿಗಳು ಕೂತಿದ್ದಾರೆ. ಒಳಗಿರುವ ಆರು ಸ್ಪರ್ಧಿಗಳ ಕುಟುಂಬಸ್ಥರು ಬಂದಿದ್ದಾರೆ. ಎಲ್ಲರಿಗೂ ಕುತೂಹಲ, ಟೆನ್ಶನ್ ಇದ್ದೆ ಇದೆ. ಇದೇ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ಅವರ ತಾಯಿ ಕಣ್ಣೀರು ಹಾಕಿದ್ದಾರೆ. ಡ್ರೋನ್ ಪ್ರತಾಪ್ ಮೇಲೆ ಬಂದಂತ ಆರೋಪಗಳಿಂದಾಗಿ ಮನೆಯವರ ಸಂಪರ್ಕವೇ ಇರಲಿಲ್ಲ. ತಂದೆ-ತಾಯಿಯ ಜೊತೆಗೆ ಮಾತನಾಡಿಯೇ ಮೂರು ವರ್ಷಗಳಾಗಿತ್ತು. ಆದರೆ ಬಿಗ್ ಬಾಸ್ ವೇದಿಕೆ ಟ್ರೋಫಿ ಕೊಡುತ್ತೋ ಬಿಡುತ್ತೋ ಪ್ರತಾಪ್ ಗೆ ಹೊಸ ಜೀವನವನ್ನೇ ನೀಡಿದೆ. ತಂದೆ – ತಾಯಿಗೆ ಮತ್ತೆ ಹೊಸ ಮಗನನ್ನು ಕೊಟ್ಟಿದೆ. ಪ್ರತಾಪ್ ಪೋಷಕರನ್ನು ವಾಪಾಸ್ ಕೊಟ್ಟಿದೆ.

ಇದೇ ಸಂತಸ, ಇದೇ ಖುಷಿ ಪ್ರತಾಪ್ ತಾಯಿ ಮುಖದಲ್ಲೂ ಕಾಣುತ್ತಿದೆ. ಅದಕ್ಕೆ ಆನಂದ ಬಾಷ್ಪ ಸುರಿಸಿದ್ದಾರೆ. ಸುದೀಪ್ ಅವರಿಗೂ, ಬಿಗ್ ಬಾಸ್ ಗೂ ಧನ್ಯವಾದ ತಿಳಿಸಿದ್ದಾರೆ. ‘ನಮ್ಮ ಮಗನನ್ನು ನಮಗೆ ವಾಪಸ್ ಕೊಟ್ಟಿದ್ದೀರಾ. ಈ ವೇದಿಕೆಗೆ ನಾವೂ ಸದಾ ಚಿರ ಋಣಿಗಳಾಗಿರುತ್ತೇವೆ’ ಎಂದಿದ್ದಾರೆ.

 

ಪ್ರತಾಪ್ ಆರಂಭದಲ್ಲಿ ಅಸಮರ್ಥರಾಗಿ ಬಂದಿದ್ದರು. ಮನೆಗೆ ಬಂದಾಗಲಂತು ಮನೆಯವರ ಚುಚ್ಚು ಮಾತಿನಿಂದಾನೇ ನೊಂದು ಹೋಗಿದ್ದರು. ಕಿಚ್ಚ ಸುದೀಪ್ ಕೊಟ್ಟಂತಹ ಸ್ಪೂರ್ತಿದಾಯಕ ಮಾತಿಗಳು, ಧೈರ್ಯ ಪ್ರತಾಪ್ ಮುನ್ನುಗ್ಗುವಂತೆ ಮಾಡಿತ್ತು. ಇಂದು ಫಿನಾಲೆಯ ಹಂತಕ್ಕೆ ಮಾಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...