Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿಸಿಇಟಿ ಪ್ರಥಮ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ

---Advertisement---

ಬೆಂಗಳೂರು.ಜುಲೈ.19ಎಂಜಿನಿಯರಿಂಗ್ ಕೋರ್ಸ್ ಗಳ ನೇರ 3ನೇ ಸೆಮಿಸ್ಟರ್ ಪ್ರವೇಶಾತಿಗೆ ಎದುರುನೋಡುತ್ತಿದ್ದ ಡಿಸಿಇಟಿ (DCET) ಮೊದಲ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತವಾಗಿ ಪ್ರಕಟಿಸಿದೆ.

ಅರ್ಹ ಅಭ್ಯರ್ಥಿಗಳು ಜುಲೈ 21 ರಿಂದ 24 ರವರೆಗೆ ತಮ್ಮ ಇಚ್ಛೆಯ ಕಾಲೇಜು ಹಾಗೂ ಕೋರ್ಸ್ ಗಳ ಆಯ್ಕೆಗಳನ್ನು (Options) ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

 

ಪ್ರಾಧಿಕಾರದ ವೇಳಾಪಟ್ಟಿಯ ಪ್ರಕಾರ, ಜುಲೈ 24 ರಂದು ಸಂಜೆ 6 ಗಂಟೆಗೆ ಸೀಟು ಹಂಚಿಕೆಯ ಅಣಕು ಫಲಿತಾಂಶ (Mock Result) ಪ್ರಕಟವಾಗಲಿದೆ. ಇದಾದ ಬಳಿಕ ಅಭ್ಯರ್ಥಿಗಳಿಗೆ ತಮ್ಮ ಆಯ್ಕೆಗಳನ್ನು ಬದಲಾಯಿಸಲು, ಹೊಸದಾಗಿ ಸೇರಿಸಲು ಅಥವಾ ಅನಗತ್ಯ ಆಯ್ಕೆಗಳನ್ನು ತೆಗೆದುಹಾಕಲು ಜುಲೈ 27 ರವರೆಗೆ ಕಾಲಾವಕಾಶ ಇರಲಿದೆ. ತದನಂತರ ಅಂದೇ (ಜುಲೈ 27) ಸಂಜೆ 6 ಗಂಟೆಗೆ ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆಯ ಫಲಿತಾಂಶವನ್ನು ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಜುಲೈ 28 ರಿಂದ 31 ರ ಒಳಗೆ ತಮ್ಮ ಆದ್ಯತೆಯ ಚಾಯ್ಸ್ಗಳನ್ನು (Choices) ದಾಖಲಿಸಬೇಕಿರುತ್ತದೆ. ಇದರಲ್ಲಿ ಚಾಯ್ಸ್-1 ಮತ್ತು ಚಾಯ್ಸ್-2 ಆಯ್ದುಕೊಂಡ ಅಭ್ಯರ್ಥಿಗಳು ಜುಲೈ 28 ರಿಂದ ಆಗಸ್ಟ್ 1 ರ ನಡುವೆ ಬ್ಯಾಂಕ್ ಚಲನ್ ಡೌನ್ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಬೇಕಾಗುತ್ತದೆ. ಇನ್ನು ಚಾಯ್ಸ್-1 ಅಂತಿಮಗೊಳಿಸಿದ ವಿದ್ಯಾರ್ಥಿಗಳು ನಿಗದಿತ ಶುಲ್ಕ ಪಾವತಿಸಿ, ಆಗಸ್ಟ್ 4 ರ ಒಳಗಾಗಿ ತಮಗೆ ಹಂಚಿಕೆಯಾಗಿರುವ ಕಾಲೇಜುಗಳಿಗೆ ಭೇಟಿ ನೀಡಿ ಪ್ರವೇಶಾತಿ ವರದಿ ಮಾಡಿಕೊಳ್ಳಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.

Join WhatsApp

Join Now

Join Telegram

Join Now