ದಾವಣಗೆರೆ. ಆಗಸ್ಟ್ 14: ಆಗಸ್ಟ್ 17 ರಿಂದ ಪ್ರತಿ ಭಾನುವಾರ, ರಜಾದಿನಗಳಂದು ದಾವಣಗೆರೆಯಿಂದ ಜೋಗ-ಸಿಗಂದೂರು ಮತ್ತು ಅಂಜನಾದ್ರಿಬೆಟ್ಟ-ಹಂಪಿ-ತುಂಗಾಭದ್ರಾ ಡ್ಯಾಂ ಹಾಗೂ ಇಂಡಗುಂಜಿ-ಅಪ್ಸರಕೊಂಡ ವಾಟರ್ ಫಾಲ್ಸ್-ಇಕೋಬೀಚ್‍ಗೆ ದಾವಣಗೆರೆ ಕೆಎಸ್‍ಆರ್‍ಟಿಸಿಯಿಂದ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆ ಪ್ರಾರಂಭಿಸಲಾಗಿದೆ.
ದಾವಣಗೆರೆ, ಸಿಂಗದೂರು, ಇಕ್ಕೇರಿಕೋಟೆ, ವರದಮೂಲ, ಜೋಗಫಾಲ್ಸ್,ಗೆ 2 ಬದಿ ಸೇರಿ ರೂ.600, ಮಕ್ಕಳಿಗೆ ರೂ.460, ಇರುತ್ತದೆ.
ದಾವಣಗೆರೆ, ಅಂಜನಾದ್ರಿಬೆಟ್ಟ, ಹಂಪಿ, ತುಂಗಾಭದ್ರಾ ಡ್ಯಾಂಗೆ 2 ಬದಿ ಸೇರಿ ರೂ.500, ಮಕ್ಕಳಿಗೆ ರೂ.475 ಇರುತ್ತದೆ. ದಾವಣಗೆರೆಯಿಂದ ಹೊರಟು ಇಡಗುಂಜಿ, ಅಪ್ಸರಕೊಂಡ ವಾಟರ್ ಫಾಲ್ಸ್, ಇಕೋಬೀಚ್, ಬ್ಯಾಕ್ ವಾಟರ್ ಬೋಟಿಂಗ್‍ಗೆ 2 ಬದಿ ಸೇರಿ ರೂ.685, ಮಕ್ಕಳಿಗೆ ರೂ.515 ಇರುತ್ತದೆ. ಮುಂಗಡ ಬುಕ್ಕಿಂಗ್ ಕೌಂಟರ್‍ಗಳಲ್ಲಿ ಬುಕ್ಕಿಂಗ್ ಮಾಡಲು ksrtc.karnataka.gov.in ಸೌಲಭ್ಯ ಪಡೆಯಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ್.ಎಫ್ ಬಸಾಪುರ ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















